ಸಂದೇಹ ಎನ್ನುವುದು ಒಂದು ಖಾಯಿಲೆ ಇದ್ದ ಹಾಗೆ. ಇದು ವಾಸಿಯಾಗದ ಕಾಯಿಲೆ, ಯಾವುದೇ ಔಷಧದಿಂದ ಅನುಮಾನವನ್ನು ಗುಣಪಡಿಸಲು ಸಾಧ್ಯವಿಲ್ಲ, ಅದು ಮನಸ್ಸನ್ನು ಸುಡುತ್ತದೆ. ಆ ಕಾಯಿಲೆ ಇರುವವರ ಜೊತೆಗೆ ಇತರರೂ ಬಲಿಯಾಗಬೇಕಾಗುತ್ತದೆ. ನಿದ್ದೆ ಮಾಡಲು ಬಿಡುವುದಿಲ್ಲ, ಸರಿಯಾಗಿ ತಿನ್ನಲು ಬಿಡುವುದಿಲ್ಲ, ಯಾವುದೇ ಕೆಲಸಕ್ಕೂ ಅಡ್ಡಿಪಡಿಸುತ್ತದೆ, ಅದಕ್ಕೇ ಆ ವಿಚಿತ್ರವಾದ ರೋಗ ತುಂಬಾ ಅಪಾಯಕಾರಿ ಎನ್ನುತ್ತಾರೆ. ಅದರಲ್ಲೂ ದಾಂಪತ್ಯ ಜೀವನದಲ್ಲಿ ಅನುಮಾನದ ಕಾಯಿಲೆ ಇದ್ದರೆ, ಅದು ಪ್ರಾಣವನ್ನೇ ಬಲಿ ಪಡೆದುಕೊಳ್ಳಬಹುದು. ನಿಜಾಮಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ.
ಸೈಯದ್ ಖಲೀಮ್ ಅವರ ಮಗಳು ಅನೀಸ್ ಫಾತಿಮಾ ಅವರು ಸೈಯದ್ ಸುಲ್ತಾನ್ ಅವರೊಡನೆ 2013 ರಲ್ಲಿ ಮದುವೆಯಾದರು. ಸುಲ್ತಾನ್ ಫಾತಿಮಾ ದಂಪತಿಗೆ ಒಬ್ಬ ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಹೀಗೆ ಜೀವನ ಸಾಗುವಾಗ, ಪತಿಗೆ ಪತ್ನಿ ಮೇಲೆ ಅನುಮಾನ ಶುರುವಾಯಿತು. ಆತಫಾತಿಮಾಗೆ ಕಿರುಕುಳ ನೀಡಲು ಶುರು ಮಾಡಿದ. ಇಬ್ಬರ ನಡುವೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಹೆಚ್ಚುತ್ತಿರುವ ಕಿರುಕುಳದಿಂದಾಗಿ ಫಾತಿಮಾ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದರು.
ಅಷ್ಟರಲ್ಲಿ ಸೈಯದ್ ಫಾತಿಮಾ ಇದ್ದ ಕೋಣೆಗೆ ಹೋಗಿ ಫಾತಿಮಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ಚಿಕ್ಕಪ್ಪನಿಗೆ ಕರೆ ಮಾಡಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಸೈಯದ್ ಖಲೀಂ ಅವರ ಮನೆಗೆ ಹೋದಾಗ ಫಾತಿಮಾ ಇನ್ನಿಲ್ಲ ಎನ್ನುವ ವಿಚಾರ ಗೊತ್ತಾಗಿದೆ. ಫಾತಿಮಾ ತಂದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳನ್ನು ನೋಡಿ ಅನುಮಾನದಿಂದ ಅಳಿಯನೇ ಕೊಂದಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.