ಮೊದಲ ಶೋನಲ್ಲೆ ಹೊರಬಿತ್ತು ಬನಾರಸ್ ಚಿತ್ರದ ರಿವ್ವ್ಯುವ್,ಜಮೀರ್ ಖಾನ್ ರ ಮಗ, ಜೈದ್ ಖಾನ್ ಈ ಚಿತ್ರದ ಮೂಲಕ ಸ್ಟ್ಯಾಂಡ್ ಆಗ್ತಾರಾ ?? ಪೂರ್ತಿ ಸತ್ಯ ಇಲ್ಲಿದೆ ನೋಡಿ !!

ಸ್ನೇಹಿತರೆ, ಬೆಂಗಳೂರಿನ ಚಾಮರಾಜಪೇಟೆ ಎಂಎಲ್ಎ ಜಮೀರ್ ಅಹಮದ್ ಖಾನ್ ಅವರ ಪುತ್ರ ಅವರ ಝೈದ್ ಖಾನ್ರವರ ಬನಾರಸ್ ಸಿನಿಮಾ ಇಂದು ಬೆಳಗ್ಗೆ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದರೆ ತಪ್ಪಾಗಲಾರದು.

ಹೌದು ಟೈಮ್ ಟ್ರಾವೆಲಿಂಗ್ನಂತಹ ವಿಭಿನ್ನ ಶೈಲಿಯ ಕಥಾಂದರವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದಂತಹ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿತ್ತು? ಎಂಬುದನ್ನು ತಿಳಿಸಲಿದ್ದೇವೆ ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಒಂದು ಒಳ್ಳೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಡಬೇಕು ಎಂಬ ಕನಸನ್ನು ಹೊತ್ತಿದ್ದಂತಹ ನಟ ಝೈದ್ ಖಾನ್ ಅವರ ಕನಸಿಗೆ ಸಿನಿಮಾದ ಯಶಸ್ಸು ರೆಕ್ಕೆಗಳಾಗಿವೆ ಎಂದರೆ ತಪ್ಪಾಗಲಾರದು. ಸಿನಿಮಾದಲ್ಲಿನ ಮಾಯಾ ಗಂಗೆ ಹಾಡು ಸಿನಿಮಾ ಬಿಡುಗಡೆಗು ಮುನ್ನ ಎಲ್ಲಿಲ್ಲದಂತಹ ಹವಾ ಸೃಷ್ಟಿ ಮಾಡಿತ್ತು.

Banaras | ബനാറസ് (2022) - Mallu Release | Watch Malayalam Full Movies

ಅದರಂತೆ ನಟಿ ಸೋನಲ್ ಝೈದ್ ಖಾನ್ ಅವರಿಗೆ ಹೇಳಿ ಮಾಡಿಸಿದಂತಹ ಜೋಡಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನು ಸಿನಿಮಾದಲ್ಲಿ ಬಹು ದೊಡ್ಡ ಮಟ್ಟದ ತಾರಾ ಬಳಗವೇ ಇದ್ದು, ಝೈದ್ ಖಾನ್ ನಾಯಕನಟನಾಗಿ ಕಾಣಿಸಿಕೊಂಡರೆ..

ನಟಿ ಸೋನಲ್, ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಚುತ್ ಕುಮಾರ್ ಇಂತಿ ಮೊದಲಾದವರು ಸಿನಿಮಾದಲ್ಲಿ ಬಹಳ ಹೈಲೈಟ್ ಆಗಿ ಕಾಣಿಸಿಕೊಂಡಿದ್ದಾರೆ. ಎನ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಂಡಂತಹ ಬನಾರಸ್ ಸಿನಿಮಾಗೆ ಅಜಿನೀಶ್ ಬಿ ಲೋಕನಾಥ್ ಅವರ ಅದ್ಭುತ ಸಂಗೀತ ಸಂಯೋಜನೆ ಇದ್ದು.

ನಿರ್ದೇಶಕ ಜಯತೀರ್ಥ ಅವರು ಟೈಮ್ ಟ್ರಾವೆಲಿಂಗ್ ನಲ್ಲಿ ನಟ ಎಂತಹ ಕಷ್ಟದ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತಾನೆ ಹಾಗೂ ಅದರಿಂದ ಹೇಗೆ ಹೊರ ಬರುತ್ತಾನೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಕನ್ನಡ ತೆಲುಗು ತಮಿಳು ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ರಿಲೀಸ್ ಆಗಿದ್ದು..

