ಅಣ್ಣಾವ್ರ ಮಗ, ಅಭಿಮಾನಿಗಳ ಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರಳತೆಯಿಂದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಣ್ಣಾವ್ರು ಮತ್ತು ಪಾರ್ವತಮ್ಮ ದಂಪತಿಯ ಮಗನಾಗಿ, ತಂದೆ ತಾಯಿ ತೋರಿಸಿದ ಸರಳತೆ, ಸಜ್ಜನಿಕೆ, ಮತ್ತು ಸಹಾಯ ಮನೋಭಾವದಿಂದಲೇ ಬೆಳೆದು ಬಂದಿದ್ದಾರೆ ಪುನೀತ್ ರಾಜಕುಮಾರ್. ಅಪ್ಪು ಅವರ ನಡವಳಿಕೆ ಮತ್ತು ಸರಳತೆ ಕುರಿತು ಅನೇಕರು ಮಾತನಾಡುವುದನ್ನು ನಾವು ಕೇಳಿರುತ್ತೇವೆ.
ಅಪ್ಪು ಅವರು ನಿಜ ಜೀವನದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಮುದ್ದಿನ ಮಗ ಅಪ್ಪು. ಇಂದು ದೈಹಿಕವಾಗಿ ಪುನೀತ್ ರಾಜ್‍ಕುಮಾರ್ ಅವರು ನಮ್ಮ ಕಣ್ಮುಂದೆ ಇಲ್ಲದಿದ್ದರೂ ಮಾನಸಿಕವಾಗಿ ಜಗತ್ತಿಗೆ ಅವರು ತೋರಿಸಿ ಕೊಟ್ಟಿರುವ ಒಳ್ಳೆಯ ರೀತಿಯ ದಾರಿ ಎಲ್ಲರ ಹೃದಯದಲ್ಲಿ ಮನೆ ಮಾಡಿದೆ ಅಂತಾನೇ ಹೇಳಬಹುದು. ನಾವೆಲ್ಲರೂ ನೋಡಿರುವ ಹಾಗೆ ಎಲ್ಲಾ ಸೆಲೆಬ್ರಿಟಿಗಳಿಗೆ ಅವರದ್ದೇ ಆದಾ ವಿಶೇಷವಾದ ಲೈಪ್ ಸ್ಟೈಲ್ ಇರುತ್ತದೆ.

ಬೆಲೆ ಬಾಳುವ ಬ್ರಾಂಡೆಡ್ ಉಡುಪುಗಳು, ಕಾಸ್ಟ್ಲಿ ವಾಚ್ ಗಳನ್ನ ಧರಿಸುತ್ತಾರೆ. ಅದೇರೀತಿ ನಮ್ಮ ಅಪ್ಪು ಅವರು ಕೂಡ ಬ್ರಾಂಡೆಡ್ ಧರಿಸುತ್ತಿದ್ದರು. ಅಪ್ಪು ಧರಿಸುತ್ತಿದ್ದ ಬಟ್ಟೆಗಳ ಬೆಲೆ ಬಹಳಷ್ಟು ದುಬಾರಿ ಇರುತ್ತಿತ್ತು. ಒಂದು ಜೀನ್ಸ್ ಪ್ಯಾಂಟ್ ಗೆ ಸುಮಾರು 60 ಸಾವಿರ ಕೊಟ್ಟು ಖರೀದಿ ಮಾಡಿರುವ ಉದಾಹರಣೆ ಕೂಡ ಇದೇ. ಅಪ್ಪು ಅವರು ಆ ಒಂದು ಕಾರಣದಿಂದ ಬ್ರಾಂಡೆಡ್ ಬಟ್ಟೆಗಳನ್ನ ಧರಿಸುವುದನ್ನ ಬಿಟ್ಟರು.
