ಅಶ್ವಿನಿ

ಅಶ್ವಿನಿ ಅವರು ನೀರು ಕೇಳುವಾಗ ಮುಗ್ದತೆ ನೋಡಿ…ದೊಡ್ಮನೆ ಸೊಸೆಯ ಕ್ಯೂಟ್ ವಿಡಿಯೋ

CINEMA/ಸಿನಿಮಾ

ನಮ್ಮ ಕನ್ನಡದ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೃದಯಾಘಾತದಿಂದ ಅಸುನೀಗಿ ಅದಾಗಲೇ ಎಂಟು ಕಳೆದು ಹೋಗಿದೆ. ಹೌದು ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದ ಅಪ್ಪು ವರ್ಕೌಟ್‌ ಮಾಡುತ್ತಲೇ ಹೃದಯಾಘಾತದಿಂದ ಅಗಲಿರುವುದನ್ನು ಅಭಿಮಾನಿಗಳು ಅರಗಿಸಿಕೊಳ್ಳಲು ಇಂದಿಗೂ ಕೂಡ ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ಎಲ್ಲರಿಗೂ ಕೂಡ ಬಹಳ ಅಚ್ಚುಮೆಚ್ಚಾಗಿದ್ದು ಪುನೀತ್ ಅವರಂತೆಯೇ ಅವರ ಜೀವಕ್ಕೆ ಜೀವವಾಗಿದ್ದ ಅವರ ಧರ್ಮಪತ್ನಿ ಅಶ್ವಿನಿ ಅವರು ಕೂಡ ಅಪ್ಪು ಅವರಂತೆಯೇ ಎಲ್ಲರಿಗೂ ಕೂಡ ಅಷ್ಟೇ ಅಚ್ಚುಮೆಚ್ಚು ಎನ್ನಬಹುದು. ಹೌದು ಇಬ್ಬರದ್ದೂ ಒಂದೇ ರೀತಿಯಾದಂತಹ ಗುಣವಾಗಿದ್ಧು ಅಶ್ವಿನಿ ಹಾಗೂ ಪುನೀತ್ ಇಬ್ಬರೂ ಕೂಡ ಸರಳತೆಯ ಸಾಹುಕಾರರು ಎನ್ನಬಹುದಾಗಿದ್ದು ಇನ್ನು ಅಪ್ಪು ಅವರಂತೆಯೇ ಅಶ್ವಿನಿ ಅವರು ಕೂಡ ಸರಳ ವ್ಯಕ್ತಿತ್ವದವರು ಎಂಬುದು ಸಾಕಷ್ಟು ಜನರಿಗೆ ತಿಳಿದಿದೆ.

ಹೌದು ತಾನು ದೊಡ್ಮನೆಯ ಸೊಸೆ ಎಂಬ ಹಮ್ಮು ಬಿಮ್ಮನ್ನು ಎಂದು ಕೂಡ ತೋರಿದವರಲ್ಲ. ಅಶ್ವಿನಿ ಅವರನ್ನು ಹತ್ತಿರದಿಂದ ನೋಡಿದವರು ಮತ್ತು ಬಲ್ಲವರು ಅವರನ್ನ ಅನ್ನಪೂರ್ಣೇಶ್ವರಿ ಅಂತಾಲೂ ಕೂಡ ಕರೆಯುತ್ತಾರೆ. ಅಪ್ಪು ಮನೆಗೆ ಹೋದರೆ ಸಾಕು ಊಟ ಇಲ್ಲದೆ ಯಾರೊಬ್ಬರೂ ಸಹ ಹಿಂತಿರುಗಿ ಬರುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರ ಮನೆಯಲ್ಲಿ ಆತಿಥ್ಯ ಇತ್ತು. ಹೌದು ಅದು ಯಾರೇ ಆಗಿರಲಿ ಹಿಂಜರಿಕೆ ಇಲ್ಲದೆ ಅವರ ಮನೆಯಲ್ಲಿ ಆತಿಥ್ಯ ಇರುತ್ತಿತ್ತು. ಇನ್ನು 1976 ರಲ್ಲಿ ಅಪ್ಪು ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಈಗ ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌ ಆಗಿದ್ದಾರೆ.

