ASWINI-PUNIT

ಅಶ್ವಿನಿ ಪುನೀತ್ ಅವರು ಜಾಸ್ತಿ ಮಾತಾಡಲ್ಲ ಯಾಕೆ ಗೊತ್ತಾ…

CINEMA/ಸಿನಿಮಾ

ಕರ್ನಾಟಕದ ಅಜಾತ ಶತ್ರು ಅಪ್ಪು ಅವರನ್ನು ಇಂದಿಗೂ ಜನರು ಮರೆಯಲು ಸಾಧ್ಯವೇ ಇಲ್ಲ ದಿನೇ ದಿನೇ ಅವರ ಅಭಿಮಾನಿಗಳ ಬಳಗ ಜಾಸ್ತಿ ಆಗುತ್ತಾ ಇದೆಯೇ ವಿನಃ ಕಮ್ಮಿ ಅಂತೂ ಆಗ್ತಾ ಇಲ್ಲ ಅಂತಹ ಒಂದು ಗುಣ ಇರುವ ವ್ಯಕ್ತಿ ಅವರು. ಎಷ್ಟೊಂದು ಜನ ಅಭಿಮಾನಿಗಳು ಹೊಂದಿದ್ದಾರೆ ಎಂದು ಕಣ್ಣಾರೆ ಕಂಡಿದ್ದೇವೆ ಅವರ ಸಾವಿನ ದಿನ ಅಂದು ಜಮಾ ಆಗಿದ್ದ ಜನರು ಹಾಗೂ ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಆದ ದಿನ ಅಪ್ಪು ಅವರನ್ನು ಎಷ್ಟು ಜನ ಇಷ್ಟ ಪಡುತ್ತಾರೆ ಹಾಗೂ ಆರಾಧನೆ ಮಾಡುತ್ತಾರೆ ಎಂದು ತಿಳಿಯಬಹುದು.

ಇನ್ನು ಇವರ ಪತ್ನಿಯು ಕೂಡ ಇವರಂತೆ ಸರಳ ಜೀವಿ,ಹಾಗೂ ಮಿತ ಭಾಷಿ ಅಂದರು ತಪ್ಪಾಗಲಾರದು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಯಾಕೆ ಹೆಚ್ಚು ಮಾತಾಡಲ್ಲ ಅಂದ್ರೆ ಅದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ. ಅಶ್ವಿನಿಯವರು ಕನ್ನಡದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ. ಪತಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಸೇರಿ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಸ್ನೇಹಿತರ ಮೂಲಕ ಪರಿಚಯವಾದ ಅಶ್ವಿನಿಯವರಿಗೆ ಪುನೀತ್ ರಾಜ್ ಕುಮಾರ್ ಅವರು ಎಂಟು ತಿಂಗಳ ನಂತರ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡರು. ಮೂಲತಃ ಚಿಕ್ಕಮಗಳೂರಿನವರಾದ ಇವರು ಪುನೀತ್ ಜೊತೆ ಡಿಸೆಂಬರ್ 1, 1999 ರಂದು ಹಸೆಮಣೆಯೇರಿದರು. ಈ ದಂಪತಿಗಳಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಅಪ್ಪು ಅವರು ಕೂಡ ಒಬ್ಬ ಕಲಾವಿದರ ಕುಟುಂಬ ಇಂದ ಬಂದವರು. ಎಲ್ಲು ಕೂಡ ತಾನು ಒಬ್ಬ ನಟ ಎನ್ನುವ ಬಿಮ್ಮು ಇಲ್ಲದೆ ಎಲ್ಲರ ಹಾಗೆ ತಾವು ಕೂಡ ಒಬ್ಬ ನಟ ಎಂದು ಎಲ್ಲರ ಜೊತೆಗೆ ನಗು ನಗುತ ,ಎಲ್ಲರ ಜೊತೆಗೆ ತಮ್ಮನ್ನು ತಾವು ತೊಡಗಿ ಕೊಂಡಿರುತ್ತಾರೆ. ಹಾಗೂ ಯಾವಾಗಲೂ ಹಸನ್ಮುಖಿ ಆಗಿ ಎಲ್ಲರ ಜೊತೆ ಕಾಲ ಕಳೆಯುವ ದೊಡ್ಡಮನೆ ಹುಡುಗ ಅಷ್ಟು ಸರಳ ವ್ಯಕ್ತಿತ್ವ ಇವರದ್ದು ಹಾಗಾಗಿ ಇವರನ್ನು ಎಲ್ಲರೂ ಮೆಚ್ಚಲೇ ಬೇಕು. ಇವರು ದೊಡ್ಡವರು ಹಾಗೂ ಕಿರಿಯವರು ಯಾರೇ ಇರಲಿ ಎಲ್ಲರನ್ನೂ ಗೌರವ ಇಂದ ಕಾಣುವ ಗುಣ ಹಾಗೂ ವಿನಯಶೀಲತೆ ಅವರದ್ದು.

