ದೇಶ ಕಾಯಲು ಹೋರಟ ಕನ್ನಡತಿಯರು ಇವರಿಗೆ ಬಿಗ್ ಸಲ್ಯೂಟ್…

Today News / ಕನ್ನಡ ಸುದ್ದಿಗಳು

ಭಾರತೀಯ ಸೇನೆ ಅಂದ ತಕ್ಷಣ ಕಣ್ಣ ಮುಂದೆ ಬರುವುದು ದೇಶದ ಗಡಿಯಲ್ಲಿ ಬಂದೂಕು ಹಿಡಿದು ನಿಂತ ಯೋಧರು. ಇವರ ಹಿಂದೆ ದೊಡ್ಡ ಪ್ರಪಂಚವೇ ಇದೆ. ಕೇವಲ ಯೋಧ ಮಾತ್ರ ಸೇನೆಯಲ್ಲ. ಅದರಲ್ಲೂ ತಂತ್ರಜ್ಞಾನ ಆಡಳಿತ ವೈದ್ಯಕೀಯ ಇಂಜಿನಿಯರಿಂಗ್‌ ಶೈಕ್ಷಣಿಕ ನ್ಯಾಯಾಂಗ ವಿಭಾಗದಲ್ಲಿ ಸೇವೆ ಸಲ್ಲಿಸಲು ಹಲವಾರು ಉದ್ಯೋಗಗಳೂ ಇದೆ. ಸೇನೆಗೆ ಸೇರಲು ಬಹಳ ಮುಖ್ಯವಾಗಿ ಬೇಕಾಗಿರುವುದು ದೈಹಿಕ ಸದೃಢತೆ, ವಯಸ್ಸು ಹಾಗೂ ಓದು. ಇದರಲ್ಲಿ ಒಂದು ತಪ್ಪಿಹೋದರೂ ಸೇನೆಗೆ ಸೇರುವ ಕನಸು ನನಸಾಗುವುದಿಲ್ಲ. ಇದೇ ರೀತಿ ಭಾರತೀಯ ಸೇನೆಗೆ ಸೇರೆಬೇಕು ಎಂದು ಕನಸು ಕಂಡ ಇಬ್ಬರೂ ಯುವತಿಯರು ದೇಶ ಸೇವೆಯ ಪಣ ತೊಟ್ಟು ದೇಶ ಸೇವೆಗಾಗಿ ಹೊರಟು ನಿಂತಿದ್ದಾರೆ. ಅವರು ಯಾರು ಎಲ್ಲಿಯವರು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
BSF jurisdiction: Long arm of the Centre - UP Front News - Issue Date: Nov 8, 2021

ಸಾಹಸ ಮನೋವೃತ್ತಿ ದೇಶ ಸೇವಾ ಮನೋಭಾವ ಇರುವ ಪ್ರತಿಯೊಬ್ಬ ಯುವಕ ಯುವತಿಯರ ಕನಸು ಒಂದೇ. ಅದು ಭಾರತೀಯ ರಕ್ಷಣಾ ಪಡೆಯನ್ನು ಸೇರಬೇಕು ಎಂಬುದು. ಸೇನಾಧಿಕಾರಿಯ ಹುದ್ದೆ ದೊರಕಿಸಿಕೊಡುವ ಘನತೆ ಗಾಂಭೀರ್ಯ ಮತ್ತು ಸಮಾಜದಲ್ಲಿ ಇದಕ್ಕೆ ದೊರಕುವ ಗೌರವ ಇದಕ್ಕೆ ಮುಖ್ಯ ಕಾರಣ. ಸೇನೆಗೆ ಸೇರಬೇಕು ಅನ್ನೋದನ್ನೇ ದೊಡ್ಡ ಕನಸಾಗಿಟ್ಟುಕೊಂಡು ಕೂತರೆ ಪ್ರಯೋಜನ ಇಲ್ಲ. ಕನಸನ್ನು ನನಸಾಗಿಸಿಕೊಳ್ಳುವ ಮಾರ್ಗದ ನೀಲನಕ್ಷೆ ದೊರಕಿಸಿಕೊಳ್ಳುವುದು ಮುಖ್ಯ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ ( BSF ) ಇದು ನಮ್ಮ ದೇಶದ ಅತ್ಯಂತ ಶಕ್ತಿಯುತ ಭದ್ರತಾ ಪಡೆ. ಅದೆಂತದ್ದೆ ಕಠಿಣ ಪರಿಸ್ಥಿತಿ ಇದ್ದರೂ ಸಹ ಅದನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಈ ಪಡೆಗೆ ಇದೆ. ಗಡಿಯಲ್ಲಿ ನಿಂತು ವೈರಿಗಳ ಸದೆಬಡಿದು ದೇಶ ಕಾಯುವುದು ಇವರ ಕೆಲಸ. ಇಂತಹ ಭದ್ರತಾ ಪಡೆಗೆ ನಮ್ಮ ರಾಜ್ಯದ ಇಬ್ಬರು ಯುವತಿಯರು ಆಯ್ಕೆ ಆಗುವ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ.

