ಕೊನೆಯ ಬಾರಿಗೆ ಜೋಳದ ರೊಟ್ಟಿ ಊಟ ಮಾಡಿ ಪುನೀತ್ ರಾಜಕುಮಾರ್ ಕಳೆದ ಸುಂದರ ಕ್ಷಣಗಳನ್ನು ಒಮ್ಮೆ ನೋಡಿ.!!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೊಂದಿಗೆ ಇದ್ದಷ್ಟು ದಿನ ಅದೆಷ್ಟೋ ಜನ ಯುವಕರಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಹಳ ಅಡ್ವೆಂಚರಸ್ ಕೆಲಸಗಳಲ್ಲಿ ಆಸಕ್ತಿ ಇದ್ದಂತಹ ಪುನೀತ್ ರಾಜಕುಮಾರ್ ಹೊಸದನ್ನು ಟ್ರೈ ಮಾಡಲು ಬಯಸುತ್ತಿದ್ದಂತಹ ವ್ಯಕ್ತಿ. ಹೌದು ಪುನೀತ್ ರಾಜಕುಮಾರ್ರವರಿಗೆ ರಿಮೋಟ್ ಕಂಟ್ರೋಲ್ ಕಾರುಗಳೆಂದರೆ ಬಹಳ ಕ್ರೇಜಿ ಇದ್ದು, ಎಲ್ಲಾದರೂ ಹೊಸತರದ ಗ್ಯಾಜೆಟ್ ಬಂದಿದೆ ಎಂದರೆ ಟ್ರೈ ಮಾಡಲು ಮೊದಲಿಗೆ ಹೋಗುತ್ತಿದ್ದರು.

ಅಲ್ಲದೆ ಪುನೀತ್ ರಾಜಕುಮಾರ್ ಅವರು ಭೋಜನ ಪ್ರಿಯರಾಗಿದ್ದು,ಬಿಡುವು ಸಿಕ್ಕಾಗಲೆಲ್ಲಾ ದೊಡ್ಡ ದೊಡ್ಡ ಹೋಟೆಲ್ಗಳಿಗೆ ಹೋಗಿ ಹೊಸ ತರಹದ ರೆಸಿಪಿಗಳನ್ನು ಟ್ರೈ ಮಾಡುತ್ತಲೇ ಇರುತ್ತಾರೆ. ಅಲ್ಲದೆ ಅದನ್ನು ಮನೆಯಲ್ಲಿ ಕೂಡ ಮಾಡುವುದರ ಮೂಲಕ ಮನೆಯವರಿಗೆ ತಮ್ಮ ಕೈಯಾರ ಅಡುಗೆ ಮಾಡಿ ಉಣಬಡಿಸುತ್ತಿದ್ದರು. ಇಂತಹ ಅದ್ಭುತ ವ್ಯಕ್ತಿತ್ವ ಒಮ್ಮೆ ಬಸವೇಶ್ ಕನವಳ್ಳಿ ಎಂಬ ಅಡುಗೆ ಭಟ್ಟರ ಜೊತೆ ಬೆಂಗಳೂರಿನಲ್ಲಿ ಇರುವಂತಹ ಎಲ್ಲಾ ಹೋಟೆಲಿಗೆ ಹೋಗಿ ವಿಶೇಷವಾದ ರೆಸಿಪಿಯನ್ನು ಟ್ರೈ ಮಾಡುವ ಮೂಲಕ ಮನಃಸ್ಪೂರ್ತಿಯಾಗಿ ಊಟ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳೆಲ್ಲ ಅಪ್ಪು ಇನ್ನು ಕೊಂಚ ದಿನ ಇರಬೇಕಿತ್ತು ಎಂದು ಕಣ್ಣೀರು ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋ ಯಾವುದು? ಅಪ್ಪು ಹೇಗೆಲ್ಲಾ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಪುನೀತ್ ರಾಜಕುಮಾರ್ ಯುವರತ್ನ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಬಸವೇಶ್ವರ್ ಕನವಳಿ ಅವರ ಜೊತೆ ಫುಡ್ ಬ್ಲಾಗೊಂದನ್ನು ಮಾಡಿದ್ದು, ಈ ವಿಡಿಯೋವನ್ನು ಅಭಿಮಾನಿಗಳು ಮನಸ್ಪೂರ್ವಕವಾಗಿ ಮೆಚ್ಚಿ ಲೈಕ್ಗಳ ಸುರಿಮಳೆ ಸುರಿಸಿದರು.

ಹೌದು ಬೆಂಗಳೂರಿನಲ್ಲಿ ಇರುವಂತಹ ಹೋಟೆಲ್ಗಳಿಗೆ ಹೋದಂತಹ ಅಪ್ಪು ಅಲ್ಲಿ ಸಿಗುವಂತಹ ಖಾದ್ಯಗಳೆಲ್ಲವನ್ನೂ ಸವಿದು ಖುಷಿಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೀವು ಈ ಕೂಡ ಸುಂದರ ಕ್ಷಣಗಳನ್ನು ವೀಕ್ಷಿಸಿ ಹಾಗೂ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ…

You might also like

Comments are closed.