ಅವತಾರ್ 2 ಚಿತ್ರ ಮಾಡಲು ಕಾರಣ ಹಿಂದೂ ಪುರಾಣ, ಇದು ಭಾರತದ ಮಹಿಮೆ.

Hindu Purana And Avatar The Way Of Water: ಅದ್ಭುತ ದ್ರಶ್ಯ ವೈಭೋಗದೊಂದಿಗೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಚಿತ್ರ ಎಂದರೆ ಅವತಾರ್ 2 . ಅವತಾರ್ ಸಿನಿಮಾ ನೋಡಿದ ಸಿನಿಪ್ರಿಯರಲ್ಲಿ ಹುಟ್ಟಿದ ಏಕೈಕ ಪ್ರಶ್ನೆ ಎಂದರೆ ಅವತಾರ್ ಸಿನಿಮಾಗೂ ಮತ್ತು ಭಾರತದ ಹಿಂದೂ ಪುರಾಣಗಳಿಗೂ ಏನಾದರು ಸಂಬಂಧ ಇದೆಯಾ ಎನ್ನುವುದು.

The reason for making Avatar 2 is Hindu mythology, which is the glory of India.
Image Credit: cnet

ಅವತಾರ್ ದಿ ವೇ ಆಫ್ ವಾಟರ್ (Avatar: The Way Of Water)
2009 ರಲ್ಲಿ ಅವತಾರ್ 1 ಚಿತ್ರವನ್ನು ಚಿತ್ರಿಸಿ ಬಾರಿ ಖ್ಯಾತಿ ಪಡೆದ ಜೇಮ್ಸ್ ಕ್ಯಾಮೆರೂನ್ ಈಗ ಅದೇ ವಿಚಿತ್ರ ಜೀವಿಗಳ ಜೊತೆಗೆ ಮತ್ತೆ ಬಂದಿದ್ದಾರೆ. ಅವತಾರ್ ದಿ ವೇ ಆಫ್ ವಾಟರ್ ಮೂಲಕ ಮತ್ತೊಮ್ಮೆ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ ಮತ್ತು ಗಲ್ಲಾಪೆಟ್ಟಿಗೆಯನ್ನು ಖಾಲಿ ಮಾಡುತ್ತ ಇದ್ದಾರೆ. ಹೊಸ ವರ್ಷದ ಹೊಸ್ತಿಲಿನಲ್ಲಿ ಜಗತ್ತಿನಾದ್ಯಂತ ಸದ್ಯ ಅವತಾರ್ ದಿ ವೇ ಆಫ್ ವಾಟರ್ ಹವಾ ಜೋರಾಗಿದೆ.

13 ವರ್ಷಗಳ ನಂತರ ಬಂದ ಅವತಾರ್ 2
ಅವತಾರ್ 12009 ರಲ್ಲಿ ತೆರೆಯ ಮೇಲೆ ಬಂದು ಬಾರಿ ಸದ್ದು ಮಾಡಿತ್ತು. ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಬೇರೆಯದ್ದೇ ಲೋಕದಲ್ಲಿ, ವಿಚಿತ್ರ ಜೀವಿಗಳನ್ನು ಪರಿಚಯಿಸಿ ಅವುಗಳ ಸುತ್ತ ನಡೆಯುವ ಘಟನೆಗಳನ್ನು ಹೇಳಿದ ರೀತಿ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿಬಿಟ್ಟಿತ್ತು.

ಪರಿಣಾಮ ಇಂದಿಗೂ ವಿಶ್ವದಲ್ಲಿ ಗರಿಷ್ಟ ಗಳಿಕೆಯ ಸಿನಿಮಾ ಯಾವುದು ಅಂತ ನೋಡಿದ್ರೆ ಅದು ಟಾಪ್ ವನ್ ಸ್ಥಾನದಲ್ಲಿ ಅವತಾರ್ ಸಿನಿಮಾ ಕಾಣಿಸುತ್ತದೆ.

