ಪುನೀತ್ ಅಂದು ಹಣ ಕೊಟ್ಟಿದ್ದ ಮಹಿಳೆ ಇಂದು ಏನಾಗಿದ್ದಾರೆ ಗೊತ್ತಾ.. ಶಾಕ್ ಆಗ್ತೀರಾ..

CINEMA/ಸಿನಿಮಾ

ಅಪ್ಪು..ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ಈ ಪ್ರಪಂಚ ಬಿಟ್ಟು ಹೋಗಿ 3 ತಿಂಗಳು ಕಳೆದು ಹೋಯಿತು. ಈ ಕ್ಷಣಕ್ಕೂ ಅಪ್ಪು ಅವರು ಇಲ್ಲ ಎನ್ನುವ ಸತ್ಯವನ್ನ ಸಂಪೂರ್ಣವಾಗಿ ನಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ಬೇರೆ ಊರಿಗೆ ಚಿತ್ರೀಕರಣಕ್ಕಾಗಿ ಹೋಗಿರಬಹುದು ವಾಪಸ್ ಬರುತ್ತಾರೆ ಎಂದೇ ಅನ್ನಿಸುತ್ತದೆ. ಆದರೆ ಕಹಿಸತ್ಯವೆ ಬೇರೆ. ಅಪ್ಪು ಅವರು ಮರೆಯಲಾಗದ ಮಾಣಿಕ್ಯ, ಅವರು ಅದೆಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ, ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎನ್ನುವುದನ್ನು ಎಣಿಸುತ್ತಾ ಹೋದಷ್ಟು ಒಂದಲ್ಲಾ ಒಂದು ವಿಚಾರ ಸಿಗುತ್ತಲೇ ಹೋಗುತ್ತದೆ. ಇದೀಗ ಅಪ್ಪು ಅವರಿಂದ ಸಹಾಯ ಪಡೆದ ಒಬ್ಬ ಹುಡುಗಿ ಚಂದನವನದಲ್ಲಿ ನಿರ್ಮಾಪಕಿಯಾಗಿದ್ದಾರೆ.

ಅಪ್ಪು ಅವರು ಯಾರಿಗೆಲ್ಲಾ ಸಹಾಯ ಮಾಡಿದರು, ನನ್ನಿಂದ ಈ ಸಹಾಯ ಆಗಿದೆ ಎಂದು ಎಲ್ಲಿಯು ಹೇಳಬೇಡಿ ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಿದ್ದರು. ಹಾಗಾಗಿ ಅವರು ಇದ್ದಷ್ಟು ದಿನಗಳು ಈ ವಿಚಾರಗಳು ಬೆಳಕಿಗೆ ಬರಲಿಲ್ಲ. ಅಪ್ಪು ಅವರು ಹೋದ ಮೇಲೆ ಸಾವಿರಾರು ಜನ ತಾವಾಗಿಯೇ ಮುಂದೆ ಬಂದು ಅಪ್ಪು ಅವರಿಂದ ತಮಗೆ ಆಗಿರುವ ಸಹಾಯಗಳ ಬಗ್ಗೆ ಮಾತನಾಡಿದ್ದಾರೆ. ಅಪ್ಪು ಅವರಿಂದ ತಮಗೆ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ, ತಮ್ಮ ಕುಟುಂಬಕ್ಕೆ ಯಾವ ರೀತಿಯ ಸಹಾಯ ಆಗಿದೆ ಎನ್ನುವುದನ್ನು ಅದೆಷ್ಟೋ ಜನರು ಹೇಳಿಕೊಂಡಿದ್ದಾರೆ. ಈ ವಿಚಾರಗಳೆಲ್ಲಾ ಹೊರಬಂದ ನಂತರ ಅಪ್ಪು ಅವರು ಎಂತಹ ಬಂಗಾರದ ಮನುಷ್ಯ ಎನ್ನುವ ವಿಚಾರ ಹಲವರಿಗೆ ಗೊತ್ತಾಯಿತು.

