ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಎನ್ನುವುದು ಇಂದಿಗೂ ಕೂಡ ಪ್ರತಿಯೊಬ್ಬ ಕನ್ನಡಿಗನಿಗೂ ಹರಗಿಸಿಕೊಳ್ಳಲಾಗದಂತಹ ಕಠಿಣ ಸತ್ಯ ಎಂಬುದು ಅಷ್ಟೇ ನಿಜವಾದ ಮಾತು. ಅವರಂತಹ ಧೀಮಂತ ವ್ಯಕ್ತಿತ್ವ ಕನ್ನಡ ಚಿತ್ರರಂಗದಲ್ಲಿ ಇನ್ನಿಲ್ಲ ಎನ್ನುವ ವಿಚಾರವನ್ನು ದಿನೇ ದಿನೇ ನೆನೆಸಿಕೊಂಡು ದುಃಖ ಪಡುವ ಅದೆಷ್ಟೋ ಜೀವಗಳು ನಮ್ಮ ನಡುವೆ ಇವೆ. ಅಷ್ಟರಮಟ್ಟಿಗೆ ಅಗಾಧ ಪ್ರಮಾಣದ ಪ್ರೀತಿಯನ್ನು ಜನರಲ್ಲಿ ಸಂಪಾದಿಸಿ ಕೊಂಡು ಹೋಗಿದ್ದಾರೆ ನಮ್ಮೆಲ್ಲರ ನೆಚ್ಚಿನ ರಾಜರತ್ನ ಅಪ್ಪು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಣ ಹೊಂದುವ ಮುನ್ನಾದಿನ ರಾತ್ರಿ ಮಧ್ಯರಾತ್ರಿಯವರೆಗೂ ಕೂಡ ಗುರುಕಿರಣ್ ಅವರ ಬರ್ತಡೆ ಪಾರ್ಟಿಯಲ್ಲಿ ಸೆಲೆಬ್ರಿಟಿಗಳೊಂದಿಗೆ ಇದ್ದರು. ಈ ಸಂದರ್ಭದಲ್ಲಿ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕೊನೆಯ ಬಾರಿಗೆ ಕರೆ ಮಾಡಿದ್ದರು. ಹೌದು ಮಿತ್ರರೇ ಆ ಕರೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಪುನೀತ್ ರಾಜಕುಮಾರ್ ಅವರು ಏನು ಮಾತನಾಡಿದ್ದರು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಸಾಮಾನ್ಯವಾಗಿ ಮಧ್ಯರಾತ್ರಿಯ ಸ್ವಲ್ಪ ಗಂಟೆಗೂ ಮುಂಚೆ ತಮ್ಮ ಕಿರಿಯ ಮಗಳಾಗಿರುವ ವಂದಿತ ಅವರ ಜೊತೆಗೆ ಲಾಂಗ್ ವಾಕಿಂಗ್ ಹೋಗಿ ಬರುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅಭ್ಯಾಸವಾಗಿ ಹೋಗಿತ್ತು. ಆದರೆ ಅವತ್ತು ಪಾರ್ಟಿಯಿಂದ ಬರುವುದು ಲೇಟ್ ಆಗಿದ್ದ ಕಾರಣದಿಂದಾಗಿ ಅಶ್ವಿನಿ ಅವರಿಗೆ ಪುನೀತ್ ರಾಜಕುಮಾರ್ ರವರು ಕರೆ ಮಾಡಿದ್ದರು.
ಅಶ್ವಿನಿ ಅವರಿಗೆ ಕರೆ ಮಾಡಿ ಮಗಳು ಮಲಗಿದ್ದಾಳ ಎಂಬುದಾಗಿ ಕೇಳಿದರು. ಆಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೌದು ವಂದಿತ ಮಲಗಿದ್ದಾಳೆ ನೀವು ನಿಧಾನವಾಗಿ ಡ್ರೈವ್ ಮಾಡಿಕೊಂಡು ಬನ್ನಿ ಎಂಬುದಾಗಿ ಹೇಳಿದ್ದರಂತೆ. ಇದೇ ಕೊನೆ ಸ್ನೇಹಿತರೆ ಬೆಳಗ್ಗೆ ಜಿಮ್ ಗೆ ಹೋಗಿ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯದ ಸಮಸ್ಯೆ ಎಂಬುದಾಗಿ ಆಸ್ಪತ್ರೆಗೆ ಹೋದವರು ಮತ್ತೆ ಜೀವಂತವಾಗಿ ಬರಲೇ ಇಲ್ಲ. ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಆ ದಿನ ಕಪ್ಪು ದಿನವಾಗಿ ಉಳಿದುಕೊಂಡಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ.