ಅಪ್ಪು

ಬೆಂಗಳೂರಿನ ಆಟೋ ನಲ್ಲಿ ಅಶ್ವಿನಿಯನ್ನು ಅಪ್ಪು ಸುತ್ತಾಡಿಸಿದ ವಿಡಿಯೋ…ನೋಡಿ…

Today News / ಕನ್ನಡ ಸುದ್ದಿಗಳು

ಅಭಿಮಾನಿಗಳು ಅಪ್ಪು ಅವರನ್ನ ಇಷ್ಟ ಪಡುವುದಕ್ಕೆ ನೂರೆಂಟು ಕಾರಣಗಳಿವೆ. ಹೌದು ಅದರಲ್ಲೊಂದು ಸಿಂಪ್ಲಿಸಿಟಿ ಅಂತಾನೇ ಹೇಳಬಹುದು. ತಂದೆಯಂತೆಯೇ ಸರಳ ವ್ಯಕ್ತಿತ್ವದ ಅಪ್ಪು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ಪುನೀತ್ ರಾಜ್‌ಕುಮಾರ್‌ ಇಷ್ಟಪಡುವುದಕ್ಕೆ ಕಾರಣನೇ ಈ ಸರಳತೆ. ಹೌದು ಪುನೀತ್ ಎಷ್ಟು ಸರಳ ವ್ಯಕ್ತಿ ಅನ್ನುವುದುಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದ್ದು ಶ್ರೀಮಂತ ಕುಟುಂಬದಲ್ಲೇ ಜನಿಸಿದ್ದರೂ ಕೂಡ ಪುನೀತ್ ರಾಜ್‌ಕುಮಾರ್ ಎಂದಿಗೂ ಆದನ್ನು ತಲೆ ಹಾಕಿಕೊಂಡಿದ್ದ ಯಾರೂ ಕಂಡಿಲ್ಲ. ಹೌದು ಫೈವ್ ಸ್ಟಾರ್‌ನಲ್ಲೇ ಊಟ ಮಾಡುವ ಅಭ್ಯಾಸವಿರಲಿಲ್ಲ. ಎಲ್ಲರಂತೆ ತಾನೂ ಕೂಡ ಒಬ್ಬನೇ ಎನ್ನುವಂತಿದ್ದು ರಸ್ತೆ ಬದಿಯಲ್ಲಿ ನಿಂತು ಇಡ್ಲಿ ತಿನ್ನುತ್ತಿದ್ದ ಫೋಟೊಗಳನ್ನೂ ನೋಡಿದ್ದೇವೆ. ಚಿಕ್ಕ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದನ್ನೂ ಕೂಡ ನೋಡಿದ್ದೇವೆ.

ಸದ್ಯ ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅವರ ಬಗ್ಗೆ ಒಂದೊಂದೇ ಸಂಗತಿಗಳು ಹೊರಬೀಳುತ್ತಿದ್ದು ಅಸಹಾಯಕರಿಗೆ ಅಪ್ಪು ಮಾಡಿದ ಸಹಾಯ ಅಗಲಿದ ಬಳಿಕ ಒಂದೊಂದಾಗೇ ಜಗತ್ತಿಗೆ ಗೊತ್ತಾಗುತ್ತಿದೆ. ಈಗ ಅಪ್ಪು ಪತ್ನಿಯೊಂದಿಗೆ ಆಟೋರಿಕ್ಷಾದಲ್ಲಿ ಜಾಲಿರೈಡ್ ಹೊರಟ ವಿಡಿಯೋವೊಂದು ವೈರಲ್ ಆಗುತ್ತಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಈ ಚಿಕ್ಕ ವಿಡಿಯೋದಲ್ಲಿ ಪವರ್‌ಸ್ಟಾರ್ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಇವರೊಂದಿಗೆ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಸಹ ಇದ್ದು ಇಬ್ಬರೂ ಆಟೋದಲ್ಲಿ ಪ್ರಯಾಣ ಮಾಡುತ್ತಿರುವ ಇದೇ ವಿಡಿಯೋ ನೋಡಿ ಮತ್ತೆ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಎಸಿ ಕಾರು ಇದ್ದರೂ ಅಪ್ಪು ಆಟೋದಲ್ಲಿ ಪ್ರಯಾಣ ಮಾಡುತ್ತಾ ಎಂಜಾಯ್ ಮಾಡಿದ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕರ್ನಾಟಕದಲ್ಲಿ ಹೀಗೆ ಆಟೋ ರಿಕ್ಷಾ ಏರಿ ಕೂರಲು ಸಾಧ್ಯವಿತ್ತಾ? ಖಂಡಿತಾ ಇಲ್ಲ. ಹೌದು ಅದೇನಾದರೂ ವಿಷಯ ಗೊತ್ತಾಗಿದ್ದರೆ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ರನ್ನು ಮುತ್ತಿಕೊಳ್ಳುತ್ತಿದ್ದರು. ಹಲವು ವರ್ಷಗಳ ಹಿಂದೆ ಅಪ್ಪು ಮುಂಬೈಗೆ ಹೋಗಿದ್ದಾಗಾ ಆಟೋದಲ್ಲಿ ಪ್ರಯಾಣ ಮಾಡಿದ ವಿಡಿಯೋ ಎನ್ನಲಾಗಿದ್ದು ಇದೇ ವೇಳೆ ಪತ್ನಿ ಜೊತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಇದನ್ನು ಬೇರೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ರೆಕಾರ್ಡ್ ಮಾಡಿದ್ದಾರೆ. ಪುನೀತ್ ಆಟೋರಿಕ್ಷಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಭಾವುಕರಾಗಿದ್ದು ಎಂಥಾ ಅದ್ಬುತ ಜೋಡಿ ನಿಮ್ಮದು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.