ಯಾವುದೇ ಪ್ರಚಾರ ಇಲ್ಲದೆಯೂ ಕಷ್ಟ ಅಂತ ಬಂದವರಿಗೆ ಸಹಾಯ ಮಾಡಿದ ಧಿಮಂತ ನಾಯಕ ನಟ ಹಾಗೂ ಕೆಲವೊಂದು ಜಾಹೀರಾತುಗಳಿಗೆ ಇವರು ಹಣವನ್ನು ಪಡೆಯದೆ ಉಚಿತವಾಗಿ ನಟಿಸಿದ ನಿದರ್ಶನ ಇದೆ. ವಿವಿಧ ಬಗೆಯ ಆಹಾರ ಸೇವನೆ ಬಗ್ಗೆ ಹುಚ್ಚು ಇದ್ದು ಬೇರೆ ಯಾವುದೇ ಚಟಗಳನ್ನು ರೋಡಿಸಿಕೊಂಡಿರಲ್ಲಿಲ್ಲ. ಇವರು ಚಿತ್ರಗಳು ಒಂದು ಕೌಟುಂಬಿಕ ಕಥೆ ಆಗಿದ್ದು ಹೆಣ್ಣು ಮಕ್ಕಳ ಮನ ಗೆದ್ದು ,ಮನೆ ಮಗನೇ ಆಗಿ ಹೋಗಿದ್ದರು. ಇವರು ಒಬ್ಬ ಅದ್ಬುತ ನೃತ್ಯಗಾರ ಹೌದು ಇದುಕ್ಕೆ ಅನೇಕ ಪ್ರಶಸ್ತಿ ಗೌರವಗಳನ್ನು ಕೂಡ ಪಡೆದಿದ್ದಾರೆ.

ಪುನೀತ್ ಮಾವ, ಅಶ್ವಿನಿ ತಂದೆ ಹೃದಯಾಘಾತದಿಂದ ನಿಧನ; ರಾಜ್​ ಕುಟುಂಬದಲ್ಲಿ ಮತ್ತೆ ಆವರಿಸಿದ ದುಃಖ | Ashwini Puneeth Rajkumar father Revanath died due to heart attack | TV9 Kannada

ಪುನೀತ್ ಅವರು ದೊಡ್ಡ ಮನೆ ಹುಡುಗ ಹಾಗೂ ರಾಜಕುಮಾರ ಅವರ ಕಿರಿಯ ಪುತ್ರ ,ಪಾರ್ತಮ್ಮ ರಾಜ್ ಕುಮಾರ್ ಅವರ ಮುದ್ದಿನ ಪುತ್ರ ಇವರು ಎಂದೇ ಹೇಳಬಹುದು. ಇವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಪ್ರೇಮ ವಿವಾಹ ಆಗಿದ್ದು ಇವರು ಕೂಡ ಮಿತ ಭಾಷಿ ಹಾಗೂ ದೊಡ್ಡ ಮನೆಯ ಸೊಸೆಗೆ ಇರಬೇಕಾದ ನಯ, ವಿನಯ ,ನಾಜೂಕಿನ ಹುಡುಗಿ ಎನ್ನುವುದರಲ್ಲಿ ಎರಡು ಮಾತಿಲ್ಲ .ಪುನೀತ್ ಹಾಗೂ ಅಶ್ವಿನಿ ಅವರದು ಒಂದು ಅನೋನ್ಯ ಜೋಡಿ ಇವರು ಗಂಡ ಹೆಂಡ್ತಿ ತರಹ ಇರದೆ ,ಎಲ್ಲ ಕಡೆ ಒಳ್ಳೆಯ ಮಾರ್ಗದರ್ಶಕ ಹಾಗೂ ಸ್ನೇಹಿತರು ಆಗಿದರು.