BSF GD Constable Recruitment 2021: Apply for 269 posts At rectt.bsf.gov.in | Deets Inside | India.com

ನಮ್ಮ ದೇಶದ ಗಡಿ ರಕ್ಷಣೆ ಮಾಡುವುದು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಇದರ ಹೊಣೆ ಆಗಿರುತ್ತದೆ. ದೇಶದ ಗಡಿಯಲ್ಲಿ ಮಾತ್ರ ಅಲ್ಲದೆ ದೇಶದ ಒಳಗೂ ಆಂತರಿಕ ಸಮಸ್ಯೆ ಉದ್ಭವ ಆದಾಗ ಆಗಲೂ ಸಹಾಯಕ್ಕೆ ಬರುವುದು ಇದೆ BSF. ಇದು NSG ಕಮಾಂಡೋಗಳಷ್ಟೇ ಶಕ್ತಿಶಾಲಿಯಾದ ಭದ್ರತಾ ಪಡೆ ಆಗಿದೆ. ಭಾರತದಲ್ಲೇ ಪ್ರತಿಷ್ಠಿತ ಹಾಗೂ ಶಕ್ತಿಯುತವಾದ ಭದ್ರತಾ ಪಡೆಗೆ ನಮ್ಮ ಕರುನಾಡಿನ ಕರಾವಳಿಯಿಂದ ಇಬ್ಬರು ಹೆಣ್ಣುಮಕ್ಕಳು ಆಯ್ಕೆ ಆಗಿದ್ದಾರೆ. BSF ಗೆ ಆಯ್ಕೆ ಆದ ಈ ಯುವತಿಯರ ಹೆಸರು ರಮ್ಯ ಹಾಗೂ ಯೋಗಿತಾ ಎಂದು. ರಮ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜಾವತಿ ದಂಪತಿಗಳ ಮಗಳು. ಇನ್ನು ಯೋಗಿತಾ ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮೇದಪ್ಪ ಗೌಡ ಹಾಗೂ ದೇವಕಿಯವರ ಪುತ್ರಿ. ಈ ಇಬ್ಬರೇ ಕರುನಾಡಿನಿಂದ BSF ಗೆ ಆಯ್ಕೆ ಆದ ಹೆಮ್ಮೆಯ ಕನ್ನಡತಿಯರು.

ಇದನ್ನೂ ಓದಿ >>>  ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಿಮದಲ್ಲಿ ಸಾಗಿದ ಯೋಧರು; ವಿಡಿಯೋ ನೋಡಿ ಸಲಾಂ ಎಂದ ಪ್ರಧಾನಿ ಮೋದಿ

ರಮ್ಯ ತನ್ನ ಶಾಲಾ ದಿನಗಳಲ್ಲಿ NCC ಸೇರಿ ಅಲ್ಲಿ ತರಬೇತಿ ಪಡೆದುಕೊಂಡಿದ್ದರು. ಇನ್ನು ಯೋಗಿತಾ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಮೈಕ್ರೋ ಬಯಾಲಜಿಯಲ್ಲಿ ಎಂ ಎಸ್ಸಿ ಮುಗಿಸಿದ್ದಾರೆ. ಇನ್ನು ಇವರಿಬ್ಬರೂ ೨೦೧೮ ರಲ್ಲಿ ಪರೀಕ್ಷೆ ತೆಗೆದುಕೊಂಡಿದ್ದು ಕಳೆದ ವರ್ಷ ಮೆಡಿಕಲ್ ಪರೀಕ್ಷೆ ಮಾಡಿದ್ದರು. ಆದರೆ ಕಳೆದ ವರ್ಷ ಕರೋನ ಇದ್ದ ಕಾರಣ ಅದರ ಫಲಿತಾಂಶ ಬರುವುದು ತಡವಾಗಿತ್ತು. ಇನ್ನು ಮೀಡಿಯಾ ಜೊತೆ ಮಾತನಾಡಿದ ಯೋಗಿತಾ ತನ್ನ ಅನಿಸಿಕೆಗಳನ್ನು ಈ ರೀತಿಯಾಗಿ ತಿಳಿಸಿದ್ದಾರೆ. ತನಗೆ ಮನೆಯಲ್ಲಿ ಸೇನೆಗೆ ಸೇರಲು ಬಹಳ ಬೆಂಬಲ

