ಕರ್ನಾಟಕದಲ್ಲಿ ಅತ್ಯಂತ ಚಿರಪರಿಚಿತ ಹೆಸರು ಆಂಕರ್ ಅನುಶ್ರೀ. ಅನುಶ್ರೀ ಬಗ್ಗೆ ಯಾರಿಗೂ ಗೊತ್ತಿಲ್ಲ ಎನ್ನುವ ಹಾಗೆಯೇ ಇಲ್ಲ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಹಾಗೂ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಅನುಶ್ರೀ ಅವರೇ ಮುಖ್ಯ ಆಂಕರ್. ಸಾಕಷ್ಟು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡುತ್ತಾ ಬಂದಿರುವ ಅನುಶ್ರೀ ಅವರು.
ಕನ್ನಡದಲ್ಲಿ ಯಾವುದೇ ಚಿತ್ರರಂಗದ ಕಾರ್ಯಕ್ರಮಗಳು ನಡೆದು ಅದಕ್ಕೂ ಕೂಡ ಆಂಕರ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವ ಅನುಶ್ರೀ ಸಾಕಷ್ಟು ಕಷ್ಟಗಳನ್ನ ಅನುಭವಿಸಿದವರು ಎನ್ನುವುದನ್ನು ಮರೆಯುವ ಹಾಗಿಲ್ಲ. ಹೌದು, ಬಹಳ ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಯನ್ನ ಹೊತ್ತುಕೊಂಡ ಅನುಶ್ರೀ ಅವರು ತಮ್ಮ ಹುಟ್ಟುರಾದ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ.
ಆಂಕರಿಂಗ್ ಮಾಡುವ ಕಲೆ ಇದ್ದ ಅನುಶ್ರೀ ಅವರಿಗೆ ಬೆಂಗಳೂರಿನಲ್ಲಿ ಸಣ್ಣಪುಟ್ಟ ಅವಕಾಶಗಳು ಸಿಗುತ್ತವೆ. ಆದರೆ ಕಾರ್ಯಕ್ರಮದ ನಿರೂಪಣೆಗೆ ಅನುಶ್ರೀ ಅವರಿಗೆ ಸಿಗುತ್ತಿದ್ದ ಸಂಬಳ ಬಹಳ ಕಡಿಮೆ. ಹಾಗಾಗಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ ಮಾಡಲು ತೊಡಗುತ್ತಾರೆ. ಆ ಸಮಯದಲ್ಲಿ ಸಣ್ಣ ಲೋಕಲ್ ಚಾನೆಲ್ ನಲ್ಲಿ ನಿರೂಪಣೆ ಕೆಲಸ ಮಾಡುತ್ತಿದ್ದರು ಅನುಶ್ರೀ.
ಹೀಗೆ ಕಷ್ಟಪಡುತ್ತಿರುವ ಸಮಯದಲ್ಲಿ ಅನುಶ್ರೀ ಅವರಿಗೆ ಡಿಮ್ಯಾಂಡ್ ಡಿಮ್ಯಾಂಡ್ ಹಾಗೂ ಕುಣಿಯೋಣ ಬಾರ ಎನ್ನುವ ರಿಯಾಲಿಟಿ ಶೋ ಗಳಲ್ಲಿ ನಿರೂಪಣೆ ಮಾಡಲು ಅವಕಾಶ ಸಿಗುತ್ತೆ. ಈ ರಿಯಾಲಿಟಿ ಶೋಗಳ ಮೂಲಕ ಯಶಸ್ಸನ್ನಗಳಿಸುತ್ತಾರೆ ಅನುಶ್ರೀ. ಇಂದು ಜೀ ವಾಹಿನಿಯ ಸರಿಗಮಪ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗಳಲ್ಲಿ ಅನುಶ್ರೀ ಅವರೇ ಮುಖ್ಯ ಆಕರ್ಷಣೆ.
ಅಂದು 500 ರೂಪಾಯಿಗೆ ಪರೆದಾಡುತ್ತಿದ್ದ ಅನುಶ್ರೀ ಇಂದು ಎಪಿಸೋಡ್ ಒಂದರ ನಿರೂಪಣೆಗೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಹಣ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಇಷ್ಟು ಹಣ ಹೆಸರು ಗಳಿಸಿರುವ ಅನುಶ್ರೀ ಇನ್ನೂ ಯಾಕೆ ಮದುವೆಯಾಗಿಲ್ಲ ಅಂತ ಜನ ಕೇಳುತ್ತಲೇ ಇರುತ್ತಾರೆ. ನಾನಿನ್ನೂ ನನ್ನ ಗುರಿ ಮುಟ್ಟಿಲ್ಲ. ನನ್ನ ಜವಾಬ್ದಾರಿಗಳು ಮುಗಿದಿಲ್ಲ.
ಅಮ್ಮ ಹಾಗೂ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದೇ ಅನು ಉತ್ತರಿಸುತ್ತಾರೆ. ಪಟಪಟಾ ಅಂತ ಮಾತನಾಡುವ ಅತ್ಯಂತ ಚುರುಕಿನ ಅನುಶ್ರೀ, ನಿರೂಪಣೆ ಮಾತ್ರವಲ್ಲದೆ ಬೆಂಕಿ ಪಟ್ಟಣ, ಮುರುಳಿ ಮೀಟ್ಸ್ ಮೀರಾ ಎನ್ನುವ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಇಂದು ಕನ್ನಡದ ಬೆಸ್ಟ್ ಆಂಕರ್ ಎನಿಸಿಕೊಂಡಿರುವ ಅನುಶ್ರೀ.
ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚಿನ್ನದ ಬೇಟೆ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಹೌದು ಕೆಂಪು ಬಣ್ಣದ ತುಂಡು ಬಟ್ಟೆ ಧರಿಸಿ ಅನುಶ್ರೀ ಹಾಡೊಂದಕ್ಕೆ ಸ್ಟೆಪ್ಸ್ ಹಾಕಿದ್ದಾರೆ. ಇದನ್ನು ನೋಡಿದ ಕನ್ನಡಿಗರು ಫುಲ್ ಫಿದಾ ಆಗಿದ್ದಾರೆ. ಅನುಶ್ರೀ ಅವರ ಈ ಚಿಂದಿ ಡ್ಯಾನ್ಸ್ ನೀವು ಇಲ್ಲಿ ನೋಡಬಹುದು.