ಅಂದು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ದುಂಖದ ಮಡುವಿನಲ್ಲಿತ್ತು. ಅಕ್ಟೋಬರ್ 29ರಂದು ಕರ್ನಾಟಕದ ಮುತ್ತು, ಅಭಿಮಾನಿಗಳ ಪಾಲಿನ ಅಪ್ಪು, ಸ್ಯಾಂಡಲ್ವುಡ್ನ ಪವರ್ ಒಂದು ಎಲ್ಲರನ್ನೂ ಬಿಟ್ಟು ಬಾರದ ಊರಿನತ್ತ ಪಯಣ ಬೆಳೆಸಿದ್ದರು. ಅಪ್ಪು ಇಲ್ಲದೇ ದಿನಗಳು ಕ್ಷಣಗಳಂತೆ ಉರುಳುತ್ತಿದೆ. ಹೌದು, ಅಭಿಮಾನಿಗಳ ಪಾಲಿನ ಅಪ್ಪು ಪುನೀತ್ ರಾಜ್ಕುಮಾರ್ ಇಲ್ಲವಾಗಿ ನೋಡನೋಡುತ್ತಿದ್ದಂತೆ ಒಂದು ವರ್ಷ ಆಗುತ್ತಾ ಬರುತ್ತಿದ್ದರೂ, ಆ ನೋವನ್ನು ಅಭಿಮಾನಿಗಳು ಇನ್ನೂ ಅನುಭವಿಸುತ್ತಿದ್ದಾರೆ. ಇಂದಿಗೂ ಅವರನ್ನು ನೆನೆದು ಅದೆಷ್ಟೋ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದೊಡ್ಮನೆ ಕುಟುಂಬದ ಮುದ್ದಿನ ಮಗ ಅಪ್ಪು ಇದೀಗ ನೆನಪು ಮಾತ್ರ. ಅಪ್ಪು ದೈಹಿಕವಾಗಿ ಇಲ್ಲದೇನೆ, ತಿಂಗಳುಗಳು ಕ್ಷಣಗಳಂತೆ ಉರುಳಿ, ಅಪ್ಪು ಇಲ್ಲದೇ ಒಂದು ವರ್ಷ ಹತ್ತಿರ ಸಮೀಪಿಸುತ್ತಿದೆ. ಅಪ್ಪು ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಹೌದು, ಅಪ್ಪು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು.
ಹೌದು, ದಿನಾಲೂ ವ್ಯಾಯಾಮ ಜಿಮ್ ಎಂದು ತೊಡಗಿಸಿಕೊಂಡವರು. ಯಾವತ್ತೂ ಕೂಡ ಜಿಮ್ ವ್ಯಾಯಾಮವನ್ನು ಮಿಸ್ ಮಾಡಿಕೊಂಡವರೇ ಅಲ್ಲ. ಉತ್ತಮ ಆರೋಗ್ಯ ಶೈಲಿಯನ್ನು ರೂಢಿಸಿಕೊಂಡಿದ್ದರು. ಎಲ್ಲರೊಂದಿಗೆ ಸಾಮಾನ್ಯರಂತೆ ಇರುತ್ತಿದ್ದ ವ್ಯಕ್ತಿ, ಬೆಳೆದದ್ದು ಕೂಡ ಸಾಮಾನ್ಯರಂತೆ. ದೊಡ್ಮನೆಯ ಕೂಸದಾರೂ ಒಂದಷ್ಟು ಆದರ್ಶಗಳು, ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಕೊರತೆ ಇರದಂತೆ ಬದುಕುತ್ತಿದ್ದರು. ಎಲ್ಲರೂ ಚೆನ್ನಾಗಿ ಇರಬೇಕು ಎಂದು ಬಯಸಿದ ವ್ಯಕ್ತಿಯೂ ಇದೀಗ ನಮ್ಮ ಜೊತೆಗೆ ಇಲ್ಲ. ಅಭಿಮಾನಿಗಳು ಅಪ್ಪುವಿನ ಆದರ್ಶಯುತ ಬದುಕನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಅಪ್ಪುವನ್ನು ದೇವರ ಮನೆಯಲ್ಲಿಟ್ಟು ಆರಾಧಿಸುತ್ತಿದ್ದಾರೆ. ನಟನಾಗಿ ಮಾತ್ರವಲ್ಲದೇ ಒಳ್ಳೆಯ ಗಾಯಕನಾಗಿಯೂ ಅಪ್ಪು ಎಲ್ಲರಿಗೂ ಹತ್ತಿರವಾಗಿದ್ದರು. ಕನ್ನಡದ ಕುರಿತು ಅಪ್ಪು ಹಾಡಿದ್ದ ಹಾಡು ಹೇಗಿತ್ತು ಗೊತ್ತಾ, ಆ ಹಾಡು ಯಾವುದು ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಅಪ್ಪುವಿನದು ಎಲ್ಲರೂ ಮೆಚ್ಚುವ ವ್ಯಕ್ತಿತ್ವ. ಹೌದು, ಸಿನಿಮಾ ಬದುಕಿನಲ್ಲಿ ಸಣ್ಣ ವಯಸ್ಸಿನಲ್ಲಿ ಮಾಡಿದ ಸಾಧನೆಗಳು ಹಾಗೂ ವೈಯುಕ್ತಿಕ ಬದುಕಿನಲ್ಲಿ ಮಾಡಿದ ಸಾಮಾಜಿಕ ಕೆಲಸಗಳು ಹೀಗೆ ಅಪ್ಪು ಬದುಕಿನ ರೀತಿ ಎಲ್ಲರಿಗೂ ಆದರ್ಶವಾಗಿದೆ. ಮೂರು ವರ್ಷದ ಮಗುವಿರುವಾಗಲೇ ಬಾಲ ನಟನಾಗಿ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡರು. ತದನಂತರದಲ್ಲಿ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು, ಬೆಟ್ಟದ ಹೂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ಎಲ್ಲರ ಮನಸ್ಸನ್ನು ಗೆದ್ದುಕೊಂಡರು 2002 ರ ವೇಳೆ ನಾಯಕ ನಟನಾಗಿ ಅಪ್ಪು ಸಿನಿಮಾದ ಮೂಲಕ ಎಂಟ್ರಿ ಕೊಟ್ಟರು. ಆದಾದ ಬಳಿಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡರು.
ಹೌದು, ಅಭಿ, ವೀರ, ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಪರಮಾತ್ಮ, ಜಾಕಿ, ರಣವಿಕ್ರಮ, ದೊಡ್ಮನೆ ಹುಡುಗ, ರಾಜಕುಮಾರ ಸೇರಿದಂತೆ ಅನೇಕ ಸಿನಿಮಾಗಳನ್ನು ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನಾಗಿ, ನಿರ್ಮಾಪಕರಾಗಿ ಹಾಗೂ ನಿರೂಪಕರಾಗಿಯೂ ಗಮನ ಸೆಳೆದಿದ್ದರು. ಗಾಯಕರಾಗಿಗುರುತಿಸಿಕೊಂಡಿದ್ದ ಇವರು ಅನೇಕ ಹಾಡುಗಳಿಗೆ ಕಂಠದಾನ ಮಾಡಿದ್ದರು. ಅಪ್ಪು ಕನ್ನಡ ಪ್ರಸಿದ್ಧ ಹಾಡನ್ನು ಹಾಡಿದ್ದರು.. ಜೇನಿನ ಹೊಳೆಯೂ, ಹೂವಿನ ಮಳೆಯೂ ಅಪ್ಪು ತನ್ನ ಕಂಠಹಾಡಿದ್ದರು. ಈ ಹಾಡು ಅಪ್ಪುವಿನ ಧ್ವನಿಯಲ್ಲಿ ಹೇಗೆ ಮೂಡಿ ಬಂದಿತ್ತು ಎಂದು ನೋಡಲು ಈ ಕೆಳಗಿನ ವಿಡಿಯೋ ನೋಡಿ.