ಮುಗಿಯುವ ಹಾಗೇ ಕಾಣುತ್ತಿಲ್ಲ ಫ್ಯಾನ್ಸ್ ವಾರ್! ಇನ್ನು ಮುಂದೆ ರಾಜ್ ಕುಟುಂಬಕ್ಕೆ ಸಪೋರ್ಟ್ ಮಾಡಲ್ಲ ಎನ್ನುತ್ತಿರುವ ಡಿ ಬಾಸ್ ಅಭಿಮಾನಿಗಳು! ವಿಡಿಯೊ ವೈರಲ್…

ಮೊನ್ನೆ ಹೊಸಕೋಟೆಯಲ್ಲಿ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಸಮಯದಲ್ಲಿ ಆದ ಅವಘಡ ಎಲ್ಲರಿಗೂ ತಿಳಿದಿದೆ. ಇಂತಹ ಅನಾಗರಿಕ ವರ್ತನೆಯಿಂದ ಈಗ ಕರ್ನಾಟಕದಲ್ಲಿ ಕಿಚ್ಚು ಹೆಚ್ಚಾಗುತ್ತಿದ್ದು ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ವಾರ್ ಕೆಸರೆರಚಾಟ ಇದ್ದಿದ್ದು ಈಗ ರಸ್ತೆಗಿಳಿದು ಕಿತ್ತಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿದೆ. ಮೊದಲಿನಿಂದಲೂ ಹೊಸಪೇಟೆಯನ್ನು ರಾಜಕುಮಾರ್ ಅವರ ಕುಟುಂಬದ ಅಡ್ಡಾ ಎಂದೇ ಕರೆಯುವುದು, ಇಂತಹ ಸ್ಥಳದಲ್ಲಿ ಈ ದುರ್ಘಟನೆ ನಡೆದಿರುವುದಕ್ಕೆ ಅವರ ಕುಟುಂಬದವರೇ ಕಾರಣ ಎಂದು ಡಿ ಬಾಸ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಜೊತೆಗೆ ದರ್ಶನ್ ಅವರಿಗೆ ಚಪ್ಪಲಿ ಎಸೆಯುವುದಕ್ಕೂ ಮುನ್ನ ಅನುಮಾನಾಸ್ಪದ ವಕ್ತಿಗಳಾಗಿರುವವರು ಜೋರಾಗಿ ಜೈ ಅಪ್ಪು ಬಾಸ್ ಎಂದು ಕೂಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅಂದು ಅಪ್ಪು ಅಭಿಮಾನಿಗಳು ಈ ರೀತಿ ಮಾಡಿದ್ದಾರೆ ಎನ್ನುವುದೇ ದರ್ಶನ್ ಅಭಿಮಾನಿಗಳ ನಂಬಿಕೆ. ಹೀಗಾಗಿ ಅವರ ನೆಚ್ಚಿನ ನಟನಿಗೆ ಈ ರೀತಿ ಅವಮಾನ ಆದ ದಿನದಿಂದ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಅಲ್ಲದೆ ರಸ್ತೆಗೂ ಕೂಡ ಇಳಿದು ಹೋರಾಟ ಮಾಡುತ್ತಿದ್ದಾರೆ ಮತ್ತು ಇಡೀ ಚಿತ್ರರಂಗದ ನಟರೆಲ್ಲರೂ ದರ್ಶನ್ ಬೆಂಬಲಕ್ಕೆ ನಿಂತಿದ್ದು ಪ್ರತಿಯೊಬ್ಬರೂ ಕೂಡ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ದರ್ಶನ್ ಪರವಾಗಿ ಮಾತನಾಡುವ ಮೂಲಕ ತಪ್ಪಿತಸ್ಥರಿಗೆ ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ. ಸುದೀಪ್, ಪ್ರಜ್ವಲ್ ದೇವರಾಜ್, ನೀನಾಸಂ ಸತೀಶ್ ಮತ್ತು ಸುಮಲತಾ ಅಂಬರೀಶ್ ಹಾಗೂ ರಮೇಶ್ ಅರವಿಂದ್ ಸೇರಿದಂತೆ ಹಲವರು ಈಗಾಗಲೇ ಬರಹದ ಮೂಲಕ – ಮಾತಿನ ಮೂಲಕ ಘಟನೆ ಬಗ್ಗೆ ಮಾತನಾಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟು ದರ್ಶನ್ ಬೆಂಬಲಕ್ಕೆ ನಿಂತು, ಈ ರೀತಿ ನಡೆದುಕೊಂಡಿದ್ದಕ್ಕಾಗಿ ಅಭಿಮಾನಿಗಳ ಜೊತೆ ಕೋಪಗೊಂಡು ಮಾತನಾಡಿದ್ದಾರೆ. ಯಾರು ಎಷ್ಟೇ ಹೇಳುತ್ತಿದ್ದರೂ ಸ್ವತ ದರ್ಶನ್ ಅವರೇ ಜೀವನದಲ್ಲಿ ಇಂತಹದನ್ನೆಲ್ಲ ಬಹಳ ನೋಡಿದ್ದೇನೆ, ಇದನ್ನು ಬಿಟ್ಟು ಬಿಡಿ ಎಂದು ಹೇಳುತ್ತಿದ್ದಾರೆ.

