ಅಪ್ಪು

ಅಪ್ಪು ಅವರ ಕೊನೆಯ ಹೊಸ ತೊಡಕು ಹಬ್ಬ ಹೇಗಿತ್ತು ನೋಡಿ…

CINEMA/ಸಿನಿಮಾ

ಇಂದು ನಮ್ಮೊಂದಿಗೆ ಇದ್ದವರು ನಾಳೆ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ವರ್ಷ ಎಲ್ಲ ಸಮಯದಲ್ಲಿ ನಮ್ಮೊಂದಿಗೆ ಇದ್ದ ಪುನೀತ್ ಅವರು ಇಂದು ನಮ್ಮಿಂದ ದೂರ ಹೋಗಿದ್ದಾರೆ. ಅವರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯವನ್ನು ಈ ಲೇಖನದಲ್ಲಿ ನೋಡೋಣ.

ಕಳೆದ ವರ್ಷ ಹೊಸ ಬೆಳಕು ದೀಪಾವಳಿ, ಯುಗಾದಿ ಹಬ್ಬದ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆ ಇದ್ದರು ಆದರೆ ಈ ವರ್ಷದ ಯುಗಾದಿ ಹಬ್ಬಕ್ಕೆ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಆದರೂ ಇದು ಸತ್ಯವಾಗಿದೆ. ಪುನೀತ್ ಅವರ ನಗುಮುಖ ನೆನಪಿಗೆ ಬರುತ್ತದೆ. ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿ ಇಷ್ಟು ದಿನಗಳು ಕಳೆದರು ಅವರ ನೆನಪು ಮಾತ್ರ ನಮ್ಮೆಲ್ಲರಲ್ಲೂ ಇದೆ. ಪುನೀತ್ ಅವರು ಇದ್ದಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಎಲ್ಲರಿಗೂ ದುಃಖವನ್ನು ತರುತ್ತದೆ.

ಸ್ವರ್ಗದಲ್ಲಿ ಅಪ್ಪನೊಂದಿಗೆ ಅಪ್ಪು ಕಣ್ಣಾಮುಚ್ಚಾಲೆ – EESANJE / ಈ ಸಂಜೆ

ಪುನೀತ್ ಅವರ ಪತ್ನಿ ಅಶ್ವಿನಿ, ಅವರ ಮಕ್ಕಳಾದ ಧೃತಿ ಹಾಗೂ ವಂದಿತಾ ಅವರು ಪುನೀತ್ ಅವರನ್ನು ನೆನೆಸಿಕೊಂಡು ಹೆಚ್ಚು ದುಃಖಪಟ್ಟರು. ಪುನೀತ್ ಅವರು ಸತ್ತ ನಂತರ ಅವರು ಬದುಕಿದ್ದಾಗ ಜನಸೇವೆ ಮಾಡುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿಯಿತು. ಅವರು ವೃದ್ಧಾಶ್ರಮ, ಅನಾಥಾಶ್ರಮ ಕಟ್ಟಿಸಿದಲ್ಲದೆ ಗೋಶಾಲೆ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹ ಪ್ರಾಮುಖ್ಯತೆ ಕೊಟ್ಟು ಸಹಾಯ ಮಾಡುತ್ತಿದ್ದರು.

ಪುನೀತ್ ಅವರ ಸಾವಿನಿಂದ ಧೈರ್ಯ ಕಳೆದುಕೊಳ್ಳದ ಅಶ್ವಿನಿ ಹಾಗೂ ಮಕಳು ಪುನೀತ್ ಅವರು ಕಾರ್ಯನಿರ್ವಹಿಸುತ್ತಿದ್ದ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ ಅವರ ನಿರ್ಧಾರಕ್ಕೆ ಜನರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಪುನೀತ್ ಅವರ ಮೊದಲ ಮಗಳು ಅಮೆರಿಕದಲ್ಲಿ ತನ್ನ ಪ್ರತಿಭೆಯಿಂದ ಸ್ಕಾಲರ್ ಶಿಪ್ ಪಡೆದು ಅದರಿಂದ ಉನ್ನತ ಶಿಕ್ಷಣ ಓದುತ್ತಿದ್ದಾರೆ. ಪುನೀತ್ ಅವರ ಮಗಳು ಸಹ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್ ಅವರ ಸಾವಿನಿಂದ ಹೊರಬರುವುದು ನಿಜಕ್ಕೂ ಕಷ್ಟದ ಕೆಲಸ ಆದರೂ ಪುನೀತ್ ಅವರು ಇಷ್ಟಪಟ್ಟು ಮಾಡುತ್ತಿದ್ದ ಯಾವ ಕೆಲಸವೂ ನಿಲ್ಲದಂತೆ ಅವರ ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಯುಗಾದಿ ಹಬ್ಬದ ಸಮಯದಲ್ಲಿ ಪುನೀತ್ ಅವರು ಊಟ ಮಾಡುತ್ತಿರುವ ವಿಡಿಯೋ, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಪುನೀತ್ ಕುಟುಂಬದವರಿಗೆ ದೇವರು ಹೆಚ್ಚಿನ ಶಕ್ತಿ ಕೊಡಲಿ ಎಂದು ಆಶಿಸೋಣ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಕನ್ನಡದ ಬಗ್ಗೆ ಅಪ್ಪು ಹಾಡಿರೋ ಹಾಡು ಕೇಳಿದ್ದೀರಾ? ಅಪ್ಪುವಿನ ಪ್ರೀತಿ ಎಷ್ಟಿತ್ತು ನೋಡಿ...