ayesha-khan

ಮುಗುಳು ನಗುತ್ತಲೇ ನದಿಗೆ ಹಾರಿ ಆ ತ್ಮ ಹ ತ್ಯೆಗೆ ಶರಣಾದ ವಿವಾಹಿತೆ: ಸಾ-ವಿಗೂ ಮುನ್ನ ಆಕೆ ಮಾಡಿದ ವೀಡಿಯೋ ನೋಡಿ ಕಣ್ಣೀರಿಟ್ಟ ಜನ

CINEMA/ಸಿನಿಮಾ

ಗುಜರಾತಿನ ಅಹಮದಾಬಾದ್ ನಗರದ ವಿವಾಹಿತ ಮಹಿಳೆಯೊಬ್ಬರು ಸಬರಮತಿ ನದಿಗೆ ಧುಮುಕಿ ಆ ತ್ಮ ಹ ತ್ಯೆ ಮಾಡಿಕೊಂಡ ವಿಚಾರವು ದೇಶದೆಲ್ಲೆಡೆ ಸುದ್ದಿಯಾಗಿದೆ. ಈ ಮಹಿಳೆ ತಾನು ಪ್ರಾ ಣ ಕಳೆದುಕೊಳ್ಳುವ ಮೊದಲು ವೀಡಿಯೋ ಒಂದನ್ನು ಮಾಡಿ, ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಆಕೆ ಮಾತನಾಡುತ್ತಾ ನನಗೆ ಜೀವನ ಎಷ್ಟು ದಕ್ಕಿತೋ ಅಷ್ಟು ಕೂಡಾ ನಿರಾಳವಾಗಿದೆ. ಈಗ ನಾನು ದೇವರನ್ನು ಭೇಟಿಯಾಗಲು ಬಯಸಿದ್ದೇನೆ. ಈ ಘಟನೆಯ ನಂತರ ರಿವರ್ ಫ್ರಂಟ್ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಆರಂಭ ಮಾಡಿದ್ದಾರೆ. ಹೀಗೆ ವೀಡಿಯೋ ಮಾಡಿದ ಮಹಿಳೆಯ ಹೆಸರು ಆಯೆಷಾ ಎನ್ನಲಾಗಿದೆ.

ಆಯೆಷಾ ವೀಡಿಯೋ ದಲ್ಲಿ ಮಾತನಾಡುತ್ತಾ ಹಲೋ ನನ್ನ ಹೆಸರು ಆಯೆಷಾ ಆರಿಫ್ ಖಾನ್. ನಾನು ಈಗ ಏನು ಮಾಡಲು ಹೊರಟಿದ್ದೇನೆಯೋ ಅದನ್ನು ನಾನು ನನ್ನ ಇಚ್ಛೆಯಿಂದ ಮಾಡುತ್ತಿದ್ದೇನೆ. ಇದರಲ್ಲಿ ಯಾರದೇ ಆಗಲಿ ಬಲವಂತ ಇಲ್ಲ. ದೇವರು ಕೊಟ್ಟ ಜೀವನ ಇಷ್ಟೇ ಎಂದು ತಿಳಿಯಿರಿ ಹಾಗೂ ಈ ಜೀವನದಲ್ಲಿ ನಾನು ನಿರಾಳವಾಗಿದ್ದೆ ಎಂದು ಹೇಳುತ್ತೇನೆ. ಮತ್ತೆ ಅಪ್ಪಾ ಇನ್ನೆಷ್ಟು ಹೋ ರಾ ಟ ಮಾಡುವಿರಿ, ಕೇಸ್ ಹಿಂತೆಗೆದುಕೊಳ್ಳಿ ಎಂದು ಹೇಳಿದ್ದಾಳೆ. ಆಯೆಷಾ ಹಾಗೆ ಮುಂದೆ ಮಾತನಾಡುತ್ತಾ ಒಂದು ವಿಷಯವನ್ನು ನಾನು ಖಚಿತವಾಗಿ ಅರ್ಥ ಮಾಡಿಕೊಂಡಿದ್ದೇನೆ, ಅದೇನೆಂದರೆ ಪ್ರೀತಿ ಮಾಡುವುದಾದರೆ ಎರಡೂ ಕಡೆಯಿಂದ ಪ್ರೀತಿಸಿ. ಒನ್ ಸೈಡ್ ಪ್ರೀತಿಯಿಂದ ಏನೂ ದಕ್ಕುವುದಿಲ್ಲ.

She hugged death smiling - Ayesha and the plight of faithful partners  cheated in marriage