ಆದರೂ ಕೂಡ ದರ್ಶನ್ ಅಭಿಮಾನಿಗಳಿಗೆ ಮಾತ್ರ ಸಮಾಧಾನ ಆಗುತ್ತಿಲ್ಲ. ಇದೀಗ ಇಡೀ ಘಟನೆಗೆ ರಾಜಕುಮಾರ ಕುಟುಂಬವೇ ಕಾರಣ ಎಂದು ಹೇಳುತ್ತಿರುವ ಅಭಿಮಾನಿಗಳಲ್ಲಿ ಇಬ್ಬರು ಅಪ್ಪು ಅವರ ಬಗ್ಗೆ ಮಾತನಾಡಿರುವುದು ಹಾಗೂ ಇನ್ನು ಮುಂದೆ ಡಾಕ್ಟರ್ ರಾಜಕುಮಾರ್ ಅವರ ಕುಟುಂಬಕ್ಕೆ ಸಪೋರ್ಟ್ ಮಾಡುವುದಿಲ್ಲ ಎಂದು ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ದಚ್ಚು ಅಭಿಮಾನಿಗಳ ಗುಂಪೊಂದು ಮೀಡಿಯ ಜೊತೆ ಮಾತಾಡುತ್ತಾರೆ. ಮಾತಿನ ಭರದಲ್ಲಿ ಒಬ್ಬ ಯುವಕ ನಾನು ನಮ್ಮ ಮನೆಯಲ್ಲಿ ಇವತ್ತಿನ ತನಕ ಅಪ್ಪು ಅವರ ಫೋಟೋ ಇಟ್ಟುಕೊಂಡಿದ್ದೆ, ಈ ಘಟನೆಯಾದ ತಕ್ಷಣವೇ ಅದನ್ನು ಹೊರಹಾಕಿದ್ದೇನೆ ಎಂದಿದ್ದಾರೆ. ಈ ನಡುವೆ ದರ್ಶನ್ ಅಭಿಮಾನಿಗಳಲ್ಲಿ ಕೆಲವರು ಪ್ರಚೋಧನಕಾರಿ ಪೋಸ್ಟ್ ಹಾಕಿ ಹೊಸಪೇಟೆಯವರು ಕೆಣಕಿದ್ದು ಸುಳ್ಳಲ್ಲ.

ಅಪ್ಪು ಅವರು ತೀರಿಕೊಂಡ ಸಂದರ್ಭದಲ್ಲಿ ಯಶ್ ಫ್ಯಾನ್ಸ್, ದರ್ಶನ್ ಫ್ಯಾನ್ಸ್, ಅಪ್ಪು ಫ್ಯಾನ್ಸ್ ಎಲ್ಲರೂ ಒಂದಾಗಿ ನಡೆದುಕೊಂಡೆವು. ಆದರೆ ಈಗ ಕ್ರಾಂತಿ ಸಿನಿಮಾಗೆ ಪ್ರಮೋಷನ್ ಮಾಡುವ ವೇಳೆ ಅಪ್ಪು ಅಭಿಮಾನಿಗಳು ಈ ರೀತಿ ನಡೆದುಕೊಂಡಿರುವುದರಿಂದ ನಮಗೆ ಭಾರೀ ಬೇಸರ ಉಂಟಾಗಿದೆ ಎಂದು ದಚ್ಚು ಅಭಿಮಾನಿಗಳು ವಿಡಿಯೊದಲ್ಲಿ ಮಾತನಾಡಿದ್ದಾರೆ.

ಮತ್ತೊಬ್ಬ ಯುವಕ ಮಾತನಾಡಿ ಈ ರೀತಿ ಅಪ್ಪು ಅಭಿಮಾನಿಗಳು ನಡೆದುಕೊಳ್ಳುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ, ಇನ್ನು ಮುಂದೆ ನಮಗೆ ಯಾರೂ ಇಲ್ಲ, ನಾವೆಲ್ಲರೂ ಜನವರಿ 26ರಂದು ಕ್ರಾಂತಿ ರಿಲೀಸ್ ಆದ ಸಮಯದಲ್ಲಿ ನಮ್ಮ ಪವರ್ ತೋರಿಸುತ್ತೇವೆ, ಇನ್ನು ಮುಂದೆ ನಾವು ಡಾಕ್ಟರ್ ರಾಜಕುಮಾರ್ ಫ್ಯಾಮಿಲಿಗೆ ಸಪೋರ್ಟ್ ಮಾಡೋದಿಲ್ಲ ಎಂದು ಹೇಳಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

You might also like

Comments are closed.