
Anchor Anushree: ನಟ ಪುನೀತ್ ರಾಜಕುಮಾರ್ (Puneeth Rajakumar) ಕನ್ನಡ ಚಿತ್ರರಂಗದ ಮತ್ತು ದೇಶದ ಚಿತ್ರರಂಗ ಕಂಡ ಟಾಪ್ ನಟ. ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ನಟ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದ ಟಾಪ್ ನಟರಲ್ಲಿ ಒಬ್ಬರು ಅನ್ನುವ ಸ್ಥಾನವನ್ನ ಪಡೆದುಕೊಂಡರು.
ಬರಿ ಚಿತ್ರಗಳಲ್ಲಿ ಹೀರೋ ಆಗಿರದ ನಟ ಪುನೀತ್ ರಾಜಕುಮಾರ್ ಅವರು ನಿಜ ಜೀವನದಲ್ಲಿ ತಾವು ಮಾಡಿದ ಸಮಾಜಮುಖಿ ಕೆಲಸಗಳ ಮೂಲಕ ರಿಯಲ್ ಹೀರೋ ಅನಿಸಿಕೊಂಡರು. ಹಲವು ಅನಾಥ ಆಶ್ರಮ, ಹಲವು ವೃದ್ದಾಶ್ರಮ, ಹಲವು ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸ ಮತ್ತು ಹಲವು ಗೋಶಾಲೆಗಳನ್ನ ನೋಡಿಕೊಳ್ಳುತ್ತಿದ್ದ ನಟ ಪುನೀತ್ ರಾಜಕುಮಾರ್ ಅವರು ಇಂದು ನಮ್ಮಜೊತೆ ಇಲ್ಲ ಅನ್ನುವುದು ಬಹಳ ನೋವಿನ ಸಂಗತಿ ಆಗಿದೆ.
ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನ ಅಗಲಿ ಒಂದು ವರ್ಷ ಕಳೆಯುತ್ತಾ ಬಂದರೂ ಕೂಡ ಅವರು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಯಾವತ್ತೂ ಜೀವಂತ.
ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು ಪುನೀತ ಪರ್ವ ಕಾರ್ಯಕ್ರಮ
ಹೌದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ ಪರ್ವ (Punitha Parva) ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದ್ದು ಹಲವು ನಾಯಕ ನಟ ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಜಕುಮಾರ್ ಕುಟುಂಬ ಸೇರಿದಂತೆ ಕನ್ನಡ ಚಿತ್ರರಂಗದ ಮತ್ತು ಬೇರೆಬೇರೆ ಚಿತ್ರರಂಗದ ಟಾಪ್ ನಟ ನಟಿಯರು ಮತ್ತು ಹಲವು ರಾಜಕೀಯ ನಟ ನಟಿಯರು ಸೇರಿದಂತೆ ಚಿತ್ರರಂಗದ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮ ನಿರೂಪಣೆ ಮಾಡಿದ ನಿರೂಪಕಿ ಅನುಶ್ರೀ
ಕನ್ನಡ ಚಿತ್ರರಂಗದ ಮತ್ತು ಕನ್ನಡ ಕಿರುತೆರೆಯಲ್ಲಿ ಬಹುತೇಕ ಎಲ್ಲಾ ಕಾರ್ಯಕ್ರಮವನ್ನ ನಿರೂಪಣೆ ಮಾಡುವುದು ಅಂದರೆ ಅದು ನಿರೂಪಕಿ ಅನುಶ್ರೀ (Anushree). ಬಹುತೇಕ ಎಲ್ಲಾ ಕಾರ್ಯಕ್ರಮದ ನಿರೂಪಣೆಯನ್ನ ಮಾಡಿದ ಅನುಶ್ರೀಯವರು ಈಗ ಪುನೀತ ಪರ್ವ ಕಾರ್ಯಕ್ರಮದ ನಿರೂಪಣೆಯನ್ನ ಕೂಡ ಮಾಡಿದ್ದಾರೆ.
