appu-car

ಅಪ್ಪು ಉಡುಗೊರೆ ಕೊಟ್ಟಿದ್ದ ಕಾರ್ ಅನ್ನು ದುಬೈ ಕಳುಹಿಸಿದ ಅಶ್ವಿನಿ,ಯಾಕೆ ಗೊತ್ತೇ?? ಅಲ್ಲಿ ಯಾರು ಬಳಸುತ್ತಾರಂತೆ ಗೊತ್ತೇ??

CINEMA/ಸಿನಿಮಾ

ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 6 ತಿಂಗಳು ಕಳೆದುಹೋಗಿದೆ. ಆದರೆ ಇಂದಿಗೂ ಸಹ ಅಪ್ಪು ಅವರ ನೆನಪುಗಳು, ಅವರು ತೋರಿಸಿಕೊಟ್ಟ ಒಳ್ಳೆಯತನದ ಹಾದಿ ಎಲ್ಲರ ಎದುರು ಇದೆ. ಅಪ್ಪು ಅವರು. ಹಾಕಿಕೊಟ್ಟಿರುವ ಬುನಾದಿಯಲ್ಲೇ ಎಲ್ಲರೂ ಸಾಗುತ್ತಿದ್ದಾರೆ. ಅಪ್ಪು ಅವರ ಆ ಸರಳತೆ, ಒಳ್ಳೆಯತನ, ವೈಶಾಲ್ಯ ಹೃದಯವನ್ನು ಯಾರು ಮರೆಯುವ ಹಾಗಿಲ್ಲ. ಅಪ್ಪು ಅವರು ಕನ್ನಡ ಚಿತ್ರರಂಗದಿಂದ ಸಿನಿಪ್ರಿಯರಿಗೆ ಬಹಳಷ್ಟು ಕೊಡುಗೆಗಳನ್ನು ನೀಡುಬ ದೊಡ್ಡ ಕನಸುಗಳನ್ನು ಕಂಡಿದ್ದರು. ಆ ನಿಟ್ಟಿನಲ್ಲಿ ಯುವಪ್ರತಿಭೆಗಳಿಗೆ ಅವಕಾಶ ನೀಡಲು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆ ಶುರು ಮಾಡಿದರು. ಇಂದು ಅಶ್ವಿನಿ ಅವರು ಅದನ್ನು ಮುಂದುವರೆಸಿಕೊಂಡು ಹೊಗುತ್ತಿದ್ದಾರೆ.

ದುಬೈನಲ್ಲಿದೆ ಅಪ್ಪು ನೆಚ್ಚಿನ ಲ್ಯಾಂಬೋರ್ಗಿನಿ ಕಾರು: ಈಗ ಯಾರು ಬಳಸುತ್ತಿದ್ದಾರೆ? | Puneeth Rajkumar Favorite Lamborghini Urus Car Is In Dubai Now, - Kannada Filmibeat

