ಆಂಕರ್ ಅನುಶ್ರೀ ಕರ್ನಾಟಕದಲ್ಲಿ ಬಹಳ ಬೇಡಿಕೆ ಇರುವ ನಿರೂಪಕಿ, ಸದ್ಯಕ್ಕೆ ಕನ್ನಡದಲ್ಲಿ ಅಕುಲ್ ಬಾಲಾಜಿ ಅವರನ್ನು ಬಿಟ್ಟರೆ ಅನುಶ್ರೀ ಅವರೇ ದೊಡ್ಡ ಮಟ್ಟದ ನಿರೂಪಕಿ ಎನ್ನಬಹುದು. ಅದರಲ್ಲೂ ಮಹಿಳಾ ನಿರೂಪಕಿಯರ ಲಿಸ್ಟಿನಲ್ಲಿ ಅನುಶ್ರೀ ಅವರು ಮೊದಲನೇ ಸ್ಥಾನದಲ್ಲಿದ್ದಾರೆ. ತಾವೊಬ್ಬ ಸಿನಿಮಾ ನಟಿ ಆಗಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿಗೆ ಬಂದ ಇವರು ಮೂಲತಃ ಮಂಗಳೂರಿನವರು. ಅಲ್ಲೇ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿ ಖಾಸಗಿ ವಾಹಿನಿ ಒಂದರಲ್ಲಿ ವಿಜೆ ಆಗಿ ಕೆಲಸ ಮಾಡುತ್ತಿದ್ದರು.
ನಂತರ ಗಾಂಧಿನಗರದಲ್ಲಿ ನೆಲೆ ಕಾಣಲು ಬಂದ ಇವರಿಗೆ ಅಭಿನಯಕ್ಕಿಂತ ಆಂಕರಿಂಗ್ ಕೈಹಿಡಿಯಿತು ಎನ್ನಬಹುದು. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಒಂದನ್ನು ನಿರೂಪಣೆ ಮಾಡಿದ ನಂತರ ಈಟಿವಿ ವಾಹಿನಿಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು ಎನ್ನುವ ಕಾರ್ಯಕ್ರಮ ನಿರೂಪಣೆ ಮಾಡುವ ಅವಕಾಶ ಇವರ ಪಾಲಿಗೆ ದೊರೆಯಿತು. ಅಂದಿನಿಂದ ಇವರ ಅದೃಷ್ಟವೇ ಬದಲಾಯಿತು ಎನ್ನಬಹುದು.
ಇದಾದ ಮೇಲೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಲಿಟಲ್ ಚಾಂಪ್ಸ್ ಇವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಇದುವರೆಗೆ ಸರಿಗಮಪ ಅಷ್ಟೂ ಆವೃತ್ತಿಗಳನ್ನು ಕೂಡ ಯಶಸ್ವಿಯಾಗಿ ನಿರೂಪಣೆ ಮಾಡಿದ ಖ್ಯಾತಿ ಅನುಶ್ರೀ ಅವರಿಗೆ ಸಲ್ಲುತ್ತದೆ. ಅದಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಯಾವುದೇ ಇವೆಂಟ್ಗಳು ಮತ್ತು ಡ್ಯಾನ್ಸಿಂಗ್ ರಿಯಾಲಿಟಿ ಶೋ ಗಳಾಗಲಿ ಅನುಶ್ರೀ ಅವರ ಆಂಕರಿಂಗ್ ಇದ್ದರೆ ಅದಕ್ಕೆ ಮತ್ತಷ್ಟು ಮೆರಗು ಬರುತ್ತದೆ.
ಸಿನಿಮಾರಂಗಕ್ಕೆ ಸಂಬಂಧಪಟ್ಟ ಆಡಿಯೋ ಲಾಂಚ್, ಟೈಟಲ್ ಲಾಂಚ್ ಮುಂತಾದ ಕಾರ್ಯಕ್ರಮಗಳ ಜೊತೆಗೆ ರಾಜಕೀಯ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಡುವ ಅನುಶ್ರೀ ಅವರು ತಮ್ಮದೇ ಆದ ಖಾಸಗಿ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು ಅಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಆಂಕರಿಂಗ್ ಜೊತೆಗೆ ಅನುಶ್ರೀ ಅವರಿಗೆ ಸಿನಿಮಾದಲ್ಲಿ ಅಭಿನಯ ಮಾಡಬೇಕು ಎನ್ನುವ ಆಸೆ ಕೂಡ ಇದೆ.
