ಸದ್ಯ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬ್ಯಾಂಕ್ಗಳು Bank Loan ವಿಚಾರವಾಗಿ ರೈತರ ಆಸ್ತಿ ಜಪ್ತಿ ಮಾಡುವುದು ನೋಟೀಸ್ ಜಾರಿ ಮಾಡುವ ಕೆಲಸ ಮಾಡುತ್ತಿದ್ದು ಇದಕ್ಕೆ ಅಂತ್ಯ ಹಾಡಲು ಕಾನೂನಿನ ತಿದ್ದುಪಡಿ ತಂದು ಅವರ ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧ ಮಾಡುವುದಾಗಿ ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರವರು ಘೋಷಿಸಿದರು.
ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಆಯೋಜಿಸಿದ್ದ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 30 ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬದ್ಧತೆಯಿಂದ ಕೆಲಸ ಮಾಡುವ ಕ್ರಿಯಾಶಕ್ತಿಯೇ ಭಕ್ತಿಯ ಶಕ್ತಿ.
ಗುರುಗಳಿಂದ ಪ್ರೇರಣೆ ಪಡೆದು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಪ್ರಯತ್ನ ಮಾಡಲಾಗುತ್ತಿದ್ಫು ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರ ಮಕ್ಕಳಿಗೆ ವಿದ್ಯಾನಿಧಿ ರೂಪಿಸಲಾಯಿತು. 14 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿಕಾರ ಮಕ್ಕಳಗೆ ನೇಕಾರರಿಗೆ ಮೀನುಗಾರರಿಗೆ ಆಟೋ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಯೋಜನೆ ವಿಸ್ತರಣೆಯಾಗಿದ್ದು ಶಿಕ್ಷಣದಿಂದ ಉದ್ಯೋಗ ನೀಡಬಹುದೆಂದು ಯೋಜನೆ ರೂಪಿಸಿದೆ.
ರಾಜ್ಯದ ಮಕ್ಕಳು ಹಣದ ಕೊರತೆಯಿಂದ ಓದು ನಿಲ್ಲಿಸಬಾರದು ಅವರ ಭವಿಷ್ಯ ಉಜ್ವಲವಾಗಿ ನಿರ್ಮಾಣವಾಗಲಿ ಎಂದು ಈ ಕೆಲಸ ಮಾಡಲಾಗಿದ್ದು ನೀರಾವರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. 3 ಲಕ್ಷ ದವರೆಗೆ ಬಡ್ಡಿರಹಿತ ಸಾಲ ನೀಡಿದರೂ ಅತಿವೃಷ್ಟಿ ಅನಾವೃಷ್ಟಿ ಕಾರಣದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದು ಈ ವರ್ಷ ಉತ್ತಮ ಮಳೆಯಾಗಿದೆ. ಕೆರೆ ಕಟ್ಟೆ ತುಂಬಿ ನೀರು ಇನ್ನು 2-3 ವರ್ಷಗಳಿಗೆ ತೊಂದರೆ ಇಲ್ಲ. ಕೆಲವೆಡೆ ಪ್ರವಾಹವಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಅಂದಿನ ಗುರುಗಳು ಬದಲಾದ ಕಾಲಕ್ಕೆ ಸಮಾಜ ಭಕ್ತಾದಿಗಳಿಗೆ ನ್ಯಾಯ ಒದಗಿಸುವ ಗುರುತರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ಭಕ್ತಾದಿಗಳು ರೈತಾಪಿ ವರ್ಗ ಎಂದು ಮನಗಂಡು ಅವರ ದುಡಿಮೆಗೆ ಗೌರವ ಬೆಲೆ ಬರಬೇಕೆಂದು ರೈತರ ಬೆವರಿಗೆ ಬೆಲೆ ಬರುವಂಥ ಕೆಲಸ ಮಾಡುತ್ತಿದ್ದಾರೆ.
ಮಧ್ಯ ಕರ್ನಾಟಕದಲ್ಲಿ ನೀರಿನಿಂದ ವಂಚಿತವಾಗಿದ್ದು ಕೆರೆಗಳು ತುಂಬದೆ ನೀರಾವರಿ ಇಲ್ಲದಿದ್ದರೂ ಫಲವತ್ತಾದ ಜಮೀನಿದೆ ಎನ್ನುವುದನ್ನು ಮನಗಂಡು ಸುಮಾರು 25 ವರ್ಷಗಳಿಂದ ಕೆರೆಗಳಿಗೆ ನೀರು ನೀರಾವರಿ ಯೋಜನೆಗಳಿಗೆ ಮಹತ್ವ ನೀಡಲು ಗುರುಗಳು ಪ್ರಾರಂಭಿಸಿದ್ದು ಗುರುಗಳ ಇಚ್ಛಾಶಕ್ತಿ ಹಾಗೂ ಅವರ ಗುರುತ್ವದಲ್ಲಿರುವ ಅದಮ್ಯ ಶಕ್ತಿ ಸರ್ಕಾರವನ್ನು ಈ ಏತ ನೀರಾವರಿ ಯೋಜನೆಗಳನ್ನು ಮಾಡಲು ಪ್ರೇರೇಪಿಸಿದ್ದಾರೆ.
ಇನ್ನು ಗುರುಗಳ ಇಚ್ಛಾಶಕ್ತಿಗೆ ಕ್ರಿಯಾ ಶಕ್ತಿಯನ್ನು ನೀಡಿದವರು ಬಿ.ಎಸ್.ಯಡಿಯೂರಪ್ಪ ಅವರು. ಇದು ಸುಲಭದ ಮಾತಲ್ಲ. ನಾಯಕನಿಗೆ ಇಚ್ಛಾಶಕ್ತಿ ಇದ್ದರೆ ಏನೆಲ್ಲಾ ಮಾಡಲು ಸಾಧ್ಯವಿದೆ ಎಂದು ನಿರೂಪಿಸಿದ್ದು ಎಂ.ಬಿ.ಪಾಟೀಲ್ ಮತ್ತು ನಾವು ರಾಜ್ಯದ ವಿಚಾರ ಬಂದಾಗ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ದಿಕ್ಕುಗಳಲ್ಲಿಯೂ ಪಾದಯಾತ್ರೆ ಮಾಡಿದ್ದು ಅಲ್ಲಿ ಒಂದು ಯೋಜನೆ ಸಿದ್ಧವಾಗಿ ಕಾರ್ಯರೂಪಕ್ಕೆ ಬಂದಿದೆ ಎಂದು ವಿವರಿಸಿದರು.