basavalinga-shri-of-bandemath

ಬಂಡೆಮಠದ ಬಸವಲಿಂಗ ಶ್ರೀಗಳು ಹನಿಟ್ರ್ಯಾಪ್‌ ಗೆ ಒಳಗಾಗಿದ್ದರಾ..?

Girls Matter/ಹೆಣ್ಣಿನ ವಿಷಯ

ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದಲ್ಲಿನ ಬಸವಲಿಂಗ ಶ್ರೀಗಳ ಸೂಸೈಡ್ ಗೆ ಮಹಾ ತಿರುವೊಂದು ಸಿಕ್ಕಿದೆ. ಬಂಡೆಮಠದ ಸ್ವಾಮೀಜಿ, ಮಹಿಳೆಯರ ಜೊತೆಗೆ ವೀಡಿಯೋ ಕಾಲ್ನಿಲ್ಲಿ ಮಾತನಾಡಿದ್ದಾರೆ. ಈ ವೀಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಾಲ್ಕು ದಿನಗಳ ಹಿಂದೆ ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಶ್ರೀಗಳು ಡೆತ್‌ ನೋಟ್‌ ಕೂಡ ಬರೆದಿದ್ದರು. ಈ ಡೆತ್‌ ನೋಟ್‌ ನಲ್ಲಿ ಹಲವರ ಹೆಸರನ್ನು ಉಲ್ಲೇಖಿಸಿರುವುದು ತಿಳಿದು ಬಂದಿತ್ತು. ಹೀಗಾಗಿ ಇವರ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿಕೊಂಡಿತ್ತು.

ಸ್ವಾಮೀಜಿಗಳ ಸಾವಿಗೆ ಬೆದರಿಕೆ ಕಾರಣವಿರಬಹುದು ಎಂಬ ದಿಕ್ಕಿನಿಂದ ತನಿಖೆಯೂ ಆರಂಬವಾಗಿತ್ತು. ಶ್ರೀಗಳಯ ನೇಣಿಗೆ ಶರಣಾಗುವ ಮುನ್ನ ಇಬ್ಬರನ್ನು ಭೇಟಿಯಾಗಿದ್ದರು. ಅವರ ಜೊತೆಗೆ ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು. ಹೀಗಾಗಿ ಆ ಇಬ್ಬರ ವ್ಯಕ್ತಿ ಮೇಲೆ ಅನುಮಾನ ಮೂಡಿತ್ತು. ಇನ್ನು ಸ್ವಾಮೀಜಿಗೆ ಹನಿಟ್ರ್ಯಾಪ್‌ ಮಾಡಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪುಷ್ಠಿ ಎಂಬಂತೆ ಇದೀಗ ಸ್ವಾಮೀಜಿ ಅವರು ವೀಡಿಯೋ ಕಾಲ್‌ ನಲ್ಲಿ ಮಾತನಾಡಿದ ವೀಡಿಯೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕಳೆದ ಆರು ತಿ<ಗಳೀನಿಂದ ಸ್ವಾಮೀಝಿ ಆ ಮಹಿಳೆ ಜೊತೆಗೆ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಇನ್ನು ವೀಡಿಯೋ ಕಾಲ್‌ ನಲ್ಲಿ ಅಶ್ಲೀಲವಾಗಿ ಮಾತನಾಡಲಾಗಿದೆ. ತಮಗೆ ಗೊತ್ತಿಲ್ಲದ ಮಹಿಳೆ ಜೊತೆಗೆ ಸ್ವಾಮೀಜಿ ಚಾಟಿಂಗ್‌ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಡೆತ್‌ ನೋಟ್‌ ನಲ್ಲೂ ಸ್ವಾಮೀಜಿ ತಿಳಿಸಿದ್ದರು. ಇದೀಗ ಈ ವೀಡಿಯೋ ಮತ್ತಷ್ಟು ಸಂಚಲನ ಮೂಡಿಸಿದೆ. ಕೆಲವರು ಸ್ವಾಮೀಜಿಯನ್ನು ಬೈಯುತ್ತಿದ್ದಾರೆ. ಮತ್ತೂ ಕೆಲವರು ಸ್ವಾಮೀಜಿ ಬಗ್ಗೆ ಕನಿಕರ ತೋರಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಎಲ್ಲರ ಹೆಂ-ಡತಿಯರು ತಮ್ಮ ಪತಿಯಿಂದ ಮರೆಮಾಚಲಾಗುವ 5 ವಿಚಾರಗಳು ಯಾವ್ಯಾವು ಗೊತ್ತೇ?? ಇವುಗಳನ್ನು ಜೀವನಪೂರ್ತಿ ಹೇಳುವುದಿಲ್ಲ.