ಇನ್ನೂ ಮಾತು ಮಾಣಿಕ್ಯ ,ಮೌನ ಬಂಗಾರ ಅನ್ನೋ ಹಾಗೆ ಎಲ್ಲಿ ಜೋರಾಗಿ ಮಾತು ಆಡಿದರೆ ಅವಮಾನ ಆಗೋವುದೋ ಅನ್ನುವ ಗುಣ ಇವರದ್ದು. ಎಲ್ಲಿಯೂ ಕೂಡ ಇವರು ಜೋರಾಗಿ ಮಾತು ಆಡಿದ್ದು ನಾವು ನೋಡಿಯೇ ಇಲ್ಲ ಇದರ ಕುರಿತು ಬಿ ಎಂ ಗಿರಿರಾಜ್ ಅವರು ಏನು ಹೇಳುತ್ತಾರೆಂದು ಎಂದು ನೋಡೋಣ ಬನ್ನಿ.

ಸಂದರ್ಶನ ಒಂದರಲ್ಲಿ ಅಶ್ವಿನಿ ಅವರು ತಮ್ಮ ನೋವು ಅನ್ನು ಎಲ್ಲು ಆಚೆಗೆ ಹಾಕಿಲ್ಲ ಹಾಗೂ ಮಾತು ಅಡಿಲ್ಲ ಎಂದ ನಿರೂಪಕಿಯ ಮಾತಿಗೆ ಬಿ.ಎಂ ನಾಗರಾಜ್ ಅವರು ಅದು ಅವರ ವಂಶ ಪಾರಂಪರ್ಯವಾಗಿ ಬಂದ ಗುಣ ಆಗಿದ್ದು ರಾಜ್ ಅವರ ಫ್ಯಾಮಿಲಿ ಅಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕು ಶಿವನು ಮೆಚ್ಚುವಂತೆ ಇರಬೇಕು ಎನ್ನುವ ಭಾವನೆ ಅವರದ್ದು ಯಾರೊಂದಿಗೂ ಹೆಚ್ಚು ಮಾತು ಇಲ್ಲ ಹಾಗೂ ಅವರಿಗೆ ತೀರಾ ಆಪ್ತರು ಎನಿಸುವರ ಜೊತೆಗೆ ಮಾತ್ರ ಮಾತು ಕಥೆ ಅಷ್ಟೆ ಅವರದ್ದು. ಅದು ಎಷ್ಟು ಬೇಕೋ ಅಷ್ಟೆ.

Puneeth Rajkumar's wife Ashwini says 'I'm in tears' as she pens an emotional note after Powerstar's demise | PINKVILLA

ತನ್ನ ಗಂಡನನ್ನು ಕಳೆದುಕೊಂಡ ದುಃಖ ಇದ್ದರು ಕೂಡ ತಾನೇ ದೈರ್ಯವಾಗಿ ನಿಂತು ಎಲ್ಲರಿಗೂ ದೈರ್ಯ ಹೇಳುವ ಅವರ ಆತ್ಮಸ್ಥೈರ್ಯ ಯಾರಿಗೂ ಬರೋಲ್ಲ ಅದು ದೊಡ್ಡಮನೆ ಸೊಸೆ ಗುಣ. ಇನ್ನೂ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ನನಗೆ ಒಂದೇ ಸಿನಿಮಾ ಮಾಡುವ ಯೋಗ್ಯತೆಯನ್ನು ಆ ಭಗವಂತ ನೀಡಿದ್ದಾನೆ ಹಾಗಾಗಿ ಅಷ್ಟಕ್ಕೇ ನಾನು ಸೀಮಿತ ಎಂದು ಹೇಳಿದ್ದಾರೆ ಇನ್ನೂ ಅವರ ಮೂಲಕ ಹಲವಾರು ಸಿನಿಮಾ ಮಾಡುವ ಇರಾದೆ ಇತ್ತು ಆದರೆ ದೇವರು ಕ್ರೂರಿ ಹಾಗಾಗಿ ಅಂತ ಅವಕಾಶವನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.