Ashwagandha Health: ಆಯುರ್ವೇದ ಎಂದ ಕೂಡಲೇ ಮೊದಲು ನೆನಪು ಬರುವುದೇ ಅಶ್ವಗಂಧ. ಅಶ್ವ ಅಂದರೆ ಕುದುರೆ, ಕುದುರೆ ತರ ಶಕ್ತಿ ಇದೆ ಎಂದು ಹೇಳುತ್ತಾರೆ ಅದಕ್ಕಾಗಿ ಅಶ್ವಗಂಧ ಎಂದು ಹೆಸರು ಬಂತು ಎಂದು ಹೇಳಲಾಗುತ್ತದೆ.
ಅಶ್ವಗಂಧದ ಬೇರಿನಿಂದ ಚೂರ್ಣವನ್ನು ತಯಾರಿಸಿಕೊಳ್ಳಿ ಇದು ಮೂಳೆ ಸವಕಳು, ನಿಶಕ್ತಿ ಮತ್ತು ವಯಸ್ಸಾದಂತವರಿಗೆ ಮೊಣಕಾಲು ನೋವಿಗೆ ಈ ಚೂರ್ಣವು ತುಂಬಾ ಉಪಯೋಗಕಾರಿಯಾಗಿರುತ್ತದೆ. ಪಾಶ್ವ ವಾಯು ಕಾಯಿಲೆಗೆ ಇದು ತುಂಬಾ ಒಳ್ಳೆಯ ಮದ್ದು. ಮೂಳೆಗಳು ಸದೃಢವಾಗಲು ಅಶ್ವಗಂಧವನ್ನು ಬಳಸಬೇಕು.
ಅಶ್ವಗಂಧ ಚೂರ್ಣವನ್ನು ಬಿಸಿ ನೀರಿನಲ್ಲಿ ತೆಗೆದುಕೊಂಡರೆ ದೇಹವನ್ನು ಗಟ್ಟಿ ಮಾಡುತ್ತದೆ, ನಿಶಕ್ತಿ ಹಾಗೂ ನರಗಳು ಸದೃಢಗೊಳ್ಳುತ್ತದೆ. ಹಾಲಿನಲ್ಲಿ ತೆಗೆದುಕೊಂಡರೆ ವೀ-ರ್ಯಾಣು ಉತ್ಪತ್ತಿಯನ್ನು ಮತ್ತು ಕಾ-ಮುದ್ರೇಕ ಹೆಚ್ಚು ಮಾಡುತ್ತದೆ. ಅಶ್ವಗಂಧ ಚೂರ್ಣವನ್ನು ಮಜ್ಜಿಗೆಯಲ್ಲಿ ಹಾಕಿಕೊಂಡು ಕುಡಿದರೆ ಹೊಟ್ಟೆಯಲ್ಲಿರುವಂತಹ ಸಣ್ಣ ಸಣ್ಣ ಗುಳ್ಳೆಗಳು ಸಂಪೂರ್ಣ ನಾಶವಾಗುತ್ತದೆ.
ಅಶ್ವಗಂಧ ಚೂರ್ಣವನ್ನು ಬೆಣ್ಣೆಯಲ್ಲಿ ತೆಗೆದುಕೊಳ್ಳುವುದಾದರೆ ಸ್ವಲ್ಪ ಪಥ್ಯವನ್ನು ಮಾಡಬೇಕಾಗುತ್ತದೆ ಮತ್ತು ಬೆಣ್ಣೆಯಲ್ಲಿ ಸೇವಿಸುವುದರಿಂದ ಬಿಳಿ ಮುಟ್ಟಿನ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ. ಇದೇ ರೀತಿ 48 ದಿನ ಸೇವನೆ ಮಾಡಬೇಕು.
ಅಶ್ವಗಂಧ ಚೂರ್ಣವನ್ನು ತೆಗೆದುಕೊಳ್ಳುವಾಗ ಸ್ವಲ್ಪ ಪಥ್ಯವನ್ನು ಮಾಡಬೇಕಾಗುತ್ತದೆ. ಪಥ್ಯದಲ್ಲಿ ಸೋರೆಕಾಯಿ ಮತ್ತು ಹರಿವೆ ಸೊಪ್ಪು ಉಪಯೋಗಿಸಬೇಕು. ಗಟ್ಟಿ ಪದಾರ್ಥ ಮಸಾಲೆ ಪದಾರ್ಥವನ್ನು ಉಪಯೋಗಿಸಬಾರದು. ಬೆಳೆದಿರುವಂತಹ ಅಕ್ಕಿಯನ್ನ ಚೆನ್ನಾಗಿ ಬೇಯಿಸಿ ಊಟ ಮಾಡುವಂತದ್ದು ಮತ್ತು ಹುಳಿ ಮೊಸರು ತಿನ್ನಬಾರದು.
48 ದಿನ ಈ ಪಥ್ಯವನ್ನು ಮಾಡಿದರೆ ಗರ್ಭದಲ್ಲಿರುವಂತಹ ತೊಂದರೆಗಳು ಸಂಪೂರ್ಣ ವಾಸಿಯಾಗುತ್ತದೆ. ಸೋರೆಕಾಯಿ ಸೊಪ್ಪಿನ ತರಕಾರಿಯನ್ನು ಚೆನ್ನಾಗಿ ಉಪಯೋಗಿಸಬೇಕು. ಅಶ್ವಗಂಧ ಎಲೆಯನ್ನ ಅರೆದು ಎಳ್ಳೆಣ್ಣೆಯ ಜೊತೆಗೆ ಮಿಶ್ರಣ ಮಾಡಿ ಹಳೆ ಗಾಯಗಳಿಗೆ ಹಚ್ಚುವುದರಿಂದ ಗಾಯಗಳು ಕಡಿಮೆಯಾಗುತ್ತದೆ.