
ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಶೀಫ್ರದಲ್ಲೇ ಮದುವೆಯಾಗಲಿದ್ದು, ಶೀಘ್ರದಲ್ಲೇ ಅವರು ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಯೊಂದು ಕೆಲ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿತ್ತು, ಈ ನಡುವೆ ಈ ಬಗ್ಗೆ ಇದೀಗ ಸ್ವತಃ ಅನುಶ್ರೀ ಈ ಬಗ್ಗೆ ಮೌನ ಮುರಿದು ಉತ್ತರ ನೀಡಿದ್ದಾರೆ.
ಮದುವೆ ಎನ್ನುವುದು ನನ್ನ ಸ್ವಂತ ನಿರ್ಧಾರ. ನನ್ನ ವಿವಾಹವನ್ನು ಗುಟ್ಟಾಗಿಡುವ ಅವಶ್ಯಕತೆ ಇಲ್ಲ. ನಾನೇದಾರೂ ಮದುವೆಯಾದರೆ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ. ನನ್ನ ಮದುವೆ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಅವರು ಪ್ರತಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದಲ್ಲದೇ ನನಗೆ ಇಲ್ಲದ ಮದುವೆ ಅವಸರ ಬೇರೆಯವರಿಗೆ ಏಕೆ ಇದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದರು.
ಯಾವುದನ್ನು ಗುಟ್ಟಾಗಿ ಮಾಡುವುದಿಲ್ಲ. ಹೀಗಾಗಿ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಅಂಥ ಅವರು ಮನವಿ ಮಾಡಿಕೊಂಡಿದ್ದಾರೆ.
Comments are closed.