
ಬಾದಾಮಿ ಬನಶಂಕರಿ ಮೂಲ ವಿಗ್ರಹದ ಗರ್ಭಗೃಹ ಮಣ್ಣಿನಲ್ಲಿ ಹೂತು ಹೋಗಿದ್ದು ನಿಜಾನಾ??ಬಾದಾಮಿ ಎಂಬ ಊರಿನ ಹೆಸರು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದೇ ಬನಶಂಕರಿ ದೇವಾಲಯ ಭಾರತದಲ್ಲಿರುವ ಶಕ್ತಿ ಪೀಠಗಳಲ್ಲಿ ಬಾದಾಮಿಯ ಬನಶಂಕರಿ ದೇವಾಲಯವು ಕೂಡ ಒಂದಾಗಿದೆ ಬನಶಂಕರಿ ದೇವಿಯು ಬಾದಾಮಿಯ ಚೋಳಚಗುಡ್ಡ ಎಂಬ ಊರಿನಲ್ಲಿ ಇದೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ವಿಶ್ವ ಪ್ರಸಿದ್ಧ ಬಾದಾಮಿಯ ಗುಹೆಯಿಂದ.
ಕೇವಲ 8 ಕಿಲೋಮೀಟರ್ ದೂರದಲ್ಲಿ ಇದೆ ಬನಶಂಕರಿ ದೇವಸ್ಥಾನವು ಮಾತ ಪಾರ್ವತಿಯ ಅವತಾರವಾದ ಬನಶಂಕರಿ ಅಮ್ಮನಿಗೆ ಸಮರ್ಪಿತವಾ ಗಿದೆ ಅಗಸ್ತ್ಯ ಋಷಿಗಳು ಬನಶಂಕರಿಯನ್ನು ಬನಸಿರಿ ದೇವಿ ಎಂದು ಕರೆದರು ಬನ ಎಂದರೆ ಅರಣ್ಯ ಸಿರಿ ಎಂದರೆ ಸಂಪತ್ತು ಎಂದರ್ಥ ಚಾಣಕ್ಯರ ಆಳ್ವಿಕೆಯ ಕಾಲದಲ್ಲಿ ಬದಾಮಿಯು ಅವರ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಇವರು ಬನಶಂಕರಿ ದೇವಿಯನ್ನು.
ತಮ್ಮ ಆರಾಧ್ಯ ದೇವತೆ ಹಾಗೂ ಕುಲದೇವತೆಯಾಗಿ ಪೂಜಿಸುತ್ತಿದ್ದರು ಹಳೆಯ ಬನಶಂಕರಿ ದೇವಾಲಯದ ಗರ್ಭಗೃಹವು ಮಣ್ಣಿನಲ್ಲಿ ಹೂತು ಹೋಗಿದೆ ದೇವಾಲ ಯದ ಮುಂಭಾಗದಲ್ಲಿ ಹರಿದ್ರ ತೀರ್ಥ ಎಂದು ಕರೆಯಲ್ಪಡುವ ಒಂದು ದೊಡ್ಡ ಕೊಳವಿದೆ ಇದು ಮೂರು ಬದಿಯಲ್ಲಿ ಕಲ್ಲಿನ ಮಂಟಪಗಳಿಂದ ಸುತ್ತುವರೆದಿದೆ ಸ್ಕಂದ ಪುರಾಣದ ಪ್ರಕಾರ ನೂರಾರು ವರ್ಷಗಳ ಹಿಂದೆ ಮಳೆ ಆಗದೆ ಇದ್ದಾಗ ಭೂಮಿಯ ಮೇಲೆ ಘೋರ ದುರ್ಭಿಕ್ಷೆ ಉಂಟಾಗಲು.
ಸಕಲ ಕ್ರಿಯಾಕರ್ಮಗಳು ಲೋಪವಾದಾಗ ದೇವತೆ ಗಳು ನಿರಾಶರಾಗುತ್ತಾರೆ ಹಾಗೂ ಬ್ರಹ್ಮಾಂಡವೇ ತತ್ತರಿಸಿ ಹೋಗುತ್ತದೆ ಆಗ ಎಲ್ಲ ದೇವತೆಗಳು ಮತ್ತು ಪ್ರಜೆಗಳು ಸೇರಿ ಶಿವನನ್ನು ಕುರಿತು ತಪಸ್ಸನ್ನು ಮಾಡುತ್ತಾರೆ ಶಿವ ಬ್ರಹ್ಮ ವಿಷ್ಣು ಹಾಗೂ ಎಲ್ಲಾ ದೇವತೆ ಗಳು ಈಗಿರುವ ಬಾದಾಮಿ ಕ್ಷೇತ್ರಕ್ಕೆ ಬಂದು ಅಲ್ಲಿ ಬನಶಂಕರಿಯನ್ನು ಕುರಿತು ಅಲ್ಲಿ ಪ್ರಾರ್ಥನೆಯನ್ನು ಮಾಡಿ ಈ ಜಗತ್ತಿನ ಪರಿಸ್ಥಿತಿಗೆ ಕಾರಣವರಾದವರೇ ನೀವು.
ಈ ಕ್ಷೇತ್ರದಲ್ಲಿ ಮಳೆ ಇಲ್ಲದೆ ಯಗ್ನ ಯಾಗಾದಿಗಳು ನಿಂತು ಹೋಗಿದೆ ಜಗತ್ತಿನ ಜೀವವಾದ ಜಲವೇ ಇಲ್ಲದೆ ಬದುಕು ಕಷ್ಟವಾಗಿದೆ ಆದ್ದರಿಂದ ಈ ಜಗತ್ತಿಗೆ ಶಾಖ ನೀಡು ಜಲ ನೀರು ಕಾಪಾಡು ಮಳೆ ಸುರಿಸು ಎಲ್ಲ ಕರ್ಮಾದಿಗಳು ನಿರ್ವಿಘ್ನವಾಗಿ ನೆರವೇರಲಿ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ ಇವರ ಪ್ರಾರ್ಥನೆಗೆ ಮೆಚ್ಚಿ ಬನಶಂಕರಿ ದೇವಿಯು ಪ್ರಸನ್ನಳಾಗಿ ಪ್ರತ್ಯಕ್ಷಳಾಗುತ್ತಾಳೆ.
ತನ್ನ ಶರೀರದಲ್ಲಿ ಉತ್ಪನ್ನ ವಾದಂತಹ ಶಾಖದಿಂದ ಮೂರು ಲೋಕವನ್ನು ಸಂರಕ್ಷಿಸುತ್ತಾಳೆ ಭೂತಾಯಿ ನೀರಿನ ದಾಹವನ್ನು ತರಿಸುತ್ತಾಳೆ ಇದರಿಂದ ಆಹಾರ ಧಾನ್ಯಗಳು ಉತ್ಪತ್ತಿಯಾಗಿ ಜಗತ್ತಿನ ಜೀವರಾಶಿಗಳ ಹಸಿವು ನಿವಾರಿಸುತ್ತದೆ ಆಹಾರ ಸಂಪತ್ತಿನಿಂದ ಅನೇಕ ಬನಗಳು ನಿರ್ಮಾಣವಾಗುತ್ತದೆ ದೇವಿಯ ಮೈ ಶಾಖದಿಂದ ತರಕಾರಿಗಳು ಗೆಡ್ಡೆ ಗೆಣಸುಗಳು ಉತ್ಪತ್ತಿಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
Comments are closed.