ASWINI

ಗಂಧದ ಗುಡಿ ಸಿನಿಮಾ ಅಪ್ಪು ಅವರ ಕೊನೆಯ ಸಿನಿಮಾ ಅಲ್ಲ ಎಂದು ಅಶ್ವಿನಿ ಶಾ’ಕಿಂಗ್ ಸರ್ಪ್ರೈಸ್

CINEMA/ಸಿನಿಮಾ Entertainment/ಮನರಂಜನೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಆಗಿರುವ ಹಾಗೂ ಕರ್ನಾಟಕ ರಾಜ್ಯದ ವನ್ಯ ಸಂಪತ್ತಿನ ಬಗ್ಗೆ ನಮಗೆಲ್ಲರಿಗೂ ಸಂಪೂರ್ಣ ಪರಿಚಯವನ್ನು ಮಾಡುವಂತಹ ಗಂಧದಗುಡಿ ಸಿನಿಮಾ ಈಗಾಗಲೇ ಇಂದು ರಾಜ್ಯ ದೇಶ ಹಾಗೂ ವಿದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಿಜಕ್ಕೂ ಇದನ್ನು ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ಕರುನಾಡಿನ ರಾಜಕುಮಾರ ತನ್ನ ರಾಜ್ಯವನ್ನು ತನ್ನ ಪ್ರಜೆಗಳಿಗೆ ತೋರಿಸುವಂತಿದೆ ಎಂದರೆ ತಪ್ಪಾಗಲಾರದು.

ನಿಮಗೆಲ್ಲರಿಗೂ ನೆನಪಿರಬಹುದು ಗಂಧದಗುಡಿ ಸಿನಿಮಾವನ್ನು ಡಾಕ್ಟರ್ ರಾಜಕುಮಾರ್ ರವರು ಮಾಡಿದ್ದರು ಅದಾದ ನಂತರ ಗಂಧದಗುಡಿ 2 ಸಿನಿಮಾವನ್ನು ಕರುನಾಡ ಚಕ್ರವರ್ತಿ ಶಿವಣ್ಣ ಅವರು ತಮ್ಮ ತಂದೆ ಜೊತೆಗೆ ನಟಿಸಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಈಗ ಗಂಧದಗುಡಿಯ ಡಾಕ್ಯುಮೆಂಟರಿ ಸಿನಿಮಾ ಕೇವಲ ಅಪ್ಪು ಅವರ ನಟನೆಯ ಮೂಲಕ ಅಥವಾ ಅವರ ನಿಜಜೀವನದ ಅನುಭವದ ಮೂಲಕ ಮೂಡಿ ಬಂದಿದೆ ಎಂದು ಹೇಳಬಹುದಾಗಿದೆ.

Ashwini on Gandhada Gudi: ಕೊನೆಗೂ 'ಗಂಧದ ಗುಡಿ' ಬಗ್ಗೆ ಮಾತನಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್; ಇಲ್ಲಿದೆ ಸಂದರ್ಶನದ ಪೂರ್ಣ ಮಾತು..-for the first time ashwini puneeth rajkumar talks about ...

ಒಬ್ಬ ಸಿನಿಮಾ ನಟ ಈ ರೀತಿ ಕೂಡ ಪ್ರಯೋಗವನ್ನು ಮಾಡಬಹುದು ಎಂಬುದನ್ನು ಸಮಾಜಕ್ಕೆ ಅಥವಾ ಚಿತ್ರರಂಗಕ್ಕೆ ತೋರಿಸಿಕೊಟ್ಟವರು ನಮ್ಮ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು. ಇನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಗಂಧದಗುಡಿ ಸಿನಿಮಾಗೆ ಪ್ರತಿಕ್ರಿಯೆ ನೀಡುತ್ತಾ ಇದು ಅಪ್ಪುನ ಕೊನೆ ಸಿನಿಮಾ ಅಲ್ಲ ಎಂಬುದಾಗಿ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಇದರರ್ಥ ಇದು ಕೊನೆ ಅಲ್ಲ ಆರಂಭ ಎನ್ನುವುದಾಗಿ ಅಶ್ವಿನಿ ಭಾವುಕರಾಗಿ ಹೇಳಿದ್ದಾರೆ. ಈ ಸಿನಿಮಾವನ್ನು ನಾವೆಲ್ಲರೂ ಸೇರಿ ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಅಪ್ಪು ಅವರನ್ನು ಆಚರಿಸಬೇಕು ಎಂಬುದಾಗಿ ಹೇಳಿದ್ದಾರೆ. ಆದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹೊಸ ಸಿನಿಮಾಗಳನ್ನು ನಾವು ಮತ್ತೊಂದು ನೋಡಲು ಸಾಧ್ಯವಿಲ್ಲ ಎಂಬ ಭಾವನೆ ನಿಜಕ್ಕೂ ಕೂಡ ನಮ್ಮ ಹೃದಯವನ್ನು ಹಿಂಡುವಂತಹ ವೇದನೆ ನೀಡುತ್ತಿದೆ ಎಂದರೇ ತಪ್ಪಾಗಲಾರದು. ನೀವು ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಹಾಗೂ ನಿಮ್ಮವರನ್ನು ಕೂಡ ಕರೆದುಕೊಂಡು ಹೋಗಿ ಕುಟುಂಬ ಸಮೇತರಾಗಿ ವೀಕ್ಷಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.