bautiful

ಸೀರೆ ತೊಟ್ಟ ಮೇಲೆ ಹುಡುಗಿಯರ ಸೌಂದರ್ಯ ದ್ವಿಗುಣಿತವಾಗುತ್ತದೆ ಏಕೆ..? ಏನಿದರ ಹಿಂದಿನ ರಹಸ್ಯ..?

Girls Matter/ಹೆಣ್ಣಿನ ವಿಷಯ

ಸೀರೆ ಭಾರತದಲ್ಲಿ ಪುರಾತನ ಕಾಲದಿಂದಲೂ ಮಹಿಳೆಯರು ತೊಟ್ಟುಕೊಳ್ಳುವ ಪ್ರಮುಖ ಉಡುಪಾಗಿದೆ. ಈಗಿನ ಭಾರತದ ಹುಡುಗಿಯರು ಎಷ್ಟೇ ಬೆಲೆ ಬಾಳುವ ತರತರದ ವಿಭಿನ್ನ ರೀತಿಯ ವೆಸ್ಟರ್ನ್ ಉಡುಪುಗಳಿಗೆ ಮರುಳಾದರೂ ಸೀರೆಯ ವಿಷಯ ಬಂದಾಗ ಮಾತ್ರ ಈ ಎಲ್ಲ ಡ್ರೆಸ್ ಗಳು ಅಪ್ಪಚ್ಚಿಯಾಗುವವು, ಇದು ಸತ್ಯ. ಸರ್ವ ಸಾಮಾನ್ಯವಾಗಿ ಸೀರೆ ತೊಟ್ಟ ನಂತರ ಹುಡುಗಿಯರ ಸೌಂದರ್ಯದಲ್ಲಿ ಅದ್ಭುತವಾದ ಬದಲಾವಣೆಗಳು ಗೋಚರಿಸಿರುವದು ಎಲ್ಲರಿಗೂ ಬಂದ ಅನುಭವವೇ ಆಗಿದೆ.

ಅದಕ್ಕಾಗಿಯೇ ಮದುವೆಯಾಗುವ ಹುಡುಗನಿಗೆ, ಹುಡುಗಿಯನ್ನು ಏನಾದರೂ ತೋರಿಸುವದಿದ್ದರೆ ಅಥವಾ ಆತನಿಗೆ ಹುಡುಗಿಯ ಫೋಟೋ ಕಳಿಸುವದೇನಾದರೂ ಇದ್ದರೆ ಮನೆಯವರು ಸೀರೆಯನ್ನು ತೊಟ್ಟ ಫೋಟೋವನ್ನೇ ಕಳಿಸುತ್ತಾರೆ. ಹುಡುಗಿ ಹೇಗೆ ಇರಲಿ ಎತ್ತರ, ಕುಳ್ಳ, ಬೆಳ್ಳಗೆ, ಕಪ್ಪು, ತೆಳ್ಳಗೆ, ದಪ್ಪ ಹೇಗಿದ್ದರೂ ಮದುವೆಯಾದ ನಂತರ ಸಹಿತ ಈ ಹುಡುಗಿಯರ ಸೌಂದರ್ಯದಲ್ಲಿ ತುಂಬಾ ವೃದ್ಧಿಯಾಗುತ್ತದೆ, ಇದರ ಹಿಂದೆಯೂ ಸೀರೆಯೇ ಕಾರಣವಾಗಿದೆ. ಹಾಗಾದರೆ ಸೀರೆಯ ಮೇಲೆ ಇಷ್ಟು ಸುಂದರವಾಗಿ ಕಾಣುತ್ತಾರೆಂದರೆ ಇದರ ಹಿಂದಿನ ರಹಸ್ಯವೇನು ಇರಬಹುದು ಅಂತೀರಾ? ಮುಂದೆ ಓದಿಕೊಳ್ಳುತ್ತ ಹೋಗಿ ಗೊತ್ತಾಗುತ್ತದೆ.

ಸೀರೆಯುಟ್ಟ ನಂತರ ಹುಡುಗಿಯ ಮುಖದ ಮೇಲಿನ ಭಾವದಲ್ಲಿ ಪ್ರೌಢತ್ವ ಗೋಚರಿಸುತ್ತದೆ. ಸೀರೆಯಲ್ಲಿ ಶರೀರದ ಅವಯವಗಳು ನೋಡುಗರಿಗೆ ಪ್ರಮಾಣಬದ್ಧವಾಗಿ ಗೋಚರಿಸುತ್ತವೆ. ಇದು ಆಕೆಯ ಆಕರ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವದು. ಸೀರೆಯನ್ನು ಧರಿಸಿದಾಗ ಹುಡುಗಿಯ ಶಾಲೀನತೆಯಲ್ಲಿ ನಿಷ್ಕಲ್ಮಶವಾದ ಭಾವ ಎದ್ದು ಕಾಣುತ್ತದೆ. ಸೀರೆಯನ್ನುಟ್ಟಾಗ ಹೆಚ್ಚಾಗಿ ಹುಡುಗಿಯರು ಉದ್ದವಾದ ಜಡೆಯನ್ನು ಬಿಡುವದರಿಂದ ಅಥವಾ ಕೇಶ ರಾಶಿಯನ್ನು ಸ್ವಚ್ಛಂದವಾಗಿ, ಮುಕ್ತವಾಗಿ ಬಿಡುವದರಿಂದಲೂ ಸೌಂದರ್ಯಕ್ಕೆ ಮೆರಗು ನೀಡುತ್ತದೆ. ಇನ್ನೂ ದಿನಂಪ್ರತಿ ತೊಡುವ ಬಟ್ಟೆಗಳಿಗೆ ಬದಲಾಗಿ ಯಾವತ್ತಾದರೂ ಅಥವಾ ವಿಶೇಷ ಕಾರ್ಯಕ್ರಮವಿದ್ದಾಗ ಮಾತ್ರ ಸೀರೆ ತೊಡುವದರಿಂದ ಮುಖದ ಮೇಲಿನ ಮೇಕಪ್ ಸಹಿತ ವಿಶೇಷ ಗಮನಹರಿಸಿ ಮಾಡಿಕೊಂಡಿರುತ್ತಾರೆ.