Puneeth: ಪುನೀತ್​ ದಾಂಪತ್ಯಕ್ಕೆ 22 ವರ್ಷ: ನನ್ನ ಸಿನಿಮಾಗಳ ಬೆಸ್ಟ್​ ಕ್ರಿಟಿಕ್​  ಅಶ್ವಿನಿ ಎನ್ನುತ್ತಿದ್ದ ಅಪ್ಪು

ಅಪ್ಪು ಅವರ ಈ ಸೂಪರ್‌ ಜರ್ನಿಯಲ್ಲಿ ಅಶ್ವಿನಿ ಅವರದ್ದು ಕೂಡ ಪ್ರಮುಖ ಪಾತ್ರ ಎನ್ನಬಹುದುದಾಗಿದ್ದು 1999ರಲ್ಲಿ ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರ ಪ್ರೇಮಕಥೆ ಕರುನಾಡಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಹೌದು ಪುನೀತ್ ರಾಜಕುಮಾರ್ ಅಶ್ವಿನಿ ಕಾಮನ್ ಫ್ರೆಂಡ್ ಆಗಿದ್ದರು ಬಳಿಕ ಈ ಸ್ನೇಹದಿಂದ ಪ್ರೇಮಿಗಳಾಗುತ್ತಾರೆ. ಇವರ ಪ್ರೇಮಕಥೆಯಲ್ಲಿ ಸಿನಿಮಾ ರೀತಿಯಲ್ಲೆ ಹಲವು ಟ್ವೀಸ್ಟ್ ಗಳು ಇದ್ದು ಪುನೀತ್ ರಾಜ್‌ಕುಮಾರ್‌ ರವರು ಪ್ರೇಮ ನಿವೇದನೆ ಮಾಡಿಕೊಂಡಾಗ ಅಶ್ವಿನಿ ಒಪ್ಪಿದರೂ ಕೂಡ ಅವರ ಮನೆಯ ಹಿರಿಯರು ಒಪ್ಪಿರಲಿಲ್ಲವಂತೆ. ನಂತರ ಮಗನ ನಿರ್ಧಾರಕ್ಕೆ ಪುನೀತ್ ಪೋಷಕರು ಮೊದಲಿನಿಂದಲೂ ಬೆಂಬಲ ನೀಡಿದ್ದು ಕೊನೆಗೆ ಅಶ್ವಿನಿಯ ಮನೆಯವರಿಂದಲೂ ಕೂಡ ಒಪ್ಪಿಗೆ‍ ಸಿಕ್ಕಿತು. ನಂತರ ಇಬ್ಬರ ಪ್ರೇಮಕಥೆ ಮದುವೆಯೊಂದಿಗೆ ಮುಂದುವರೆಯಿತು.

1999ರ ಡಿಸೆಂಬರ್ 1ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿ ಮದುವೆಯಾಗಿ 21 ವರ್ಷವರೆ ಕಳೆದು ಹೋಗಿದೆ. ಕಳೆದ ವರುಷ ಡಿಸೆಂಬರ್ ಗೆ ಇವರ ಮದುವೆಗೆ 22 ವರ್ಷಕ್ಕೆ ಆಗಿದ್ದು ಅಶ್ವಿನಿ ಬೆಂಗಳೂರಿನವರಾಗಿದ್ದು ಮದುವೆಯ ಬಳಿಕ ಅವರು ಕೂಡ ಸಿನಿಮಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು ನಿರ್ಮಾಪಕಿ ಆಗಿಯೂ ಅಶ್ವಿನಿ ಕೆಲಸಮಾಡಿದ್ದು ಇವರ ಪ್ರೇಮಕಥೆ ಹುಟ್ಟಿಕೊಂಡಿದ್ದು ಜಿಮ್‌ನಲ್ಲಿ. ಹೌದು ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಇಬ್ಬರು ಕೂಡ ಒಂದೇ ಜಿಮ್‌ಗೆ ಹೋಗುತ್ತಾ ಇದ್ದು ಅಲ್ಲಿ ಸ್ನೇಹಿತರಾಗಿ ಸ್ನೇಹ ಪ್ರೇಮವಾಯಿತು. ಇವರಿಬ್ಬರೂ ಆದರ್ಶ ದಂಪತಿಗಳಾಗಿದ್ದು ಇವರಿಬ್ಬರ ನಡುವಿನ ವಯ್ಯಸ್ಸಿನ ಅಂತರ ನೋಡುವುದಾದರೆ ಕೇವಲ ಎರಡು ವರುಷ. ಹೌದು ಪುನೀತ್ ರಾಜ್ ಕುಮಾರ್ ರವರು 17 ಮಾರ್ಚ್ 1975 ರಂದು ಜನಿಸಿದ್ದು ಅವರಿಗೆ 46 ವರುಷ ತುಂಬಿತ್ತು. ಇನ್ನು ಅಶ್ವಿನಿ ಪುನಿತ್ ರಾಜ್ ಕುಮಾರ್ ರವರು 14 ಮಾರ್ಚ್ 1977 ರಲ್ಲಿ ಜನಿಸಿದ್ದು ಇವರಿಗೆ ಇದೀಗ 44 ವರುಷ ವಯ್ಯಸ್ಸಾಗಿದೆ. ಇನ್ನು ಈ ದಂಪತಿಗಳ ವಯಸ್ಸಿನ ಅಂತರ ಕೇವಲ 2 ವರುಷವಾಗಿದ್ದು ಬಹಳ ಅನ್ಯೋನ್ಯ ವಾಗಿ ದಾಂಪತ್ಯ ಜೀವನ ನಡೆಸಿದ್ದರು ಹಾಗೂ ಎಲ್ಲರಿಗೂ ಮಾಧರಿಯಾಗಿದ್ದರು ಎನ್ನಬಹುದು.