ನೀಡಿದ್ದಾರೆ ಮೊದಲಿನಿಂದಲೂ ದೇಶದ ಸೇವೆ ಆರ್ಮಿ ಎಂದರೆ ಅದೇನೋ ಪುಳಕ ಆ ಕಾರಣಕ್ಕೆ ಆರ್ಮಿ ಸೇರಬೇಕು ಎನ್ನುವ ಆಸೆ ಇತ್ತು ಅದರಲ್ಲೂ ತನ್ನ ಮಾವನ ಮಕ್ಕಳು ಇಬ್ಬರೂ ಸಹ ಆರ್ಮಿಯಲ್ಲಿ ಇರುವುದರಿಂದ ಅವರನ್ನು ನೋಡಿ ಆರ್ಮಿಗೆ ಸೇರಲೇಬೇಕು ಅನಿಸಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ತಾವು ಆರ್ಮೀಗೆ ಸೇರುವ ಬಗ್ಗೆ ಸುದ್ಧಿ ಕಾಣುತ್ತಾ ಇರುವುದು ಬಹಳ ಖುಷಿ ತಂದಿದೆ ಎಂದು ಹೇಳಿದ್ದಾರೆ. ಇನ್ನು ರಮ್ಯ ಅವರು ತನ್ನ ಅನಿಸಿಕೆಯನ್ನು ಈ ರೀತಿಯಾಗಿ ಹೇಳಿದ್ದಾರೆ. ಆರ್ಮಿ ಎಂದರೆ ತನಗೆ ಬಹಳ ಖುಷಿ. ತಾನು ಶಾಲಾ ದಿನಗಳಲ್ಲಿ NCC ಗೆ ಸೇರಿದಾಗ ಅಲ್ಲಿ ಯಾರಾದರೂ ಒಬ್ಬರು ಆರ್ಮಿ ಜನರು ಬಂದು ಟ್ರೇನಿಂಗ್ ನೀಡುತ್ತಾ ಇದ್ದರು ಇದರಿಂದ ತನಗೆ ಆರ್ಮಿಗೇ ಸೇರಬೇಕು ಎಂಬ ಹಂಬಲ ಉಂಟಾಗಿದ್ದು ಎಂದು ತಿಳಿಸಿದ್ದಾರೆ.

BSF's 56th Foundation Day today, PM Modi salutes the soldiers engaged in defense of the border

ಅಷ್ಟೇ ಅಲ್ಲದೆ ಇವರಿಬ್ಬರೂ ಯುವತಿಯರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಾಗಾಗಿ ಇವರಿಬ್ಬರಿಗೂ ಫಿಸಿಕಲ್ ಟೆಸ್ಟ್ ನಲ್ಲಿ ಯಾವುದೇ ಅಡಚರಣೆ ಉಂಟಾಗಲಿಲ್ಲ. ಈ ವಿಷಯ ತಿಳಿಯುತ್ತಾ ಇದ್ದಂತೆ ಹಲವಾರು ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗಳು ಇಬ್ಬರಿಗೂ ಶುಭ ಕೋರಿದ್ದಾರೆ. ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕಡೆ ಇವರಿಬ್ಬರಿಗೂ ಸನ್ಮಾನ ಮಾಡಲಾಗಿದೆ. ಇವರಿಬ್ಬರೂ ಮಧ್ಯಪ್ರದೇಶದ ಗ್ವಾಲಿಯರ್ ನ ತೇಕನ್ಪೂರ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕರುನಾಡಿನ ಈ ಇಬ್ಬರು ಹೆಮ್ಮೆಯ ಹೆಣ್ಣುಮಕ್ಕಳು ದೇಶಕ್ಕಾಗಿ ಹೋರಾಡಿ ನಮ್ಮ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಎಲ್ಲರಂತೆ ನಾವೂ ಕೂಡಾ ಆಶಿಸೋಣ.

 
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...