ಯಾವುದಾದರೂ ಸಿನಿಮಾ ರಿಲೀಸ್ ಆದರೆ ಆಥವಾ ರಿಲೀಸ್ ಗೂ ಮುನ್ನ ಅದರ ಹಾಡುಗಳೇ ಸಖತ್ ಸೌಂಡ್ ಮಾಡೋದು. ಒಂದು ಬಾರಿ ಯಾವುದಾದರೂ ಸಿನಿಮಾ ಹಾಡು ಇಷ್ಟವಾದರೆ ಆಮೇಲೆ ಜನ ಸಾಮಾನ್ಯರಷ್ಟೇ ಅಲ್ಲ ನಟಿಯರು ಕೂಡ ಆ ಹಾಡಿಗೆ ಕುಣಿದು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅದ್ರಲ್ಲೂ ರೀಲ್ಸ್ ಗಳಲ್ಲಿ ಅದೇ ಹಾಡುಗಳದ್ದೇ ಡ್ಯಾನ್ಸ್ ಗಳ ಕಾರುಬಾರು. ಇದೀಗ ಇದೇ ರೀತಿ ಸಮಂತಾ ಅವರ ಹಾಡೊಂದಕ್ಕೆ ಕನ್ನಡದ ನಟಿ ಆಶಿಕಾ ರಂಗನಾಥ್ ಕೂಡ ಸೂಪರ್ ಸ್ಟೆಪ್ ಹಾಕಿದ್ದು ಇದು ಭಾರೀ ವೈರಲ್ ಆಗಿದೆ.
ಹೌದು, ಪ್ರಸ್ತುತ ಕನ್ನಡದ ಮುಂಚೂಣಿ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಕನ್ನಡದ ಖ್ಯಾತ ನಾಯಕ ನಟರೊಂದಿಗೆ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಆಶಿಕಾ ಅವರು ಆಪಲ್ ಬ್ಯೂಟಿ ಅಂತಲೇ ಕರೆಸಿಕೊಳ್ಳುತ್ತಾರೆ. ಇವರು 2016 ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಆ ನಂತರ 2017 ರಲ್ಲಿ ಮಾಸ್ ಲೀಡರ್ ಹಾಗೂ ಮುಗುಳುನಗೆ ಚಿತ್ರದಲ್ಲಿ, 2018ರಲ್ಲಿ ತೆರೆಕಂಡ ‘ರ್ಯಾಂಬೋ 2’ ಸಿನಿಮಾ ಆಶಿಕಾ ಅವರ ವೃತ್ತಿ ಜೀವನಕ್ಕೆ ಬಹಳ ದೊಡ್ಡ ಗೆಲುವನ್ನು ತಂದು ಕೊಟ್ಟಿತ್ತು.
ಅದೇ ರೀತಿ ಶ್ರೀ ಮುರಳಿ ಜೊತೆ ಮದಗಜ ಸಿನಿಮಾದಲ್ಲಿಯೂ ಆಶಿಕಾ ಅದ್ಭುತವಾಗಿ ನಟಿಸಿದ್ದರು. ಇನ್ನು ಕಿಚ್ಚ ಸುದೀಪ್ ಅವರ ಕೋಟಿಕೊಬ್ಬ 3 ಸಿನಿಮಾದಲ್ಲಿ ಐಟಂ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿ ವೀಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಂಡಿದ್ದರು. ಹೀಗೆ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಅವರು ಅದು ಎಷ್ಟೇ ಬ್ಯುಸಿ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಅದೇ ರೀತಿ ಇದೀಗ ಅವರು ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಖತ್ ಆಗಿ ಆಶಿಕಾ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಹೌದು, 2018ರಲ್ಲಿ ತೆರೆಗೆ ಬಂದ ‘ರಂಗಸ್ಥಲಂ’ ಚಿತ್ರದ ‘ರಂಗಮ್ಮ ಮಂಗಮ್ಮ’ ಹಾಡಿಗೆ ಆಶಿಕಾ ಕುಣಿದಿದ್ದು, ಅವರ ಸ್ಟೆಪ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಸಮಂತಾ ಅವರು ನಟಿಸಿದ್ದರು. ಈ ಸಖತ್ ಹಾಡಿಗೆ ವಿಶೇಷ ಗೆಟಪಿನಲ್ಲಿಯೇ ಕುಣಿದ ಆಶಿಕಾ ರಂಗನಾಥ್ ಇನ್ನಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.