ಕನ್ನಡ ಚಿತ್ರರಂಗದ ರಾಜರತ್ನ ಪವರ್ ಸ್ಟಾರ್ ಕರುನಾಡ ರತ್ನ ಸರಳತೆಯ ಸಾಮ್ರಾಟ್, ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಅದಾಗಲೇ 4 ತಿಂಗಳು ಕಳೆದಿದ್ದು ಆದರೆ ಅವರಿಗೆ ಇದ್ದ ಪರಿಸರ ಕಾಳಜಿ ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಕೂಡ ಮೂಕ ವಿಸ್ಮಿತರನ್ನಾಗಿಸುತ್ತೆ. ಅವರು ಮಾಡಿ ಹೋದ ಕೆಲಸವನ್ನು ಎಲ್ಲರು ಮುಂದುವರೆಸಿಕೊಂಡು ಹೋಗುವಂತೆ ಮಾಡಿದ್ದಾರೆ. ಹೌದು ಅವರು ನಮ್ಮ ಜೊತೆ ಇಲ್ಲ ಎಂಬುವ ಕಹಿ ಸತ್ಯವನ್ನು ಒಪ್ಪಿಕೊಂಡು ನಾವು ಹೋಗಲೇ ಬೇಕಾಗಿದ್ದು ಪ್ರತಿದಿನ ಅಪ್ಪು ಅವರನ್ನು ನೆನೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇದೆ.
ಹೌದು ಇದರ ಜೊತೆಗೆ ಒಂದಲ್ಲ ಒಂದು ರೀತಿ ಅಪ್ಪು ಅವರಿಗೆ ಗೌರವ ಸಲ್ಲಿಸುವ ಕೆಲಸಗಳು ನಡೆಯುತ್ತಲೇ ಇದ್ದು ಇತ್ತೀಚೆಗಷ್ಟೇ ಕೆಎಂಎಫ್ ಕೂಡ ಅಪ್ಪು ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದು ಇದನ್ನು ಕಂಡ ಅಭಿಮಾನಿಗಳು ಭಾವುಕರಾಗಿದ್ದರು. ಯಾವುದೇ ಹಣ ಪಡೆಯದೇ ಅಪ್ಪು ನಂದಿನಿ ಜಾಹೀರಾತಿನಲ್ಲಿ ನಟಿಸಿದ್ದು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಅದರಂತೆ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅಕ್ಟೋಬರ್ 29 ಆ ದಿನವನ್ನು ಈ ಕ್ಷಣಕ್ಕೂ ಕೂಡ ಯಾವ ಒಬ್ಬ ವ್ಯಕ್ತಿಯಿಂದಲೂ ಕೂಡ ಮರೆಯಲು ಸಾಧ್ಯವಿಲ್ಲ ಎನ್ನಬಹುದು. ಹೌದು ಕರ್ನಾಟಕ ರಾಜ್ಯ ಪವರ್ ಅನ್ನೇ ಕಳೆದುಕೊಂಡ ದಿನವಾಗಿದ್ದು ಆ ದಿನ ಇಡೀ ಕರ್ನಾಟಕ ಸ್ತಬ್ಧವಾಗಿತ್ತು.
ಹೌದು ಪುನೀತ್ ರಾಜ್ ಕುಮಾರ್ ರಂತಹ ಅದ್ಭುತವಾದ ಮನುಷ್ಯ ಈಗ ಇಲ್ಲ ಎನ್ನುವುದನ್ನ ಈ ಕ್ಷಣಕ್ಕೂ ಕೂಡ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಹೌದು ಅಂತಹ ವ್ಯಕ್ತಿತ್ವ ಅವರದ್ದಾಗಿದ್ದು ಇಂತಹ ಒಂದು ದಿನ ಎಂದು ಚಿತ್ರರಂಗದವರಾಗಲಿ ಕರ್ನಾಟಕದವರಾಗಲಿ ಬಂದಿಲ್ಲ. ಹೌದು 46 ವರ್ಷಕ್ಕೆ ಪುನೀತ್ ಅವರಿಗೆ ಈ ರೀತಿ ಆಗುತ್ತದೆ ಎಂದು ಯಾರೊಬ್ಬರೂ ಕೂಡ ಊಹೆ ಕೂಡ ಮಾಡಿರಲಿಲ್ಲ. ಇನ್ನು ಪುನೀತ್ ರಾಜ್ ಕುಮಾರ್ ರವರು ಅಗಲಿ ಇಲ್ಲಿಗೆ ಒಂದು ತಿಂಗಳು ಕಳೆದಿದ್ದು ಆದರೆ ಪುನೀತ್ ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌದು ಅಭಿಮಾನಿಗಳು ಅಪ್ಪು ಇದ್ದರೆ ಎಂದೇ ಹೇಳುತ್ತಿದ್ದು ಇನ್ನುಮುಂದೆ ಅಪ್ಪು ಅವರ ಸಿನಿಮಾ ಅಭಿನಯ ಹಾಡುಗಳು ಫೈಟ್ ಗಳನ್ನು ತೆರೆಮೇಲೆ ನೋಡಲು ಸಾಧ್ಯ ಆಗುವುದಿಲ್ಲ ಎನ್ನುವುದೇ ಎಲ್ಲರಿಗೂ ತೀವ್ರವಾದ ನೋವು ಉಂಟಾಗಿದೆ ಎನ್ನಬಹುದು. ಅಭಿಮಾನಿಗಳಂತೂ ಹಲವು ರೀತಿಗಳಲ್ಲಿ ಅಪ್ಪು ಅವರ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಇದೀಗ ಅಪ್ಪು ಕೊನೆಯದಾಗಿ ಪಾಲ್ಗೊಂಡಿದ್ದ ಮಾಡುವೆ ವಿಡಿಯೋ ಇಲ್ಲಿದೆ ನೋಡಿ ಒಮ್ಮೆ…