ಇದೀಗ ಅವತಾರ್ ಮುಂದುವರಿದ ಭಾಗವನ್ನು ಅವತಾರ್ ದಿ ವೇ ಆಫ್ ವಾಟರ್ ಎಂಬ ಹೆಸರಿನಲ್ಲಿ ತೆರೆಗೆ ತರಲಾಗುತ್ತಿದೆ. ಈ ಸಿನಿಮಾ ಲಂಡನ್ ನಲ್ಲಿ ಡಿಸೆಂಬರ್ 6 ರಂದು ಬಿಡುಗಡೆಯಾಗಿದೆ. ಅಮೇರಿಕ, ಭಾರತ ಸೇರಿದಂತೆ ವಿಶ್ವದಾದ್ಯಂತ ಡಿಸೆಂಬರ್ 16 ರಂದು ತೆರೆಗೆ ಬಂದಿದೆ.

ಬಾಲಿವುಡ್ ನಿರ್ದೇಶಕರಿಗೆ ಪ್ರೇರಣೆಯಾದ ಹಿಂದೂ ಪುರನಿರ್ದೇಶಕ ಜೇಮ್ಸ್ ಕ್ಯಾಮರಾನ್ (James Cameron) ಊಹೆಗೂ ಸಿಗದ ರೀತಿಯಲ್ಲಿ ಸಿನಿಮಾವನ್ನು ಮಾಡಿದ್ದಾರೆ. ಇದರಲ್ಲಿ ವಿಶೇಷವೇನೆಂದರೆ ಕ್ಯಾಮೆರಾನ್ ತೆರೆಯ ಮೇಲೆ ತೋರಿಸಿರುವ ವಿಶೇಷ ರೀತಿಯ ಕಥೆ ಹಾಗೂ ಪ್ರಾಣಿ ಪಕ್ಷಿಗಳು ಇದೆಕ್ಕೆಲ್ಲ ಮೂಲ ಕಾರಣವೆ ಹಿಂದೂ ಪುರಾಣದ ಸ್ಪೂರ್ತಿ.

ಹಿಂದೂ ಪುರಾಣದ ಬಗ್ಗೆ ಮಾತನಾಡಿದ ಜೇಮ್ಸ್ ಕ್ಯಾಮರಾನ್

ನೋಡಿ ನಾನು ಹಿಂದೆ ಸಂಪ್ರದಾಯವನ್ನು ಪ್ರಾಕ್ಟೀಸ್ ಮಾಡಿಲ್ಲ ಆದರೆ ನನಗೆ ಹಿಂದೂ ಧರ್ಮದ ನಂಬಿಕೆಗಳ ಬಗ್ಗೆ ತುಂಬಾ ಹಿಂದಿನಿಂದಲೂ ತಿಳಿದಿದೆ. ನನಗೆ ಹಿಂದೂ ಸಂಪ್ರದಾಯಗಳು ನಿಜಕ್ಕೂ ಆಕರ್ಷಕ ಎನಿಸುತ್ತದೆ.

James Cameron talked about Hindu mythology saying that the reason for making Avatar was Hindu mythology
Image Credit: parade

ನಾನು ಈ ವಿಶಾಲ ಜಗತ್ತಿನಲ್ಲಿರುವ ಎಲ್ಲ ಜನರ ಅಧ್ಯಾತ್ಮ ಭಾವನೆಗಳಿಗೆ ಹತ್ತಿರವಾಗುವಂತಹ ಸಿನಿಮಾಗಳನ್ನು ಮಾಡಲು ಸದಾ ಪ್ರಯತ್ನ ಮಾಡುತ್ತಿದ್ದೇನೆ. ನಾನು ಮಾಡುವ ಸಿನಿಮಾಗಳು ಕ್ರಿಶ್ಚಿಯನ್ನೀಯರಿಗೆ ಮಾತ್ರವೋ, ಯಹೂದಿಗಳಿಗೋ, ಅಥವಾ ಹಿಂದುಗಳಿಗೆ ಮಾತ್ರ ಅನ್ವಯಿಸುವಂತ ಸಿನಿಮಾ ಆಗುದಿಲ್ಲ.

ಹಿಂದೂ ಧರ್ಮದ ಪುರಾಣದಲ್ಲಿ ಬರುವ ದೇವಾನು ದೇವತೆಗಳ ಕಥೆಗಳು ಆದರೂ ಮಂತ್ರಮುಗ್ದರನ್ನಾಗಿ ಮಾಡುತ್ತದೆ. ಆ ಕಥೆಗಳನ್ನು ಕೇಳಿ ಅದೆಷ್ಟೋ ಜನ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ.

You might also like

Comments are closed.