ಮೊದಲ ದಿನವೇ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದಂತಹ ಪ್ರೇಕ್ಷಕರ ವಿಮರ್ಶೆ ಹೀಗಿದೆ: ತಾಯಿಯನ್ನು ಕಳೆದುಕೊಂಡ ಸಿದ್ದಾರ್ಥ ಸಿಂಹಗೆ (ಝೈದ್ ಖಾನ್) ತಂದೆ ಅಜಯ್ ಸಿಂಹಾನೆ ಜಗತ್ತು. ಈ ಜಗತ್ತಿಗೆ ಧನಿ (ಸೋನಾಲ್) ಎಂಟ್ರಿ ಆಗುತ್ತದೆ.

ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕ್ರಮ ಖಚಿತ: ಜಮೀರ್ ಅಹ್ಮದ್ ಖಾನ್ | Prajavani

ಆಗ ಸಿದ್ದಾರ್ಥ ಜಗತ್ತು ಸಂಪೂರ್ಣ ಬದಲಾಗಿ ಆಕೆಯ ಎಂಟ್ರಿ ಬಳಿಕ ಸಿದ್ದಾರ್ಥ್ ಹೇಗೆ ಟೈಮ್ ಟ್ರಾವೆಲಿಂಗ್ ಎಂಬ ಚಕ್ರವ್ಯೂಹದ ಒಳಗೆ ಹೋಗುತ್ತಾನೆ ಎಂಬುದು ಕಥೆಯ ಬಹು ಮುಖ್ಯ ಸಿದ್ದಾಂತವಾಗಿದೆ. ಇದನ್ನು ನಿರ್ದೇಶಕ ಜಯತೀರ್ಥ ಅವರು ಬಹಳ ಭಿನ್ನ ರೀತಿಯಲ್ಲಿ ಚಿತ್ರಕಥೆಯನ್ನು ಎಣದಿದ್ದು.

ಮೊದಲ ದಿನವೇ ಅತ್ಯದ್ಭುತ ರೆಸ್ಪಾನ್ಸ್ ಪಡೆಯುವ ಮೂಲಕ ಗಗನದೆತ್ತರಕ್ಕೆ ಶಿಳ್ಳೆ ಚಪ್ಪಾಳೆ ಕೇಕೆ ಸೌಂಡ್ ಕೇಳಿಸುತ್ತಿದೆ. ಇನ್ನು ಸಿನಿಮಾದಲ್ಲಿ ಎಲ್ಲಿಯೂ ಅತಿಯಾದ ಬಿಲ್ಡಪ್ ಕೊಡದೆ, ಚಿತ್ರಕ್ಕೆ ತಕ್ಕಂತೆ ಹೀರೋ ಸ್ಟೈಲ್, ಲುಕ್ ಕಡೆಗೆ ಗಮನ ಕೊಡಲಾಗಿದೆ.

ಟೈಮ್ ಟ್ರಾವೆಲಿಂಗ್ ಜೊತೆಗೆ ವಿಭಿನ್ನ ಪ್ರೇಮ ಕಥೆ ಇರುವ ಸಿನಿಮಾ ಇದಾಗಿದ್ದು, ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕೂಡ ಮಾಯಗಂಗೆ ಮತ್ತು ಬೆಳಕಿನ ಕವಿತೆ ಹಾಡು, ಮನಸ್ಸಿಗೆ ಮುದ ನೀಡುತ್ತದೆ. ಅಷ್ಟೇ ಅಲ್ಲದೆ ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರ ಡೈಲಾಗ್ ಗಳನ್ನು ಮೀಮ್ ಮಾಡಿರುವುದು ಇನ್ನೂ ವಿಶೇಷವಾಗಿ ಕಂಡುಬಂದಿದೆ.

ಇದು ನಟ ಝೈದ್ ಅವರ ಮೊದಲ ಸಿನಿಮಾ ಅನ್ನಿಸದ ಮಟ್ಟಕ್ಕೆ ಅವರ ಅಭಿನಯ ಬಹಳ ಅತ್ಯದ್ಭುತವಾಗಿ ಮೂಡಿ ಬಂದಿದೆ. ಇತರೆ ಧರ್ಮದ ಹಾಗೂ ಇತರೆ ಭಾಷಿಗರ ಒಂದೊಳ್ಳೆ ಕನ್ನಡ ಸಿನಿಮಾ ತಯಾರಾಗಿದ್ದು. ಈ ಸಿನಿಮಾದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

You might also like

Comments are closed.