ಅಶ್ವಿನಿ ಪುನೀತ್ ರಾಜಕುಮಾರ್ (Ashwini punith rajkumar) ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪುನೀತ್ ಅವರು ಇದ್ದ ದಿನದ ತನಕ ಅವರ ಜೊತೆ ಮದುವೆ ಸಮಾರಂಭಗಳು ಅಥವಾ ಸಿನಿಮಾ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅಗಲಿಕೆಯ ನಂತರ ಅವರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೀಗಾಗಿ ಪಿಆರ್ಕೆ ಪ್ರೊಡಕ್ಷನ್ ಮತ್ತು ಅಪ್ಪು ಅಭಿಮಾನಿಗಳ ಪ್ರತಿಯೊಂದು ಸಮಾರಂಭವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮುಂದೆ ನಿಂತು ನಡೆಸಿ ಕೊಡುತ್ತಿದ್ದಾರೆ.
ಅವರು ಕಳೆದ ಒಂದೂವರೆ ವರ್ಷದಿಂದ ಸಾಕಷ್ಟು ಓಡಾಟದಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪು ಅವರು ನಮ್ಮನ್ನು ಅಗಲಿ ನೋಡನೋಡುತ್ತಾ ಒಂದೂವರೆ ವರ್ಷ ಕಳೆದೇ ಹೋಯಿತು. ಅವರು ಇರುವ ದಿನದ ತನಕ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಲು ಮಾತನಾಡಲು ಮುಂದೆ ಬರದ ಅಶ್ವಿನಿ ಅವರು ಈಗ ಗಟ್ಟಿಗಿತ್ತಿಯಂತೆ ನಿಂತು ದೊಡ್ಮನೆ ಸೊಸೆ ಜವಾಬ್ದಾರಿ ಹೊರಲೇಬೇಕಾಗಿದೆ.
ಇದಕ್ಕಾಗಿ ಬಿಡುವಿಲ್ಲದೆ ವರ್ಷದಿಂದ ನೂರಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬಹಳ ನಾಚಿಕೆ ಸ್ವಭಾವದವರು, ಹೀಗಾಗಿ ಅವರ ಕೆಲಸ ಮಾಡಿದ್ದು ಹೆಚ್ಚು, ಮಾತನಾಡಿದ್ದು ಕಡಿಮೆ. ಅದರಲ್ಲೂ ಅಪ್ಪು ಅಗಲಿಕೆ ನಂತರ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಪಕಿಯಾಗಿ ಸಂಸಾರದ ಯಜಮಾನಿ ಆಗಿ ಮಾತನಾಡಲೇಬೇಕಾದ ಸಂದರ್ಭ ಬಂದರೂ ಮುತ್ತಿನಂತೆ ಎರಡು ಮಾತನಾಡಿದ್ದಾರೆಯೇ ಹೊರತು ಎಲ್ಲೂ ಸಹ ಹೆಚ್ಚಿನ ಮಾತುಗಳನ್ನು ಹರಿಬಿಟ್ಟವರೇ ಅಲ್ಲ.
ಇಷ್ಟರಮಟ್ಟಿಗೆ ಸಭ್ಯತೆಯುಳ್ಳ ಸಂಸ್ಕಾರವಂತ ಹೆಣ್ಣುಮಗಳಾಗಿರುವ ಅಶ್ವಿನಿ ಅವರ ಇದೇ ಸ್ವಭಾವ ಕನ್ನಡಿಗರಿಗೆ ಮತ್ತಷ್ಟು ಹಿಡಿಸಿದೆ. ಒಂದೆರಡು ರೀಲ್ಸ್ ಮಾಡಿ ವೈರಲ್ ಆಗಿರುವ ಹುಡುಗಿಯರೇ ದೊಡ್ಡ ಸ್ಟಾರ್ ಮಟ್ಟಕ್ಕೆ ಬಿಲ್ಡಪ್ ಕೊಡುವಂತಹ ಈ ಕಾಲದಲ್ಲೂ ಇಡೀ ಕರ್ನಾಟಕವೇ ಹೊತ್ತು ಮೆರೆಸುವ ರಾಜವಂಶದ ರಾಜಕುಮಾರನ ಮಡದಿಯಾಗಿದ್ದರೂ ಕೂಡ ಇವರ ಸಿಂಪಲ್ ವ್ಯಕ್ತಿತ್ವ ಇವರನ್ನು ಅಭಿಮಾನಿಗಳ ಮನಸ್ಸಿನಲ್ಲಿ ಇನ್ನು ದೊಡ್ಡ ಸ್ಥಾನಕ್ಕೇರಿಸಿದೆ.

ಆದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ತಿಳಿಯದ ಇನ್ನೂ ಅನೇಕ ವಿಷಯಗಳಿವೆ, ಅದೇನೆಂದರೆ ಅಪ್ಪು ಹೇಗೆ ವರ್ಕ್ ಔಟ್, ಟ್ರಾವೆಲಿಂಗ್, ಟ್ರಕ್ಕಿಂಗ್, ಸ್ಟಂಟ್ಸ್ ಇವುಗಳಲ್ಲಿ ಆಸಕ್ತಿ ಹೊಂದಿದ್ದರೋ ಅಷ್ಟೇ ಆಸಕ್ತಿಯನ್ನು ಅಶ್ವಿನಿ ಅವರು ಸಹ ಹೊಂದಿದ್ದರು. ಈ ಸಮಾನ ಆಸಕ್ತಿಯೇ ಇಬ್ಬರನ್ನು ಒಂದು ಮಾಡಿದ್ದು ಎಂದರೂ ತಪ್ಪಾಗಲಾರದು. ಆದರೆ ಎಲ್ಲೂ ಕೂಡ ಅವರು ಕ್ಯಾಮೆರಾ ಎದುರು ಈ ರೀತಿ ಕಾಣಿಸಿಕೊಂಡಿರಲಿಲ್ಲ.
ತಮ್ಮ ಆಸಕ್ತಿ ಬಗ್ಗೆ ಹೇಳಿಕೊಂಡಿದ್ದು ಮತ್ತು ತೋರಿಸಿಕೊಂಡಿದ್ದು ಕೂಡ ಕಡಿಮೆಯೇ. ಆದರೆ ಇದ್ದಕ್ಕಿದ್ದಂತೆ ಇವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದೇನೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದಾಗಿದೆ. ಕಿಕ್ ಔಟ್ ಪ್ರಾಕ್ಟೀಸ್ ಮಾಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆರೋಗ್ಯದ ಕಡೆ ಗಮನ ಕೊಡಲು ಈ ರೀತಿ ಮಾಡುತ್ತಿದ್ದಾರೋ ಅಥವಾ ವೇಟ್ ಲಾಸ್ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ.
ಇನ್ನು ಕೆಲವು ಮೂಲಗಳ ಪ್ರಕಾರ ಇದು ಪುನೀತ್ ರಾಜಕುಮಾರ್ ಅವರು ಇದ್ದ ದಿನದಲ್ಲಿ ಮಾಡಿದ್ದ ವಿಡಿಯೋ ಆಗಿತ್ತು, ಈಗಷ್ಟೇ ಅದು ವೈರಲ್ ಆಗಿದೆ ಎನ್ನುವ ಮಾತುಗಳು ಇವೆ. ಈ ಬಗ್ಗೆ ಎಲ್ಲಿಯೂ ಕೂಡ ಇದುವರೆಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಅಪ್ಪು ಅಭಿಮಾನಿಗಳು ಮಾತ್ರ ಅತ್ತಿಗೆಯ ವರ್ಕೌಟ್ ನೋಡಿ ಹೇಗೋ ತಮಗಿರುವ ಒತ್ತಡದಿಂದ ಹೊರ ಬಂದರೆ ಸಾಕು ಎಂದು ಎನ್ಕರೇಜ್ ಮಾಡುತ್ತಿದ್ದಾರೆ.
ಆ ವಿಡಿಯೋ ಕೆಳಗಿದೆ ನೋಡಿ…
Ashwini Mam 💥💥#AshwiniPuneethRajkumar #AshwiniPRK #PowerStar #DrPuneethRajkumar @PuneethRajkumar @Ashwini_PRK @yuva_rajkumar pic.twitter.com/eMzgQA8Er4
— Power Of Youth (@youth_powerof) February 17, 2023