ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ಈಗಲೂ ಕೂಡ ಹೆಚ್ಚು ಜನರಿಗೆ ನೋವು ತರಿಸುತ್ತದೆ. ಹೌದು ಪುನೀತ್ ರಾಜಕುಮಾರ್ ಕೇವಲ ತೆರೆ ಮೇಲೆ ಮಾತ್ರವಲ್ಲದೆ, ನಿಜ ಜೀವನದಲ್ಲಿ ಒಬ್ಬ ಮನುಷ್ಯ ಹೇಗೆ ಬದುಕಬೇಕು, ಹೇಗೆ ಸಾರ್ಥಕ ಜೀವನ ಮಾಡಬೇಕು, ಯಾವ ರೀತಿ ಬದುಕಿದರೆ ಸಾವನ್ನಪ್ಪಿದ ಮೇಲೆಯೂ ಹೆಸರು ಇರುವಂತೆ ಬದುಕಬಹುದು ಎಂಬುದಾಗಿ ತೋರಿಸಿದ್ದಾರೆ. ಹಾಗೆ ಅದೆಷ್ಟೋ ಜನರ ಕಣ್ಣೀರ ಒರೆಸಿದ್ದಾರೆ. ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಮಕ್ಕಳ ಶಾಲೆ, ಮಕ್ಕಳ ಆರೈಕೆ, ಗೋಶಾಲೆ, ಅನಾಥಾಶ್ರಮ, ವೃದ್ಧಾಶ್ರಮ ಎಲ್ಲವನ್ನೂ ಅಪ್ಪು ನೋಡಿಕೊಳ್ಳುತ್ತಿದ್ದರು. ಅಪ್ಪು ಅವರನ್ನ ಇದೀಗ ಅಭಿಮಾನಿಗಳು ಮಾತ್ರವಲ್ಲದೆ ಇಡೀ ಕನ್ನಡ ಜನತೆ ಹಾಗೂ ಅವರ ಇಡೀ ಕುಟುಂಬ ಹೆಚ್ಚು ನೋವಿನಲ್ಲಿ ನೆನೆದು ಜೀವನ ಸಾಗಿಸುವಂಥಾಗಿದೆ.

ಹೌದು ಇತ್ತೀಚಿಗೆ ರಾ ರಾ ರಕ್ಕಮ್ಮ ಎನ್ನುವ ವಿಕ್ರಾಂತ್ ರೋಣ ಸಿನಿಮಾ ಒಂದು ಹಾಡು ಭಾರಿ ವೈರಲ್ ಆಗುತ್ತಿದೆ. ಸುದೀಪ್ ಅವರ ಈ ಸಿನಿಮಾದ ಹಾಡು ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಅಪ್ಪು ಅವರು ಕೂಡ ಈ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ ಸ್ನೇಹಿತರೆ. ಹೌದು ಅಪ್ಪುರ ಪ್ರೀತಿಯ ಅಭಿಮಾನಿ ಅಪ್ಪು ಇದ್ದಿದ್ದರೆ ಅವರು ಖಂಡಿತಾ ಇಷ್ಟ ಪಟ್ಟು ಡಾನ್ಸ್ ಮಾಡುತ್ತಿದ್ದರು ಎಂದು ಅವರದ್ದೇ ಒಂದು ಸಿನಿಮಾದ ವಿಡಿಯೋ ತೆಗೆದುಕೊಂಡು ಎಡಿಟ್ ಮಾಡಲಾಗಿ ರಾರಾ ರಕ್ಕಮ್ಮ ಎನ್ನುವ ಹಾಡನ್ನು ಸೇರ್ಪಡೆ ಮಾಡಿದ್ದಾರೆ. ಅದು ಪಕ್ಕ ಸೂಟ್ ಆಗಿದ್ದು ಇದೀಗ ಎಲ್ಲೆಡೆ ವೈರಲಾಗುತ್ತಿದೆ.ಅಪ್ಪು ಅವರನ್ನು ಈ ವಿಡಿಯೋದಲ್ಲಿ ನೀವೂ ಒಮ್ಮೆ ನೋಡಿ. ಹಾಗೆ ಒಂದು ಕ್ಷಣ ಸಂತಸ ಆಗುತ್ತದೆ ಅಪ್ಪು ಅವರನ್ನ ಈ ಡ್ಯಾನ್ಸ್ ನಲ್ಲಿ ನೋಡಿ. ನೀವು ನೋಡಿ ನಿಮಗೂ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು..
View this post on Instagram