
ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನಿತ್ಯ ಪುನೀತ್ ಅವರ ಬಗ್ಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಜನ ಕಾತುರರಾಗಿದ್ದಾರೆ. ಹೌದು ಪುನೀತ್ ಇಲ್ಲ ಎಂಬ ಸತ್ಯ ಗೊತ್ತಿದ್ದರೂ ಇದೊಂದು ಕನಸಾಗಿ ಬಿಡಲಿ. ಅಪ್ಪು ಜೀವಂತವಾಗಿ ವಾಪಸ್ ಬರಲಿ ಅನ್ನೋ ಆಸೆ ಎಲ್ಲರಲ್ಲೂ ಯಾವುದೋ ಒಂದು ಮೂಲೆಯಲ್ಲಿ ಹಾಗೆ ಉಳಿದಿದೆ. ಹೌದು ದುರಾದೃಷ್ಟವಶಾತ್ ಪುನೀತ್ ರಾಜ್ ಕುಮಾರ್ ಅವರು ಮತ್ತೆಂದೂ ಮರಳಿ ಬಾರದ ಲೋಕಕ್ಕೆ ಹೋಗಿರುವುದು ಸತ್ಯ.

ಅದೇನೇ ಇರಲಿ ಅಪ್ಪು ಇಂದು ನಮ್ಮೊಂದಿಗಿಲ್ಲ. ಹೌದು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದು ನಿಮಗೆಲ್ಲಾ ಗೊತ್ತಾ ಅಪ್ಪು ಹಾಗೂ ಯಶ್ ಇಬ್ಬರೂ ಒಳ್ಳೆಯ ಸ್ನೇಹಿತರು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಯಶ್ ಮನೆಯಲ್ಲಿ ಯಾವುದೇ ಸಮಾರಂಭ ನಡೆದರೂ ಅಲ್ಲಿ ಪುನೀತ್ ಹಾಜರಿರುತ್ತಿದ್ದರು. ಅದರಂತೆಯೇ ಕಳೆದ ವರುಷ ಅಕ್ಟೋಬರ್ 26ರಂದು ನಡೆದ ಭಜರಂಗಿ ಪ್ರಮೋಶನ್ ಕಾರ್ಯಕ್ರಮದಲ್ಲಿ ಶಿವಣ್ಣ ಅಪ್ಪು ಯಶ್ ಮೂವರು ಕೂಡ ವೇದಿಕೆ ಮೇಲೆ ಹಾಜರಿದ್ದರು. ಹಿಂದಿನ ದಿನ ಪುನೀತ್ ಒಟ್ಟಿಗೆ ಇದ್ದರು. ಆದರೆ ಮಾರನೆಯ ದಿನ ಪುನೀತ್ ಎಲ್ಲರನ್ನೂ ಬಿಟ್ಟು ಇಹಲೋಕ ತೆಗೆಸಿದ ಸುದ್ದಿ ಕೇಳಿ ಶಾಕ್ ಆಗಿದ್ದರು.
ಒಂದು ವಸ್ತು ತುಂಬಾ ಇಷ್ಟವಾಗಿತ್ತಂತೆ. ಕೊನೆಗೂ ಅವರಿಗೆ ಆ ವಸ್ತು ಧಕ್ಕಲೇ ಇಲ್ಲ. ಅದು ಏನ್ ಗೊತ್ತಾ? ಕೆಜಿಎಫ್ ನಲ್ಲಿ ಬಿಟ್ಟಿದ್ದ ಯಶ್ ಅವರ ಗಡ್ಡ. ಯಶ್ ಅವರ ಗಡ್ಡ ಎಂದರೆ ಪುನೀತ್ ರಾಜಕುಮಾರ್ ಅವರಿಗೆ ಇಷ್ಟವಂತೆ. ಹಾಗೆಂದು ರ್ಯಾಪಿಡ್ ರಶ್ಮಿ ಶೋನಲ್ಲಿ ಪುನೀತ್ ರಾಜ್ ಕುಮಾರ್ ಅವರೇ ಹೇಳಿದ್ದರು. ಯಶ್ ಅವರ ಗಡ್ಡ ನನಗಿಷ್ಟ. ಆದರೆ ಏನು ಮಾಡುವುದು ನಮಗೆ ಆ ಥರ ಗಡ್ಡ ಬರುವುದಿಲ್ಲ ಎಂದಿದ್ದರು. ಆದರೆ ಇದೋಗ ಅಪ್ಪು ಅಗಲಿದ ನಂತರ ಯಶ್ ರವರ ರೀತಿ ಅಪ್ಪು ಅವರಿಗೆ ಗಡ್ಡ ಬಂದಿರುವ ಫೋಟೋ ಬಹಳಾನೇ ವೈರಲ್ ಆಗಿದ್ದು ಈ ಫೋಟೋ ನೋಡುತ್ತಿದ್ದರೆ ಎಂತಹವರಿಗೂ ಕೂಡ ಕರಳು ಚುರುಕ್ ಎನ್ನುತ್ತದೆ.
Comments are closed.