ಅಪ್ಪು ಅವರು ಇದ್ದಾಗ ಜನರಿಗೆ ಎಷ್ಟೆಲ್ಲಾ ಸಹಾಯ ಮಾಡಿದ್ದಾರೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಇದೆಲ್ಲ ಒಳ್ಳೆಯ ಸ್ವಭಾವಗಳ ಜೊತೆಗೆ ಅಪ್ಪು ಅವರಿಗೆ ಕೆಲವು ಕ್ರೇಜ್ ಸಹ ಇತ್ತು, ಹೊಸ ಜಾಗಗಳನ್ನು ಎಕ್ಸ್ಪ್ಲೋರ್ ಮಾಡುವುದನ್ನು ಅಪ್ಪು ಅವರು ಬಹಳ ಇಷ್ಟಪಡುತ್ತಿದ್ದರು. ಹಾಗೆಯೇ ಅಪ್ಪು ಅವರಿಗೆ ಕಾರ್ ಮತ್ತು ಬೈಕ್ ಗಳ ಕ್ರೇಜ್ ಸಹ ಜಾಸ್ತಿ ಇತ್ತು. ಅಪ್ಪು ಅವರ ಬಳಿ ಐಶಾರಾಮಿ ಕಾರ್ ಗಳು ಮತ್ತು ಬೈಕ್ ಗಳು ಇದ್ದವು. ಅದರಲ್ಲೂ ನೀಲಿ ಬಣ್ಣದ ಲ್ಯಾಮ್ಬೊರ್ಗಿನಿ ಕಾರ್ ಅನ್ನು ಅಪ್ಪು ಅವರು ಬಹಳ ಇಷ್ಟಪಡುತ್ತಿದ್ದರು. ಆ ಕಾರ್ ನಲ್ಲಿ ರೈಡ್ ಹೋಗುವುದು ಅಪ್ಪು ಅವರ ಫೇವರೇಟ್ ಆಗಿತ್ತು. ಈ ಕಾರ್ ಅನ್ನು ಅವರು ಅಪ್ಪು ಅವರು ತಮಗಾಗಿ ಖರೀದಿ ಮಾಡಿರಲಿಲ್ಲ, ಬದಲಾಗಿ ಪತ್ನಿ ಅಶ್ವಿನಿ ಅವರಿಗೆ ಗಿಫ್ಟ್ ಆಗಿ ನೀಡಿದ್ದರು..

ಅಶ್ವಿನಿ ಅವರಿಗೆ ಅಪ್ಪು ಅವರು ಪ್ರೀತಿಯಿಂದ ಕೊಡಿಸಿದ್ದ ಲ್ಯಾಂಬೋರ್ಗಿನಿ ಕಾರು ಈಗ ಎಲ್ಲಿದೆ ಗೊತ್ತಾ? – Public Master

ಮಹಿಳಾ ದಿನಾಚರಣೆಯ ಪ್ರಯುಕ್ತ ಅಶ್ವಿನಿ ಅವರಿಗೆ ಈ ನೀಲಿ ಬಣ್ಣದ ಲ್ಯಾಮ್ಬೋರ್ಗಿನಿ ಕಾರ್ ಅನ್ನು 2019ರಲ್ಲಿ ಗಿಫ್ಟ್ ಆಗಿ ನೀಡಿದ್ದರು ಅಪ್ಪು. ಈ ಕಾರ್ ನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ ಆಗಿತ್ತು. ಆದರೆ ಅಪ್ಪು ಅವರೇ ಈ ಕಾರ್ ಅನ್ನು ಹೆಚ್ಚಾಗಿ ಬಳಸುತ್ತಿದ್ದರು. ಅಪ್ಪು ಅಶ್ವಿನಿ ದಂಪತಿ ಆಗಾಗ ಇದರಲ್ಲಿ ರೈಡ್ ಗೆ ಹೋಗುತ್ತಿದ್ದರು. ಆದರೆ ಅಪ್ಪು ಅವರು ಹೋದಮೇಲೆ ಈ ಕಾರ್ ಅನ್ನು ಯಾರು ಸಹ ಬಳಸುತ್ತಿಲ್ಲ. ಅಶ್ವಿನಿ ಅವರು ಕೂಡ ನೀಲಿ ಲ್ಯಾಮ್ಬೋರ್ಗಿನಿ ಕಾರ್ ಬಳಸುತ್ತಿಲ್ಲ ಎನ್ನಲಾಗಿದೆ. ಅಪ್ಪು ಅವರ ಫೇವರೆಟ್ ಆಗಿದ್ದ ಈ ಕಾರ್ ಅನ್ನು ದೊಡ್ಮನೆಯಲ್ಲಿ ಯಾರು ಸಹ ಬಳಸುತ್ತಿಲ್ಲ. ಪ್ರಸ್ತುತ ಈ ಕಾರ್ ದುಬೈ ನಲ್ಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ದುಬೈನಲ್ಲಿರುವ ಅಶ್ವಿನಿ ಅವರ ತಮ್ಮನ ಬಳಿ ಇದೆಯಂತೆ ಲ್ಯಾಮ್ಬೋರ್ಗಿನಿ ಕಾರ್.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.