ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕೇವಲ ನಟನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿಯೂ ಕೂಡ ಹಲವಾರು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಬೆಳೆಯಲು ಕಾರಣೀಕರ್ತರಾಗಿದ್ದರು. ತಮ್ಮ ಸ್ವಂತ ಪ್ರೊಡಕ್ಷನ್ ಸಂಸ್ಥೆಯಲ್ಲಿ ತಾವೇ ನಟಿಸಿ ಹಣವನ್ನು ಮಾಡಬಹುದಾಗಿತ್ತು ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ನಿರ್ಮಾಣ ಸಂಸ್ಥೆಯನ್ನು ಕೇವಲ ಹೊಸ ಪ್ರತಿಭೆಗಳು ಮುನ್ನಡೆಗೆ ಬರಬೇಕು ಕನ್ನಡ ಚಿತ್ರರಂಗದಲ್ಲಿ ಅವರಿಗೆ ಉತ್ತಮ ಗುರುತು ಸಿಗಬೇಕು ಎನ್ನುವ ದೃಷ್ಟಿಯಲ್ಲಿ ನಿರ್ಮಿಸಿದ್ದರು. ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹಲವಾರು ನಿರ್ದೇಶಕರು ಹಾಗೂ ಅತ್ಯುತ್ತಮ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.
ಇನ್ನು ತಮ್ಮ ಸಿನಿಮಾಗಳ ಮೂಲಕವೂ ಕೂಡ ಸಾಂಸಾರಿಕ ಸಂದೇಶವನ್ನು ಸಮಾಜಕ್ಕೆ ಸಾರುವ ಕೆಲಸವನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿದ್ದಾರೆ. ಪುನೀತ್ ರಾಜಕುಮಾರ್ ರವರು ಬದುಕಿದ್ದಾಗಲೇ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ ಎಂಬುದು ನಮಗೆ ಮರಣದ ನಂತರ ತಿಳಿದು ಬಂದಿತ್ತು. ಹಲವಾರು ಸಾಮಾಜಿಕ ಕಾರ್ಯಗಳನ್ನು ತಮ್ಮ ಕುಟುಂಬಸ್ಥರಿಗೂ ಕೂಡ ತಿಳಿಸದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿದ್ದು ಗಮನಾರ್ಹವಾಗಿದೆ. ಕೇವಲ ಸಿನಿಮಾದಲ್ಲಿ ನಾಯಕನಾಗಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಜನನಾಯಕನಾಗಿ ಕಾಣಿಸಿಕೊಂಡವರು.
ಎಲ್ಲಕ್ಕಿಂತ ವಿಶೇಷವಾಗಿ ಅಪ್ಪು ಜನಪಯೋಗಿ ಹಾಗೂ ರೈತರಿಗೆ ಸಹಾಯಕವಾಗುವಂತಹ ಹಲವಾರು ಸರ್ಕಾರಿ ಯೋಜನೆಗಳಲ್ಲಿ ಯಾವುದೇ ಹಣವನ್ನು ಪಡೆಯದೆ ಜಾಹೀರಾತಿನಲ್ಲಿ ಹಾಗೂ ರಾಯಭಾರಿಯಾಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡವರು. ಅಪ್ಪು ಅವರ ಕುರಿತಂತೆ ಈ ಎಲ್ಲಾ ವಿಚಾರಗಳು ಕೂಡ ನಮಗೆ ಅವರ ಮರಣ ನಂತರವೇ ತಿಳಿದು ಬಂದಿದ್ದು. ಸರ್ಕಾರಿ ಕಾರ್ಯಕ್ರಮಗಳಿಗಾಗಿ ಇಷ್ಟೊಂದು ತಮ್ಮ ಜೀವನವನ್ನು ವಿನಯೋಗಿಸಿಕೊಂಡರು ಕೂಡ ಯಾವುದೇ ರಾಜಕೀಯ ಪಕ್ಷದಲ್ಲಿ ಅಪ್ಪು ಅವರು ಗುರುತಿಸಿಕೊಂಡಿಲ್ಲ. ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನ್ಯಾಯವಾಗಿ ನಡೆದುಕೊಂಡು ಬಂದವರು.
ಇನ್ನು ಕೊನೆಯ ಬಾರಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಿದ್ದಾಗಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಭೇಟಿ ಮಾಡಿರುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಆ ಸವಿನೆನಪುಗಳು ಅಭಿಮಾನಿಗಳನ್ನು ಕಾಡುತ್ತಿದೆ. ನೀವು ಕೂಡ ಈ ಫೋಟೋವನ್ನು ನೋಡಬಹುದಾಗಿದ್ದು ಅಪ್ಪು ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.