ashwini puneeth rajkumar father death, ಅಶ್ವಿನಿ ಪುನೀತ್ ರಾಜ್‌ಕುಮಾರ್ ತಂದೆ  ಹೃದಯಾಘಾತದಿಂದ ನಿಧನ; ದೊಡ್ಮನೆಗೆ ಮತ್ತೊಂದು ಆಘಾತ - puneeth rajkumars wife ashwini  puneeth rajkumars father revanath passes ...

ಪುನೀತ್ ಹಾಗೂ ಅಶ್ವಿನಿ ಎಲ್ಲಿ ತನಕ ಕೈಗೊಂಡಿರುವ ಕಾರ್ಯಗಳು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಅಂಶಗಳು ಮತ್ತೊಬ್ಬರಿಗೆ ಆದರ್ಶ ಆಗುವ ರೀತಿಯಲ್ಲಿ ಇದ್ದು ಈ ದಂಪತಿಗಳ ಸರಳ ಸುಂದರ ಬದುಕನ್ನು ಹತ್ತಿರದಿಂದ ಬಲ್ಲವರು ಹಾಡಿ ಹೊಗಳುತ್ತಾರೆ. ಅವರಂತೆಯೇ ಬದುಕಬೇಕು ಎನ್ನುವ ಮಾತುಗಳನ್ನು ಆಡುತ್ತಿದ್ದು ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಅವರ ಇಬ್ಬರು ಮಕ್ಕಳು. ಮಕ್ಕಳು ಕೂಡ ತಾವು ರಾಜವಂಶದ ಮೊಮ್ಮಕ್ಕಳು ತಾವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಕ್ಕಳು ಎನ್ನುವಂತಹ ರೀತಿಯಲ್ಲಿ ಹಮ್ಮು ಬಿಮ್ಮು ತೋರಿಸಿಕೊಂಡು ಇಲ್ಲಿಯತನಕ ಕಾಣಿಸಿಕೊಂಡಿಲ್ಲ. ಇನ್ನು ಮಕ್ಕಳಿಗೂ ಕೂಡ ಅಪ್ಪು ಮತ್ತು ಅಶ್ವಿನಿ ಜೀವನದ ಮೌಲ್ಯಗಳನ್ನು ಚಿಕ್ಕಂದಿನಿಂದಲೇ ಹೇಳಿ ಕೊಟ್ಟಿದ್ದಾರೆ. ಇನ್ನು ಅಶ್ವಿನಿ ರವರ ಮುಗ್ದತೆಗೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ವೇದಿಕೆಯ ಮೇಲೆ ನೀರು ಕೇಳುವಾಗ ಅವರ ಮುಗ್ದತೆ ಹೇಗಿತ್ತು ನೀವೆ ನೋಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.