
ದೊಡ್ಮನೆ ಹುಡುಗ, ಕನ್ನಡ ಸಿನಿಮಾರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲವಾಗಿ ಏಳು ತಿಂಗಳು ಕಳೆದಿದೆ. ಎಲ್ಲರ ಮನಸ್ಸಿನಲ್ಲಿ ಜೀವಂತವಾಗಿರುವ ಅಪ್ಪು ಧ್ರುವ ತಾರೆಯಾಗಿದ್ದಾರೆ. ಹೌದು ಆದರೆ ಅಪ್ಪುವನ್ನು ನೆನಪಿಸಿಕೊಳ್ಳದ ಜನರಿಲ್ಲ. ಪ್ರತಿಯೊಬ್ಬರು ಕೂಡ ಅಪ್ಪುವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಪ್ಪುವಿನದು ಯಾರಿಗೂ ನಿಲುಕದ ವ್ಯಕ್ತಿತ್ವ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ತಾನೊಬ್ಬ ಸ್ಟಾರ್ ನಟನಾದರೂ ಎಲ್ಲಿಗೂ ಕೂಡ ತೋರಿಸಿಕೊಳ್ಳಲೇ ಇಲ್ಲ. ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳ ಜೊತೆಗೆ ಅಕ್ಕರೆ ಪ್ರೀತಿ ಹಾಗೂ ವಿನಯವಂತಿಕೆಯಿಂದ ಮಾತನಾಡಿಸುತ್ತಿದ್ದರು.
ಹೌದು, ಪವರ್ ಸ್ಟಾರ್ ಪಟ್ಟವನ್ನು ಮತ್ತೆ ಯಾವ ನಟ ಬಂದರೂ ಕೂಡ ತುಂಬಲೂ ಸಾಧ್ಯವಿಲ್ಲ. ಅದೆಷ್ಟೇ ಯುವ ನಟರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರೂ ಪವರ್ ಸ್ಟಾರ್ ಅಗಲು ಸಾಧ್ಯವೇ ಇಲ್ಲ. ಇನ್ನು ಬದುಕಿದ್ದ ಅಷ್ಟು ದಿವಸ ಯಾರಿಗೂ ಗೊತ್ತಾಗದಂತೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿದ್ದ ಅಪ್ಪುವಿನ ಇನ್ನೊಂದು ಮುಖವು ಅಪ್ಪು ಇಲ್ಲವಾದ ಬಳಿಕ ತಿಳಿಯಿತು. ಅಪ್ಪು ಇದೀಗ ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ. ಅಪ್ಪುವನ್ನು ದೇವರ ಸ್ಥಾನದಲ್ಲಿ ನಿಂತು ಪೂಜೆ ಮಾಡುತ್ತಿದ್ದಾರೆ. ಅದೇನೇ ಇರಲಿ ಅಪ್ಪು ಎಂದಿಗೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿಯೇ ಇರುತ್ತಾರೆ. ಇನ್ನು ಅಪ್ಪುವಿನ ವೈಯುಕ್ತಿಕ ಬದುಕಿನಲ್ಲಿ ಮಾಡಿದ ಸಮಾಜ ಮುಖಿ ಕೆಲಸಗಳು ಹಾಗೂ ಸಿನಿಮಾರಂಗದಲ್ಲಿನ ಸಾಧನೆಯ ಕುರಿತು ತಿಳಿದೇ ಇದೆ. ಅಂದಹಾಗೆ, ಅಪ್ಪುವಿನ ಮತ್ತೊಂದು ಕ್ರೇಜ್ ಇತ್ತು. ಇಷ್ಟ ಪಟ್ಟು ತೆಗೆದುಕೊಂಡಿದ್ದ ಆ ಕಾರನ್ನು ಇದೀಗ ಯಾರು ಬಳಸುತ್ತಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ
ಸಿನಿಮಾ ಹೊರತು ಪಡಿಸಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದರು. ಅಂದಹಾಗೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಕಾರ್ ಕ್ರೇಜ್ ಬಾಲ್ಯದಿಂದಲೇ ಇತ್ತು. ಹೌದು, ಅಪ್ಪು ಸಾಕಷ್ಟು ಐಶಾರಾಮಿ ಕಾರುಗಳ ಒಡೆಯನಾಗಿದ್ದರು. ಅವರ ಬಳಿ ಆಡಿ, ರೇಂಜ್ ರೋವರ್ ಸೇರಿದಂತೆ ಅನೇಕ ಕಾರುಗಳಿದ್ದವು. ಅದರ ಜೊತೆಗೆ ಬೈಕ್‌ಗಳನ್ನು ಹೊಂದಿದ್ದರು. ಕಾರ್ ಗಳ ಲಿಸ್ಟ್ ನಲ್ಲಿ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿತ್ತು. ಇನ್ನು ಅಪ್ಪುಗೆ ಲ್ಯಾಂಬೋರ್ಗಿನಿ ಕಾರು ಎಂದರೆ ಅಚ್ಚು ಮೆಚ್ಚು. ಆದರೆ ಅಪ್ಪು ಇಲ್ಲವಾದ ಬಳಿಕ ಆ ಕಾರು ಕೂಡ ಅಪ್ಪುವಿನ ಮನೆಯಲ್ಲಿ ಇಲ್ಲ. ಪುನೀತ್ ರಾಜ್ ಕುಮಾರ್ 2019ರಲ್ಲಿ ಅವರು ಲ್ಯಾಂಬೋರ್ಗಿನಿ ಕಾರನ್ನು ಕೊಂಡುಕೊಂಡಿದ್ದರು. ಈ ಕಾರನ್ನು ಪುನೀತ್ ರಾಜ್‌ಕುಮಾರ್ ಅವರು ತಮ್ಮ ಮುದ್ದಿನ ಮಡದಿಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು.
ಹೌದು, ಮಹಿಳಾ ದಿನಾಚರಣೆಯ ಅಂಗವಾಗಿ ಅಪ್ಪು, ಅಶ್ವಿನಿ ಅವರಿಗೆ ಪ್ರೀತಿಯಿಂದ ಉಡುಗೊರೆ ಮಾಡಿದ್ದರು. ಈ ನೀಲಿ ಬಣ್ಣ ಲ್ಯಾಂಬೋರ್ಗಿನಿ ಕಾರಿನ ಬೆಲೆ ಸುಮಾರು 4 ಕೋಟಿ ರೂಪಾಯಿಯಾಗಿತ್ತು. ಅದಲ್ಲದೇ, ಪತ್ನಿಗೆಂದು ತೆಗೆದುಕೊಂಡಿದ್ದು ಆದರು ಕೂಡ ಅಪ್ಪು ಬಳಕೆ ಮಾಡುತ್ತಿದ್ದರು. ಈ ಕಾರಿನಲ್ಲಿ ರೈಡ್ ಹೋಗುವುದನ್ನು ಇಷ್ಟ ಪಡುತ್ತಿದ್ದರು. ಆದರೆ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಲ್ಯಾಂಬೋರ್ಗಿನಿ ಕಾರನ್ನು ಯಾರು ಬಳಕೆ ಮಾಡುತ್ತಿರಲಿಲ್ಲವಂತೆ. ಈಗ ಈ ಕಾರು ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ಇಲ್ಲ. ಬದಲಾಗಿ ಆ ಕಾರು ದುಬೈನಲ್ಲಿ ಇದೆ ಎನ್ನಲಾಗಿದೆ. ಈ ಕಾರನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರ ಸೋದರನ ಬಳಿ ಇದೆ ಎನ್ನಲಾಗಿದೆ.
Comments are closed.