ಇನ್ನು ಇವುಗಳೆಲ್ಲದರ ಹೊರತಾಗಿ ಕೈಯಲ್ಲಿ ತೊಟ್ಟ ಹಸಿರು ಅಥವಾ ಬೇರೆ ಚೆಂದದ ಬಳೆಗಳು ಎದ್ದು ಬೀಳುದರಿಂದಲೂ ಸೌಂದರ್ಯ ಮತ್ತಷ್ಟು ಖುಲಾಯಿಸುವದು. ಇನ್ನುಳಿದದ್ದು ನೆಕ್ಲೆಸ್ ಅಥವಾ ಯಾವುದೇ ಒಪ್ಪುವಂಥ ಚಿನ್ನದ ಸರ ಧರಿಸಿದಾಗ ಸುಂದರತೆ ಇನ್ನಷ್ಟು ದ್ವಿಗಣಿತರಾಗುವದರಲ್ಲಿ ಸಂಶಯವೇ ಇಲ್ಲ. ಈ ಎಲ್ಲ ಕಾರಣಗಳಿಂದ ಹುಡುಗಿಯು ಅಥವಾ ಮಹಿಳೆ ಸೀರೆಯಲ್ಲಿ ಪರಿಪೂರ್ಣವಾಗಿ ಕಾಣುತ್ತಾಳೆ. ಎಲ್ಲಕ್ಕೂ ಮುಖ್ಯವಾಗಿ ಸೀರೆಯಿಂದ ಸಂಸ್ಕಾರಪೂರ್ಣ ಮಹಿಳೆ ಎನಿಸುವಳು. ಸಭ್ಯತೆಯೂ ಸೀರೆಯಲ್ಲಿ ತುಂಬಿ ಹರಿಯುವದು. ನೋಡುಗರಲ್ಲಿ ಮಹಿಳೆಯ ಬಗ್ಗೆ ಅನ್ನಿ ಅಥವಾ ಯುವತಿಯ ಬಗ್ಗೆ ಮನದಲ್ಲಿ ಗೌರವದ ಭಾವನೆ ತನ್ನಂತಾನೇ ನಿರ್ಮಾಣವಾಗುವದು.

ಇನ್ನು ಸೀರೆಯನ್ನು ಹೇಗೆ ತೊಡುವದರಿಂದ ಚೆನ್ನಾಗಿ ಕಾಣುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಸೀರೆಯನ್ನು ತೊಡುವ ಪದ್ಧತಿ, ನಡಿಗೆ ಇದರಿಂದಲೂ ಮಹಿಳೆಯ ವ್ಯಕ್ತಿಮತ್ವ ಗೋಚರವಾಗುತ್ತದೆ. ಜೊತೆಗೆ ಸೀರೆಯನ್ನು ತೊಡುವದರಿಂದ ನಮ್ಮ ಅನಾದಿಕಾಲದಿಂದಲೂ ಬಂದ ವೈಭವದ ಪರಂಪರೆಯನ್ನು ರಕ್ಷಿಸಲು ಗರ್ವಪಟ್ಟುಕೊಳ್ಳಬೇಕು.

ನಾವು ಆಧುನಿಕ ಜಗತ್ತಿನ ವೇಗದ ಜೀವನ ಶೈಲಿಯಿಂದಾಗಿ ನಮ್ಮ ಸಂಸ್ಕಾರಗಳನ್ನು ಒಂದೊಂದಾಗಿ ಡಿಲೀಟ್ ಮಾಡುತ್ತ ಎಷ್ಟೇ ಮುಂದೆ ಹೋದರೂ ನಮ್ಮ ಉಡುಪುಗಳ ಶ್ರೀಮಂತ ಪರಂಪರೆಯನ್ನು ನಾವೆಂದು ಮರೆಯುವ ಹಾಗಿಲ್ಲ. ಎಲ್ಲವನ್ನು ಮರೆತರೂ ಭಾರತೀಯ ಮಹಿಳೆಯರು ಸೀರೆಯನ್ನು ಮಾತ್ರ ಮರೆಯಲು ಸಾಧ್ಯವಿಲ್ಲ. ಯುವತಿಯ ಸೌಂದರ್ಯಕ್ಕೆ ಪರಿಪೂರ್ಣತೆ ಸಿಗುವದೇ ಸೀರೆಯನ್ನು ತೊಟ್ಟಾಗ ಮಾತ್ರ. ಇದನ್ನು ಮಾತ್ರ ಯಾವ ಮಹಿಳೆಯೂ ಅಲ್ಲಗಳೆಯುವ ಹಾಗಿಲ್ಲ, ಮತ್ತು ಪುರುಷನೂ ಸಹಿತ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮದುವೆಯಾಗದಿದ್ದರೂ ತುಮಕೂರಿನಲ್ಲಿ ಇಬ್ಬರನ್ನು ಅಕ್ಕ ಪಕ್ಕ ಸಮಾಧಿ ಮಾಡಿದ ಗ್ರಾಮಸ್ಥರು.. ಕಾರಣ ಕೇಳಿದರೆ ಕಣ್ಣೀರು ಜಾರುತ್ತದೆ..