ಚಂದನವನದ ಚಂದದ ಕುಟುಂಬ ಎಂದೇ ಪ್ರಸಿದ್ಧಿ ಹೊಂದಿರುವ ದೊಡ್ಮನೆ ಕುಟುಂಬ ಇದು. 7 ತಿಂಗಳ ಹಿಂದೆ ನಡೆದ ಆ ಒಂದು ನಿಮಗೆಲ್ಲರಿಗೂ ಗೊತ್ತೇ ಇದೆ ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು 7 ಮಾಸಗಳೇ ಕಳೆದಿದೆ. ಈ ಹೊತ್ತಿಗೂ ಕೂಡ ಅಪ್ಪು ಇಲ್ಲ ಅನ್ನುವುದನ್ನು ಅಭಿಮಾನಿಗಳಿಂದ ಅರಿಸಿಕೊಳ್ಳಲು ಆಗುತ್ತಿಲ್ಲ.
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಇನ್ನು ನಮ್ಮೊಂದಿಗೆ ಇದ್ದಾರೆ ಎನ್ನುತ್ತಾಳೆ ಅಪ್ಪು ಅವರ ಸಮಾಧಿಗೆ ದಿನ ನಿತ್ಯವೂ ಸಾವಿರಾರು ಭಕ್ತರು ಭೇಟಿ ನೀಡಿ ನಮನ ಸಲ್ಲಿಸುತ್ತಾರೆ. ಅಪ್ಪು ಅವರ ಹೆಸರಲ್ಲಿ ಅವರ ಅಭಿಮಾನಿಗಳು ಒಂದಲ್ಲ ಒಂದು ಕಾರ್ಯಕ್ರಮವನ್ನು ಅಪ್ಪು ಅವರ ಹೆಸರಲ್ಲಿ ಮಾಡುತ್ತಾಲೆ ಇರುತ್ತಾರೆ. ಹಾಗೇ ಅಪ್ಪು ಇನ್ನು ನಮ್ಮ ಜೊತೆಗೆ ಇದ್ದಾರೆ ಅನ್ನುವ ಆಸೆ ಇಟ್ಟಿದ್ದಾರೆ ಅಭಿಮಾನಿಗಳು.
ಪುನೀತ್ ಅವರ ಅಭಿಮಾನಿಗಳು ಬರೇ ಕರ್ನಾಟಕದಲ್ಲಿ ಮಾತ್ರ ಅಲ್ಲದೆ ದೇಶ ವಿದೇಶದಲ್ಲಿ ಕೂಡ ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇವರು ಮಾಡಿರುವ ಧಾನ, ಧರ್ಮ, ಹೇಳತೀರದು, ಬಾಲಗೈ ನಲ್ಲಿ ಮಾಡಿದ್ದು ಎಡಗೈ ಗೆ ಗೊತ್ತಾಗದ ರೀತಿಯಲ್ಲಿ ಅಪ್ಪು ಧಾನ, ಧರ್ಮ ಮಾಡಿದ್ದಾರೆ. ಅವರ ಅಗಲಿಕೆಯ ನಂತರನೇ ಎಲ್ಲಾ ವಿಷಯ ಹೊರಗೆ ಬಿದ್ದಿದೆ. ಇವರು ಮಾಡಿದ ಸಹಾಯವನ್ನು ಕಂಡು ಅಭಿಮಾನಿಗಳು ಹಾಗೂ ಕರ್ನಾಟಕದ ಜನರು ಬಾಯಿಯ ಮೇಲೆ ಬೆರಳಿಟ್ಟಿದ್ದರೆ. ಇಂತಹ ಮನುಷ್ಯ ಇನ್ನು ನೂರು ವರುಷ ಬದುಕಬಾರದಿತ್ತೆ ಎನ್ನುವರೇ ಹೆಚ್ಚು.
ಮೊನ್ನೆಅಷ್ಟೇ ಹೊಸಪೇಟೆಯಲ್ಲಿ ಅಪ್ಪು ಅವರ ಕಂಚಿನ ಪುತ್ಥಳಿ ಅನಾವರಣಕ್ಕೆ ಲಕ್ಷಾಂತರ ಅಭಿಮಾನಿಗಳು ಭಾಗಿಯಾಗಿದ್ದರು. ಅಂದು ಹೊಸಪೇಟೆಯಲ್ಲಿ ಒಂದು ರೀತಿಯಲ್ಲಿ ಅಪ್ಪು ಜಾತ್ರೆನೆ ಅಲ್ಲಿ ನಡೆದಿತ್ತು. ಯುವರತ್ನ ನನ್ನು ಅಷ್ಟೊಂದು ಪ್ರೀತಿಸುವ ಅಭಿಮಾನಿಗಳು ಇರುವಾಗ, ಸಹಜವಾಗಿ ಯಾರಿಂದಲೂ ಅಪ್ಪು ನೆನಪುಗಳನ್ನು ಮನಸ್ಸಿನಿಂದ ಅಷ್ಟು ಬೇಗ ಹೊರಹಕಾಲು ಸಾಧ್ಯವಿಲ್ಲ. ಹಾಗೆಯೇ ಅಪ್ಪು ನಾಲ್ಕು ವರ್ಷದ ಹಿಂದೆ ಮಾಡಿದ್ದ ಟ್ವಿಟ್ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.
ಇದೇ ದಿನ ಅಂದರೆ, ನಾಲ್ಕು ವರ್ಷಗಳ ಹಿಂದೆ 07 ಜೂನ್ 2018 ರಂದು ಪುನೀತ್ ರಾಜ್ ಕುಮಾರ್ ಅವರ ಕಾರು ಅ’ಪ’ಘಾ’ತ ಆಗಿತ್ತು. ಅಪ್ಪು ಅಭಿಮಾನಿಗಳು ಆತಂಕಗೊಂಡಿದ್ದರು. ಪ್ರೀತಿಯ ಅಪ್ಪುಗೆ ಏನಾಗಿದೆ ಎನ್ನುವ ಆತಂಕ ಎಲ್ಲರದಾಗಿತ್ತು. ಹಾಗಾಗಿ ಪುನೀತ್ ರಾಜ್ ಕುಮಾರ್ ಒಂದು ಟ್ವಿಟ್ ಮಾಡಿದ್ದರು. ‘ಆರಾಮಾಗಿದ್ದೀನಿ ಯಾರು ಚಿಂತಿಸಬೇಡಿ’ ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಟ್ವಿಟ್ ಮಾಡಿದ್ದರು.
ಈಗ ಅದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಟ್ವಿಟ್ ನೋಡಿ ಅಪ್ಪು ಅಭಿಮಾನಿಗಳು ಏಳು ತಿಂಗಳ ಹಿಂದೆ ನೀವು ಆಸ್ಪತ್ರೆಗೆ ಸೇರಿದಾಗ ಹೀಗೆಯೇ ಟ್ವಿಟ್ ಮಾಡಬಾರದಿತ್ತೆ, ಎಂದು ಬಾವುಕಾರಾಗಿದ್ದಾರೆ. ಆದರೆ ನೀವು ದೇವರ ಲೋಕಕ್ಕೆ ಹೋಗಿದ್ದಿರಿ ಎಂದು ಅಭಿಮಾನಿಗಳು ಟ್ವಿಟ್ ಗೆ ಉತ್ತರಿಸಿದ್ದಾರೆ. ನೀವು ನಿಮ್ಮ ಮೆಚ್ಚಿನ ನಟ ಪುನೀತ್ ಅವರ ಬಗ್ಗೆ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