ಹೊರಗಡೆ ಕಷ್ಟದಲ್ಲಿರುವ ಜನರಿಗೆ ಮಾತ್ರವಲ್ಲದೆ, ಚಿತ್ರರಂಗದಲ್ಲಿರುವ ಹಲವರಿಗೆ ಅಪ್ಪು ಅವರು ಸಹಾಯ ಮಾಡಿದ್ದಾರೆ. ಅಪ್ಪು ಅವರು ಚಿತ್ರೀಕರಣದಲ್ಲಿದ್ದಾಗ, ಯಾರಿಗಾದರೂ ಯಾವುದಾದರೂ ಸಮಸ್ಯೆ ಇದೆ ಎನ್ನುವ ವಿಚಾರ ಅವರಿಗೆ ತಿಳಿದುಬಂದರೆ, ಅದನ್ನು ಹೇಗೆ ಸರಿ ಮಾಡಬೇಕು ಎನ್ನುವುದರ ಬಗ್ಗೆ ಅವರು ಯೋಚನೆ ಮಾಡುತ್ತಿದ್ದರು, ಆ ದಿನ ಮುಗಿಯುವ ಒಳಗೆ ಅಥವ ಮುಂದಿನ ದಿನದ ಒಳಗೆ ವ್ಯಕ್ತಿಯ ಕಷ್ಟ ಬಗೆಹರಿಸುವ ಹಾಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದರು ಎಂದು ಅಪ್ಪು ಅವರ ಜೊತೆ ಕೆಲಸ ಮಾಡಿದ ಹಲವರು ಕಲಾವಿದರು ತಂತ್ರಜ್ಞರು ಹೇಳಿದ್ದಾರೆ.

ಅಂದೊಂದು ದಿನ ಅಪ್ಪು ಅವರಿಂದ ಸಹಾಯ ಪಡೆದಿದ್ದ ಹುಡುಗಿಯೊಬ್ಬರು ಇಂದು ಚಂದನವನದಲ್ಲಿ ಸಾಧನೆಯ ಮೆಟ್ಟಿಲನ್ನು ಎರಡು ಸಜ್ಜಾಗಿದ್ದಾರೆ. ಇಂದು ಚಂದನವನಕ್ಕೆ ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿ ಪರಿಚಯವಾಗುತ್ತಿದ್ದಾರೆ. ಇವರ ಹೆಸರು ಗೌರಿಶ್ರೀ. ನಿರ್ಮಾಪಕಿ, ನಿರ್ದೇಶಕಿ ಎನ್ನುವುದರ ಜೊತೆಗೆ ನೃತ್ಯ ಸಂಯೋಜಕಿ ಸಹ ಹೌದು, ತಮ್ಮದೇ ಆದ ನೃತ್ಯಶಾಲೆ ಹೊಂದಿದ್ದಾರೆ. ಹಾಗೂ ಅನೇಕ ಸಿನಿಮಾಗಳಲ್ಲಿ ಸಹಕಲಾವಿದೆಯಾಗಿ ನಟನೆ ಮಾಡಿದ್ದಾರೆ. ಗೌರಿಶ್ರೀ ಅವರು ಪರಮಾತ್ಮ ಸಿನಿಮಾದಲ್ಲಿ ಅಪ್ಪು ಅವರ ಜೊತೆ ಸಹ ಕಲಾವಿದೆಯಾಗಿ ತೆರೆ ಹಂಚಿಕೊಂಡಿದ್ದವರು.

