1 ಕೋಟಿ ಖಚು೯ ಮಾಡಿ ಅಪ್ಪು ಚಿತ್ರವನ್ನು ಹೊಲದಲ್ಲಿ ಬಿಡಿಸಿದ ರೈತ,ಕಣ್ಣೀರಿಟ್ಟ ಅಶ್ವಿನಿ ಮೇಡಂ

ವಿಶಾಲ ಬಯಲಿನ ಗದ್ದೆಯ ಹಸಿರಿನಲ್ಲಿ ನಗು ನಗುತ್ತಿರೋ ಅಭಿಮಾನಿಗಳ ನೆಚ್ಚಿನ ದೇವರು. ವಿಶೇಷ ಅಭಿಮಾನಿಯಿಂದ ಎರಡು ಎಕರೆ ಭತ್ತದ ಬೆಳೆಯಲ್ಲಿ ಅರಳಿದ ಅಪ್ಪು ಕರುನಾಡ ಮಂದಿಯ ಹೃದಯಗಳಲ್ಲೊಂದೇ ಅಲ್ಲದೇ, ಪ್ರಕೃತಿ ಮಾತೆಯಲ್ಲೂ ಒಂದಾದ ರಾಜರತ್ನ.

ಇದು ರಾಯಚೂರಿನ ಶ್ರೀನಿವಾಸ್ ಕ್ಯಾಂಪ್‌ನ ವಿಶೇಷ ಚೇತನ ರೈತ ಕರ್ರಿ ಸತ್ಯನಾರಾಯಣ ಅವರ ವಿಶೇಷ ಕೊಡುಗೆ ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಕರ್ರಿ ಸತ್ಯನಾರಾಯಣ ಎಂಬ ವಿಶೇಷ ಚೇತನ ರೈತ ವಿಶೇಷವಾಗಿಯೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಆರು ಎಕರೆ ಗದ್ದೆಯಲ್ಲಿ, ಎರಡು ಎಕರೆ ಪ್ರದೇಶವನ್ನು ಅಪ್ಪುವಿನ ಭಾವಚಿತ್ರಕ್ಕಾಗಿಯೇ ಮೀಸಲಿಟ್ಟು ಅಭಿಮಾನ ಮೆರೆದಿದ್ದಾರೆ.

ಮೂರು ತಳಿಯ ವಿಶಿಷ್ಟ ಭತ್ತದ ಬೀಜಗಳಿಂದ ಗದ್ದೆ ಬಿತ್ತನೆ ಮಾಡಿದ್ದಾರೆ. ಗುಜರಾತ್‌ನ ಗ್ರೀನ್ ಗೋಲ್ಡ್ ರೋಸ್, ತೆಲಂಗಾಣದ ಕಾಲಾ ಬಟ್ಟಿ, ಕರ್ನಾಟಕದ ಲೋಕಲ್ ತಳಿಯಾಗಿರುವ ಸೋನಾಮಸೂರಿ ಭತ್ತಗಳ ಒಟ್ಟು 100 ಕೆಜಿ ಬೀಜ ಬಳಸಿ ಭತ್ತದಲ್ಲಿ ಅಪ್ಪು ಭಾವಚಿತ್ರ ಅರಳಿಸಿದ್ದಾರೆ.

ವೃತ್ತಿಯಲ್ಲಿ ಕೃಷಿಕನಾದರೂ ಪ್ರವೃತ್ತಿಯಲ್ಲಿ ಚಿತ್ರ ಕಲಾವಿದರಾಗಿರುವ ಸತ್ಯನಾರಾಯಣ ಅವರು ಬಿತ್ತನೆ ಮಾಡುವಾಗಲೇ ಅಪ್ಪು ಭಾವಚಿತ್ರ ಬರುವಂತೆ ಚಾಕಚಕ್ಯತೆ ಮೆರೆದಿದ್ದಾರೆ. ಈ ವಿಶೇಷ ಕಲಾಕೃತಿಗೆ 3 ರಿಂದ 4 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇನ್ನು ಈ ಚಿತ್ರವನ್ನು ಕಂಡು ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ರಾಜಕುಮಾರ್ ತಮ್ಮ ಟ್ವಿಟ್ಟರ್ ಪುಟದಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್ ನ ಶ್ರೀ ಕೆ.

ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಶಕ್ತಿಯನ್ನು ನೀಡಲಿ ಎಂದು ನಮ್ಮೆಲ್ಲರ ಕೋರಿಕೆ ಎಂದು ಪೋಸ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

You might also like

Comments are closed.