ಅನುಶ್ರೀ ಪಕ್ಕ ಅಪ್ಪು ಫ್ಯಾನ್
ನಿರೂಪಕಿ ಅನುಶ್ರೀಯವರು ಪಕ್ಕ ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದಾರೆ. ಪುನೀತ್ ರಾಜಕುಮಾರ್ ಅವರ ಹಲವು ಆದರ್ಶಗಳನ್ನ ತಮ್ಮ ಮೈಗೂಡಿಸಿಕೊಂಡಿರುವ ಅನುಶ್ರೀಯವರು ನಟ ಪುನೀತ್ ರಾಜಕುಮಾರ್ ಅವರ ನೆನಪಿನ ಅಂಗವಾಗಿ ನಡೆದ ಪುನೀತ ಪರ್ವ ಕಾರ್ಯಕ್ರಮವನ್ನ ಅದ್ದೂರಿಯಾಗಿ ನಿರೂಪಣೆ ಮಾಡುವುದರ ಮೂಲಕ ನಡೆಸಿಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಯಿತು ಅನುಶ್ರೀ ಪಡೆದ ಸಂಭಾವನೆ
ಹೌದು ಪುನೀತ ಪರ್ವ ಕಾರ್ಯಕ್ರಮವನ್ನ ನಡೆಸಿಕೊಡಲು ನಿರೂಪಕಿ ಅನುಶ್ರೀಯವರು ಪಡೆದ ಸಂಭಾವನೆಯ ಸುದ್ದಿ ಈಗ ಯುಟ್ಯೂಬ್ ಮತ್ತು ಕೆಲವು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಟಾಪ್ ನಿರೂಪಕಿ ಅನ್ನು ಹೆಸರನ್ನ ಪಡೆದುಕೊಂಡಿರುವ ನಿರೂಪಕಿ ಅನುಶ್ರೀಯವರು ನಿರೂಪಣೆಗೆ ದೊಡ್ಡ ಮೊತ್ತದ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ.
ಸದ್ಯ ಪುನೀತ ಪರ್ವ ಕಾರ್ಯಕ್ರಮವನ್ನ ನಿರೂಪಣೆ ಮಾಡುವುದರ ಮೂಲಕ ಅನುಶ್ರೀಯವರು ನಡೆಸಿಕೊಟ್ಟಿದ್ದು ಈ ಕಾರ್ಯಕ್ರಮಕ್ಕೆ ನಿರೂಪಕಿ ಅನುಶ್ರೀಯವರು ಯಾವುದೇ ಸಂಭಾವನೆಯನ್ನ ಪಡೆದಿಕೊಂಡಿಲ್ಲ.

ಅಪ್ಪು ಅಭಿಮಾನಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟ ಅನುಶ್ರೀ
ಅನುಶ್ರೀಯವರು ಪಕ್ಕ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದು ಅವರ ಮೇಲೆ ಬಹಳ ಗೌರವ ಮತ್ತು ಪ್ರೀತಿಯನ್ನ ಇಟ್ಟುಕೊಂಡವರು ಆಗಿದ್ದಾರೆ. ಒಬ್ಬ ಅಭಿಮಾನಿಯಾಗಿ ಈ ಕಾರ್ಯಕ್ರಮವನ್ನ ಅನುಶ್ರೀಯವರು ನಡೆಸಿಕೊಟ್ಟಿದ್ದು ಅದಕ್ಕೆ ಯಾವುದೇ ಸಂಭಾವನೆಯನ್ನ ಪಡೆದುಕೊಂಡಿಲ್ಲ.
ಅನುಶ್ರೀಯವರು ಯಾವುದೇ ಸಂಭಾವನೆಯನ್ನ ಪಡೆದುಕೊಳ್ಳದೇ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅಪ್ಪು ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹಿಂದೆ ನಡೆದ ಪುನೀತ ನಮನ ಕಾರ್ಯಕ್ರಮವನ್ನ ನಿರೂಪಣೆ ಮಾಡಿದ್ದ ಅನುಶ್ರೀಯವರು ಆ ಕಾರ್ಯಕ್ರಮಕ್ಕೂ ಯಾವುದೇ ಸಂಭಾವನೆಯನ್ನ ಪಡೆದುಕೊಂಡಿಲ್ಲ.
Comments are closed.