
ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಕಳೆದಿದೆ.
ಆದರೂ ಕೂಡ ಈಗಲೂ ಎಲ್ಲೆಡೆಯೂ ಅಪ್ಪುವಿನ ಬಗ್ಗೆಯೇ ಮಾತುಗಳು ಆಗಾಗ ಕೇಳಿಬರುತ್ತದೆ. ಅಪ್ಪು ಜೊತೆಗಿರದಿದ್ದರೂ ಎಲ್ಲರ ಹೃದಯದಲ್ಲಿ ಜೀವಂತವಾಗಿ ದ್ದಾರೆ. ಪುನೀತ್ ರಾಜ್‌ಕುಮಾರ್ ಒಬ್ಬ ಒಳ್ಳೆಯ ನಟ ಅಷ್ಟೇ ಅಲ್ಲ, ನಿಷ್ಕಲ್ಮಶ ನಗು ಇರುವ ಅಪ್ಪಟ ಕನ್ನಡದ ವ್ಯಕ್ತಿ. ಅವರು ಅನೇಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆದರೆ ಎಲ್ಲೆಡೆಯೂ ಈಗಲೂ ಅಪ್ಪು ಅಪ್ಪು ಎಂದು ಜಪ ಮಾಡಬಾರದು. ಎಂದು ಫಿಲ್ಮ್ ಛೇಂಬರ್ ಅಲ್ಲಿ ಮಾತನಾಡಿದ್ದಾರೆ.
ಹೌದು ಈ ಮೊದಲು ಎಲ್ಲ ಹೊಸ ಸಿನಿಮಾಗಳ ಮೊದಲಿಗಷ್ಟೇ ಅಪ್ಪುವಿನ ಫೋಟೋ ಹಾಕಿ ಸ್ಮರಣಾರ್ಥ ಎನ್ನುತ್ತಿದ್ದರು. ಆಮೇಲೆ ಪುನೀತ್ ಪರ್ವ ಎಂದು ಕಾರ್ಯಕ್ರಮ ನಿರೂಪಿಸಿದರು.ಅದ್ಯಾವುದೇ ನಟನ ಸಿನಿಮಾ ಬಂದರೂ ಅಪ್ಪುವಿನ ಜೈಕಾರ ಕೂಗಲಾರಂಭಿಸಿದರು. ಮಹಾತ್ಮಾ ಗಾಂಧೀಜಿ ರಾಷ್ಟ್ರ ಪಿತ ಎಂದು ಎಲ್ಲ ಕಾರ್ಯಕ್ರಮ ಗಳಿಗೆ ಅವರ ಫೋಟೋ ಬಳಸಲು ಆಗುತ್ತದೆಯೇ. ಸರ್ಕಾರಿ ಕಚೇರಿಗಳಲ್ಲಿ ಅನಿವಾರ್ಯ ಮತ್ತು ಅವರಿಗೆ ನೀಡುವ ಗೌರವ ಸೂಚಕವಾಗಿ ಫೋಟೋ ಹಾಕಿ ಹಾರ ಹಾಕಿ ನಾವು ಅವರನ್ನು ಪೂಜಿಸುತ್ತೇವೆ ಅದರಂತೆ ಅಪ್ಪು ಅವರಿಗೆ ಕೂಡ ಗೌರವ ಮನ್ನಣೆಯನ್ನು ನೀಡೋಣ.
ಅದರ ಹೊರತಾಗಿ ಎಲ್ಲ ಕಾರ್ಯಕ್ರಮದಲ್ಲಿ ಅಪ್ಪು ಅಪ್ಪು ಅಂದರೆ ಅದೇನು ಚಂದ ಹೇಳಿ. ಎಂದಿದ್ದಾರೆ.
ಆದರೆ ಅವರೇನೆ ಹೇಳಲಿ ಅಭಿಮಾನಿಗಳನ್ನೇ ದೇವರು ಎಂದ ಅಪ್ಪುವನ್ನು ಮರೆಯುವುದಾದರೂ ಹೇಗೆ ಹೇಳಿ. ಅಷ್ಟಕ್ಕೂ ಅಪ್ಪುವಿನ ಕುರಿತಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಗೂ ಫಿಲ್ಮ್ ಚೇಂಬರ್ ಗೂ ಇರುವ ಲಿಂಕ್ ಆದ್ರೂ ಏನು ಎಂಬುದು ಈಗಲೂ ಅರಿವಾಗುತ್ತಿಲ್ಲ ಎಂಬುದು ಅಭಿಮಾನಿಗಳ ಮಾತು.
Comments are closed.