ಅಂದು ಸಿನಿಮಾ ಚಿತ್ರೀಕರಣ ಸಮಯದಲ್ಲಿ ಗೌರಿಶ್ರೀ ಅವರಿಗೆ ತುಂಬಾ ಪ್ರೋತ್ಸಾಹ ಕೊಡುತ್ತಿದ್ದರಂತೆ ಅಪ್ಪು, ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಂತು ಸಾಧನೆ ಮಾಡಬೇಕು ಎನ್ನುವುದನ್ನು ಮನದಟ್ಟಾಗುವ ಹಾಗೆ ಹೇಳಿದ್ದರಂತೆ. ಹಾಗೆಯೇ ಗೌರಿಶ್ರೀ ಅವರು ನೃತ್ಯಶಾಲೆ ಶುರುಮಾಡುವ ಸಮಯದಲ್ಲಿ ಹಣ ಕಾಸಿನ ಸಹಾಯ ಮಾಡಿದ್ದರಂತೆ. ಅಪ್ಪು ಅವರು ಮಾಡಿದ ಸಹಾಯದಿಂದ ಇಂದು ನೃತ್ಯಶಾಲೆ ಶುರು ಮಾಡಿ ಅನೇಕ ಜನರಿಗೆ ನೃತ್ಯ ಕಲಿಸುತ್ತಿದ್ದಾರೆ ಗೌರಿಶ್ರೀ. ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಸಹ ಮಾಡಿದ್ದಾರೆ.

ಗೌರಿಶ್ರೀ ಅವರು ನಿರ್ದೇಶನ ಮಾಡಿ ನಿರ್ಮಾಣ ಸಹ ಮಾಡಿರುವ ಸಿನಿಮಾ ಹೆಸರು ‘ಜನರಕ್ಷಕ’, ಈ ಸಿನಿಮಾದ ಟೀಸರ್ ಲಾಂಚ್ ಇತ್ತೀಚೆಗೆ ನಡೆಯಿತು. ಈ ಸಿನಿಮಾ ಕಥೆಯನ್ನು ಲಾಕ್ ಡೌನ್ ಸಮಯದಲ್ಲಿ ಬರೆದಿದ್ದರಂತೆ ಗೌರಿಶ್ರೀ, ತಂದೆ ತಾಯಿಯಾದವರು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಕುಡಿತದ ಚಟದಿಂದ ಒಂದು ಕಟುಂಬ ಹೇಗೆ ಹಾಳಾಗುತ್ತದೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಈಗಾಗಲೇ ದೃಶ್ಯಗಳು ಮತ್ತು ಹಾಡಿನ ಚಿತ್ರೀಕರಣವನ್ನು ಬೆಂಗಳೂರಿನ ಸುತ್ತ ಮುತ್ತ ಮಾಡಲಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ ಗೌರಿಶ್ರೀ. ಕನ್ನಡದಲ್ಲಿ ನಿರ್ದೇಶಕಿಯರು ಮತ್ತು ನಿರ್ಮಾಪಕಿಯರು ತುಂಬಾ ಕಡಿಮೆ, ಇದೀಗ ಕನ್ನಡಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಬಂದಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರ.

ಜನರಕ್ಷಕ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅಪ್ಪು ಅವರ ಆಪ್ತ ಬಳಗ, ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಚಿನ್ನೇಗೌಡರು ಸಹ ಬಂದಿದ್ದರು, ಗೌರಿಶ್ರೀ ಅವರ ಬಗ್ಗೆ ಮಾತನಾಡಿ, “ಕನ್ನಡದಲ್ಲಿ ನಿರ್ಮಾಪಕಿಯರು ತುಂಬಾ ಕಡಿಮೆ. ಪಾರ್ವತಮ್ಮ ರಾಜ್ ಕುಮಾರ್ ಯಶಸ್ವಿ ನಿರ್ಮಾಪಕಿಯಾಗಿ ಅನೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಕೆಲಸ ನೀಡಿದ್ದರು, ಗೌರಿಶ್ರೀ ಅವರು ಸಹ ಅದೇ ರೀತಿ ಬೆಳೆಯಲಿ..” ಎಂದು ಚಿನ್ನೇಗೌಡರು ಹಾರೈಸಿದ್ದರೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.