ಆ ಘಟನೆ ಏನು ಗೊತ್ತಾ ಪುನೀತ್ ಅವರು ಒಂದು ದಿನ ಬೆಲೆ ಬಾಳುವ ಬ್ರಾಂಡೆಡ್ ಬಟ್ಟೆ ಧರಿಸಿ ಅಭಿಮಾನಿಗಳು ಆಯೋಜಿಸಿದ ಒಂದು ಕಾರ್ಯಕ್ರಮಕ್ಕೆ ಹೋಗಿದ್ರು ಆಗ ಅಲ್ಲಿಗೆ ಸಾವಿರಾರು ಅಭಿಮಾನಿಗಳು ಬಂದಿದ್ರು ಆಗ ಒಬ್ಬ ಅಭಿಮಾನಿ ಅಪ್ಪು ಅವರನ್ನ ಮಾತಾನಾಡಿಸಲು ಬರುತ್ತಿದ್ದ ಅವನು ಕೂಡ ಅಪ್ಪು ಧರಿಸಿದ ಬ್ರಾಂಡೆಡ್ ಬಟ್ಟೆಯನ್ನೇ ಧರಿಸುತ್ತಿದ್ದ. ಆಗ ಅಪ್ಪು ಆ ಅಭಿಮಾನಿಯನ್ನ ನೋಡಿ ಅಪ್ಪು ಅವರಿಗೆ ಒಂದು ಯೋಚನೆ ಬರುತ್ತೆ ಅದೇನೆಂದರೆ ಅಪ್ಪು ಅಭಿಮಾನಿಗಳನ್ನ ನೋಡಿ ನಾನು ಧರಿಸುವ ರೀತಿಯಲ್ಲಿ ಬಟ್ಟೆ ಧರಿಸಬೇಕು ಅಂತ ಆಸೆ ಪಡುತ್ತಾರೆ. ಅವರು ನನ್ನನ್ನ ಅನುಕರಿಸಲು ಪ್ರಯತ್ನ ಪಡುತ್ತಾರೆ.
ಅವರ ಬಳಿ ಅಷ್ಟೊಂದು ಹಣ ಇರುತ್ತೋ ಇಲ್ವೋ ಆದ್ರೆ ಪುನೀತ್ ರಾಜ್‍ಕುಮಾರ್ ಅವರ ರೀತಿ ಬಟ್ಟೆ ಹಾಕಬೇಕು ವಾಚ್ ಧರಿಸಬೇಕು ಅಂತ ತುಂಬಾನೇ ಆಸೆ ಪಟ್ಟು ಹಣ ಖರ್ಚು ಮಾಡ್ತಾರೆ ಅಂತ ತಿಳಿದ ಬಳಿಕ ಅಪ್ಪು ಅವರು ಅಷ್ಟು ದುಬಾರಿಯಾದ ಬ್ರಾಂಡೆಡ್ ಜೀನ್ಸ್ ಗಳು ಹಾಗು ಬ್ರಾಂಡೆಡ್ ಬಟ್ಟೆಗಳನ್ನ ಧರಿಸುವುದನ್ನ ಬಿಟ್ಟರು.
ಆಗಿನಿಂದ ತಾವು ಕೂಡ ತನ್ನ ಅಭಿಮಾನಿಗಳು ಇರುವ ರೀತಿ ಅವರು ಧರಿಸುವ ರೀತಿ ಬಟ್ಟೆಗಳನ್ನ ಧರಿಸಲು ಶುರು ಮಾಡಿ ತಮ್ಮ ಆಡಂಬರದ ಲೈಪ್ ಸ್ಟೈಲ್ ಗುಡ್ ಬಾಯ್ ಹೇಳಿದ್ರು ನಮ್ಮ ಅಪ್ಪು. ಯಾರೊಬ್ಬ ನಟ ತಾನೇ ತನ್ನ ಅಭಿಮಾನಿಗಳು ಧರಿಸುವು ರೀತಿ ಸಾಧಾರಣವಾಗಿ ಬಟ್ಟೆಗಳನ್ನ ಧರಿಸುತ್ತಾರೆ. ನಿಜಕ್ಕೂ ಅಪ್ಪು ಅಭಿಮಾನಿಗಳ ಪಾಲಿಗೆ ನಿಜವಾದ ದೇವತಾ ಮನುಷ್ಯ. ಅಪ್ಪು ತಮ್ಮನ್ನು ನೋಡಲು ಬರುವ ಅಭಿಮಾನಿಗಳನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಎಲ್ಲರೊಡನೆ ಬಹಳ ಪ್ರೀತಿ ವಿಶ್ವಾಸದಿಂದ ಇರುತ್ತಿದ್ದರು.