ಈ ಒಂದು ವ್ಯಕ್ತಿ ಮನೆಗೆ ಬಂದಿದ್ದೆ ಬಂದಿದ್ದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಫುಲ್ ಹ್ಯಾಪಿ!

CINEMA/ಸಿನಿಮಾ Entertainment/ಮನರಂಜನೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ್ಲ ಅಗಲಿ ಬರೋಬ್ಬರಿ ಒಂದು ವರ್ಷಕ್ಕೂ ಮಿಗಿಲಾಗಿದೆ. ಆದರೆ ಅವರ ಅಗಲಿಕೆಯಿಂದ ಎಲ್ಲರಿಗಿಂತ ಹೆಚ್ಚು ದುಃಖ ಪಟ್ಟಿದ್ದು ಅವರ ಮಡದಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಂದರೆ ತಪ್ಪಾಗಲಾರದು. ನಿಜಕ್ಕೂ ಅವರ ನಷ್ಟವನ್ನು ಯಾರು ಕೂಡ ತುಂಬಲಾಗದಂತಹ ಪರಿಸ್ಥಿತಿ ಆ ಸಂದರ್ಭದಲ್ಲಿ ನಿರ್ಮಾಣವಾಗಿತ್ತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದಲ್ಲಿ ಅವರ ದೊಡ್ಡ ಬೆಂಬಲವಾಗಿ ಹಾಗೂ ಅವರ ಪ್ರತಿಯೊಂದು ಕಾರ್ಯಗಳಿಗೆ ಸಪೋರ್ಟ್ ಆಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿಂತಿದ್ದರು. ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಜೀವನದ ಪ್ರಮುಖ ಬೆಂಬಲವಾಗಿ ನಿಂತಿದ್ದರು. ಆದರೆ ಅಪ್ಪು ಅವರ ಅಗಲಿಕೆ ಎನ್ನುವುದು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳ ಜೀವನದಲ್ಲಿ ದೊಡ್ಡ ರೀತಿಯ ವಿಪರೀತ ಪರಿಣಾಮವನ್ನು ಬೀರಿತು ಎನ್ನಬಹುದು.

The Puneeth Rajkumar and Ashwini Revanth love story - India Today

ಹೇಗಿದ್ದರೂ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ನೆನಪಿನಲ್ಲಿಯೇ ಇಂದು ಅವರ ಕನಸುಗಳನ್ನು ಪೂರೈಸುವ ಕಡೆಗೆ ತಮ್ಮ ಕಾರ್ಯವನ್ನು ಜಾರಿಯಲ್ಲಿರಿಸಿದ್ದಾರೆ. ಹೊಸ ಹೊಸ ಪ್ರತಿಭೆಗಳಿಗೆ ಪಿಆರ್‌ಕೆ ಪ್ರೊಡಕ್ಷನ್ ಮೂಲಕ ಸಿನಿಮಾಗಳನ್ನು ಮಾಡುವುದು ಹಾಗೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಸೇರಿದಂತೆ ಅಪ್ಪುರವರು ಮಾಡುತ್ತಿದ್ದ ದಾನ ಧರ್ಮಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅಪ್ಪು ಅವರ ಅಭಿಮಾನಿ ಒಬ್ಬರು ಹಲವಾರು ಸಮಯಗಳಿಂದ ಕಾದು ನಂತರ ಅವಕಾಶ ಸಿಕ್ಕ ಮೇಲೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪೇಂಟಿಂಗ್ ಅನ್ನು ಈಗ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ನೀಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಖದಲ್ಲಿ ಈಗ ಮಂದಹಾಸ ಮೂಡಿದ್ದು ಮನೆಯಲ್ಲಿರುವ ಅಪ್ಪು ಅವರ ಫೋಟೋದ ಎದುರುಗಡೆನೇ ಈ ಫೋಟೋವನ್ನು ಇಡುತ್ತೇನೆ ನಿಜಕ್ಕೂ ಕೂಡ ಈ ಫೋಟೋ ನೋಡಿ ನನಗೆ ಖುಷಿ ಆಯಿತು ಎಂಬುದಾಗಿ ಹೇಳಿದ್ದಾರಂತೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.