ಬೆಂಕಿ ಪಟ್ಟಣ ಎನ್ನುವ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿರುವ ಇವರು ಈ ಸಿನಿಮಾದ ಅಭಿನಯಕ್ಕಾಗಿ NAK ಇಂದ ಬೆಸ್ಟ್ ಡೆಬ್ಯು ಆಕ್ಟರ್ ಅವಾರ್ಡ್ ಕೂಡ ಪಡೆದರು. ಇದರೊಂದಿಗೆ ರಿಂಗ್ ಮಾಸ್ಟರ್ ಎನ್ನುವ ಸಿನಿಮಾದಲ್ಲೂ ಕೂಡ ಇವರು ಅಭಿನಯ ಮಾಡಿದ್ದಾರೆ. ಹಾಗೆಯೇ ಇವರು ಪ್ರಜ್ವಲ್ ದೇವರಾಜ್ ಅವರ ಅಭಿನಯದ ಮಾದ ಮತ್ತು ಮಾನಸಿ ಸಿನಿಮಾದಲ್ಲಿ ಟೈಟಲ್ ಟ್ರ್ಯಾಕಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಸಿನಿಮಾಕ್ಕಾಗಿ ಇವರು ಕರ್ನಾಟಕ ಸ್ಟೇಟ್ ಅವಾರ್ಡ್ ಕೂಡ ಪಡೆದಿದ್ದಾರೆ.
ಮೂಲಗಳ ಪ್ರಕಾರ ಅನುಶ್ರೀ ಅವರು ಒಂದು ದಿನದ ಸಂಚಿಕೆಗೆ 20 ಲಕ್ಷ ರೂಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ನಿಜವಾಗಿಯೂ ಕನ್ನಡದ ಒಂದು ಹೆಣ್ಣು ಮಗಳು ಈ ಮಟ್ಟದ ಸಾಧನೆ ಮಾಡಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರವೇ. ಆದರೆ ಕಳೆದ ವರ್ಷ ಅನುಶ್ರೀ ಅವರ ಬಗ್ಗೆ ಮಾಧ್ಯಮಗಳಲ್ಲಿ ಡ್ರ’-ಗ್ಸ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸುದ್ದಿಗಳು ಪ್ರಸಾರವಾಗಿದ್ದವು.
ಅಲ್ಲದೆ ಈ ವಿಷಯಕ್ಕಾಗಿ ಅವರು ಪೊಲೀಸ್ ವಿಚಾರಣೆ ಕೂಡ ಎದುರಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಅವರ ಹಾಟ್ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತಿವೆ, ಅದರ ಕ್ಲಿಪ್ಪಿಂಗ್ ಗಳನ್ನು ನೋಡಿದ ಅವರ ಅಭಿಮಾನಿಗಳು ಬೆರಗಾಗಿ ಹೋಗಿದ್ದಾರೆ. ಆದರೆ ಇದು ಅವರು ಅಭಿನಯಿಸಿದ್ದ ರಿಂಗ್ ಮಾಸ್ಟರ್ ಸಿನಿಮಾದ ಹಾಡಿಗಾಗಿ ಚಿತ್ರೀಕರಿಸಲಾದ ವಿಡಿಯೋ ಆಗಿದೆ ಎನ್ನುವುದು ನಂತರ ತಿಳಿದು ಬಂದಿದೆ.
ಆ ವಿಡಿಯೊ ತುಣುಕು ಹಾಗೂ ಓರಿಜಿನಲ್ ಹಾಡಿನ ವಿಡಿಯೊ ಎರಡೂ ಕೆಳಗಿವೆ ನೋಡಿ…