ಮದುವೆಯ ನಂತರವೂ ಪ್ರೀತಿ ಎನ್ನುವುದು ಅಪೂರ್ಣವಾಗಿ ಬಿಡುತ್ತದೆ. ಹೇ ಪ್ರೀತಿಯ ನದಿ ನಾನು ನಿನ್ನಲ್ಲಿ ಪ್ರಾರ್ಥಿಸುವುದೇನೆಂದರೆ ನೀನು ನನ್ನನ್ನು ನಿನ್ನಲ್ಲಿ ಸೇರಿಸಿಕೋ, ನಾನು ಹೋದ ಮೇಲೆ ನನ್ನ ಬೆನ್ನ ಹಿಂದೆ ನಡೆಯುವ ಘಟನೆಗಳನ್ನು ಹೆಚ್ಚು ಗೊಂದಲ ಗ ಲಾ ಟೆಯನ್ನು ಹುಟ್ಟಿಸಬೇಡ ಎಂದು ಹೇಳಿದ್ದಾರೆ. ನಾನು ಗಾಳಿಯಂತೆ ಸದಾ ಬೀಸಲು ಬಯಸುತ್ತೇನೆ. ಯಾರಿಗಾಗಿಯೂ ನಿಲ್ಲಬೇಡ, ಇಂದು ನಾನು ಬಯಸಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನಾನು ಸಂತೋಷವಾಗಿದ್ದೇನೆ. ಯಾರಿಗೆ ಏನೆಲ್ಲಾ ಹೇಳಬೇಕೆಂದು ಇದ್ದೇನೋ ಅದನ್ನೆಲ್ಲಾ ಹೇಳಿದ್ದೇನೆ. ಧನ್ಯವಾದಗಳು, ನನ್ನನ್ನು ಪ್ರಾರ್ಥನೆಯಲ್ಲಿ ನೆನಪಿಟ್ಟುಕೊಳ್ಳಿ. ಸ್ವರ್ಗ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೂ ಕೊನೆಯ ನಮಸ್ಕಾರ ಎಂದು ಹೇಳಿ ಆಯೆಷಾ ನದಿಗೆ ಹಾ-ರಿ ಪ್ರಾ-ಣ ಬಿಟ್ಟಿದ್ದಾರೆ.

ವಿಷಯಕ್ಕೆ ಬಂದರೆ ಆಯೇಷಾ ಗುಜರಾತಿನ ಅಹ್ಮದಾಬಾದ್ ನಲ್ಲಿ ವಾಸಿಸುವ ವೃತ್ತಿಯಲ್ಲಿ ಟೈಲರ್ ಆಗಿರುವ ಲಿಯಾಕತ್ ಅಲಿ ಎನ್ನುವವರ ಮಗಳು. 2018 ರಲ್ಲಿ ಆಯೇಷಾ ಅವರ ವಿವಾಹ ರಾಜಸ್ಥಾನದ ಜಲೌರ್ ನ ನಿವಾಸಿ ಆರಿಫ್ ಖಾನ್ ಎನ್ನುವವರ ಜೊತೆ ನಡೆದಿತ್ತು. ಆಯೆಷಾ ಅವರು ತಂದೆ ಹೇಳುವಂತೆ ಮದುವೆಯ ನಂತರ ತನ್ನ ಮಗಳಿಗೆ ಆಕೆಯ ಪ-ತಿ ವ-ರದಕ್ಷಿಣೆಗಾಗಿ ಪೀ ಡಿ ಸುತ್ತಿದ್ದ ಎನ್ನಲಾಗಿದೆ. ಆಯೆಷಾ ಅವರ ತಂದೆ ಹೇಳುವಂತೆ ವರದಕ್ಷಿಣೆ ನೀಡಿದ ಮೇಲೂ ಆರಿಫ್ ಅವರ ಕುಟುಂಬದ ಧನ ದಾಹ ಇನ್ನೂ ಹೆಚ್ಚಾಗಿ, ದು ರಾ ಸೆ ಯಿಂದ ಮತ್ತೆ ಮತ್ತೆ ವರದಕ್ಷಿಣೆಗಾಗಿ ಹಿಂ ಸೆ ನೀಡುತ್ತಿದ್ದರೆನ್ನಲಾಗಿದೆ.

Husband Of Ayesha Khan Arrested By Ahmedabad Police From Rajasthan's Pali

ಕೆಲವು ತಿಂಗಳುಗಳ ಹಿಂದೆ ಆರಿಫ್ ಖಾನ್ ಆಯೆಷಾರನ್ನು ಅಹಮದಾಬಾದ್ ನಲ್ಲಿನ ಆಕೆಯ ತವರು ಮನೆಗೆ ಕರೆ ತಂದು ಬಿಟ್ಟು ಹೋದ ಎನ್ನಲಾಗಿದೆ. ಆಯೆಷಾ ಫೋನ್ ಮಾಡಿದರೂ ಕೂಡಾ ಆರಿಫ್ ಮಾತನಾಡುತ್ತಿರಲಿಲ್ಲ ಎನ್ನಲಾಗಿದ್ದು ಕೆಲವು ದಿನಗಳ ಹಿಂದೆ ಆಯೇಷಾ ಗಂ-ಡನಿಗೆ ಕರೆ ಮಾಡಿ ಕೋ ಪ ದಿಂದ ತಾನು ಆ ತ್ಮ ಹ ತ್ಯೆ ಮಾಡಿಕೊಳ್ಳುತ್ತೇನೆ ಎಂದಾಗ ಆರಿಫ್ ಖಾನ್ ನಿನಗೆ ಸಾ ಯ ಲು ಇಷ್ಟವಿದ್ದರೆ ಹಾಗೆ ಮಾಡು ಎಂದು ಹೇಳಿದ್ದನು. ಈ ಎಲ್ಲಾ ಘಟನೆಗಳಿಂದ ಮನ ನೊಂದ ಆಯೇಷಾ ತನ್ನ ಪ್ರಾಣ ಬಿಡುವ ತೀರ್ಮಾನ ಮಾಡಿ, ಕೊನೆಯ ಬಾರಿ ವೀಡಿಯೋ ಒಂದನ್ನು ಮಾಡಿ ನದಿ-ಗೆ ಹಾರಿದ್ದಾರೆ. ಆಯೇಷಾ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಆಕೆಯ ಬಗ್ಗೆ ಜನರು ಕಂಬನಿ ಮಿಡಿದಿದ್ದರು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.