ಚಂದನವನದ ಯುವ ನಟಿ ಆಶಿಕಾ ರಂಗನಾಥ್. ಈಗಾಗಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ರಾಜ್ಯಾದ್ಯಂತ ಫೇಮಸ್ ಆಗಿದ್ದು, ಕರ್ನಾಟಕದ ಕ್ರಷ್ ಎನಿಸಿದ್ದಾರೆ. ನೋಡುವುದಕ್ಕೂ ಅತ್ಯಂತ ಸುಂದರವಾಗಿರುವ ನಟಿ ಆಶಿಕಾ ರಂಗನಾಥ್ ಪ್ರತಿಭಾನ್ವಿತ ನಟಿ ಅನ್ನೋದರಲ್ಲಿ ನೋ ಡೌಟ್. ಆಶಿಕಾ ರಂಗನಾಥ್ ಸ್ಯಾಂಡಲ್ ವುಡ್ ನ ಮಿಲ್ಕ್ ಬ್ಯೂಟಿ ಎಂದೇ ಪ್ರಸಿದ್ಧರಾಗಿದ್ದಾರೆ.
ಇಂದು ಸಾಕಷ್ಟು ಸಿನಿಮಾ ಅವಕಾಶಗಳು ಆಶಿಕಾ ರಂಗನಾಥ್ ಅವರನ್ನ ಅರಸಿ ಬರುತ್ತಿವೆ. ನಟಿ ಆಶಿಕಾ ರಂಗನಾಥ್ 2014ರಲ್ಲಿ ‘ ಕ್ಲೀನ್ ಎಂಡ್ ಕ್ಲಿಯರ್ ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ಪಡೆದವರು. ಇವರು 2016ದಲ್ಲಿ ಕ್ರೇಜಿ ಬಾಯ್ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ರು. ಆಶಿಕಾ ರಂಗನಾಥ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ್ದು ನಿರ್ದೇಶಕ ಮಹೇಶ್ ಬಾಬು ಅವರು.
ಆಶಿಕಾ ರಂಗನಾಥ್ ಅವರು ಆಗಸ್ಟ್ 5, 1996ರಲ್ಲಿ ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಹಾಗೂ ತಾಯಿ ಸುಧಾ. ರಂಗನಾಥ್ ಅವರು ಸಿವಿಲ್ ಕಾಂಟ್ರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಆಶಿಕಾ ಅವರ ಸಹೋದರಿ ಅನುಷಾ ಕೂಡ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಹೆಸರು ಗಳಿಸಿದವರು. ಆದರೆ ಇತ್ತೀಚಿಗೆ ಹೆಚ್ಚು ಹೆಚ್ಚು ನಟನೆಯಲ್ಲಿ ಮುಂದುವರೆಯುತ್ತಿರುವುದು ಮಾತ್ರ ಆಶಿಕಾ.
ಆಶಿಕಾ ರಂಗನಾಥ್ ಬೆಂಗಳೂರಿನಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ್ದಾರೆ. ಆಶಿಕಾ ರಂಗನಾಥ್ ಅವರು ಮೊದಲ ಸಿನಿಮಾದ ಮೂಲಕವೇ ಗುರುತಿಸಿಕೊಂಡರು. ಈವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ, ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ ಮೊದಲಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಇವರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಬ್ರೇಕ್ ಕೊಟ್ಟಿದ್ದು ಶರಣ್ ಅಭಿನಯದ ರಾಂಬೊ ಸಿನಿಮಾ.
ಶರಣ್ ಹಾಗೂ ಆಶಿಕಾ ಅವರ ಕಾಂಬಿನೇಶನ್ ಪ್ರೇಕ್ಷಕರಿಗೆ ಬಹಳ ಇಷ್ಟವಾಯ್ತು. ಇತ್ತೀಚಿಗೆ ರಿಲೀಸ್ ಆಗಿರುವ ಕಾಣೆಯಾದವರ ಬಗ್ಗೆ ಪ್ರಕಟಣೆ ಎನ್ನುವ ಸಿನಿಮಾದಲ್ಲಿ ಚಿಕ್ಕದಾದ ಚೊಕ್ಕವಾದ ಪಾತ್ರ ಒಂದನ್ನು ನಿಭಾಯಿಸಿದ್ದಾರೆ. ಇದಕ್ಕೂ ಸಾಕಷ್ಟು ಪ್ರಶಂಸೆಗಳೂ ಬಂದಿದ್ದವು. ಇನ್ನು ನಟಿ ಆಶಿಕಾ ರಂಗನಾಥ್ ಕನ್ನಡದಲ್ಲಿ ಮಾತ್ರವಲ್ಲದೆ ಸೌತ್ ನ ಇತರ ಭಾಷಾ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ವಿಚಾರದ ಬಗ್ಗೆ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೌದು, ಸಿನಿಮಾದಲ್ಲಿ ಅಭಿನಯಿಸುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸದಾ ಆಕ್ಟಿವ್ ಆಗಿರುತ್ತಾರೆ ನಟಿ ಆಶಿಕಾ ರಂಗನಾಥ್. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.6 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಹಲವು ವಿವಿಧ ಪೋಟೋಶೂಟ್ ಗಳನ್ನು ಮಾಡಿಸಿ ಇನ್ಸ್ಟಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಗುಡ್ ನ್ಯೂಸ್ ಒಂದನ್ನು ಆಶಿಕಾ ಹಂಚಿಕೊಂಡಿದ್ದಾರೆ.
ಅದೇನು ಗೊತ್ತಾ ತಮಿಳು ಸಿನಿಮಾ ಒಂದರ ಮುಹೂರ್ತದ ಸಮಯದ ಫೋಟೋಗಳನ್ನು ಹಂಚಿಕೊಂಡಿದ್ದು, ಆಶಿಕಾ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆಲುಗು ಸೂಪರ್ ಸ್ಟಾರ್ ಸಿದ್ಧಾರ್ಥ ಜೊತೆ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಆಶಿಕಾ ರಂಗನಾಥ್. ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದು, ಇನ್ನಷ್ಟು ಡೀಟೇಲ್ಸ್ ನ್ನು ಸಧ್ಯದಲ್ಲಿಯೇ ನೀಡಲಿದ್ದೇನೆ ಎಂದಿದ್ದಾರೆ. ಸದ್ಯ ಅವರ ಅಭಿಮಾನಿಗಳು ಅಲ್ ದ ಬೆಸ್ಟ್ ಅಂತ ವಿಶ್ ಮಾಡಿದ್ದಾರೆ. ಅಶಿಕಾ ರಂಗನಾಥ್ ಅವರ ತಮಿಳು ಮುಹೂರ್ತಂ ಸಮಯದಲ್ಲಿ ಧರಿಸಿದ್ದ ಡ್ರೆಸ್ ನಲ್ಲಿ ಫೊಟೋ ತೆಗೆಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.