ಸೆಲೆಬ್ರಿಟಿಗಳು ಎಂದ ಮೇಲೆ ಅವರ ಬದುಕು ಸಾರ್ವಜನಿಕವಾಗಿರುತ್ತದೆ. ಅಭಿಮಾನಿಗಳಿಗೆ ಸೆಲೆಬ್ರಿಟಿಗಳ ವೃತ್ತಿ ಜೀವನದ ಜೊತೆಗೆ ವೈಯುಕ್ತಿಕ ಬದುಕಿನ ಬಗ್ಗೆಯೂ ಕುತೂಹಲವಿರುತ್ತದೆ. ಹೌದು ಕನ್ನಡ ಕಿರುತೆರೆ ಲೋಕದಲ್ಲಿ ಖ್ಯಾತ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀಯವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಮೊದಲಿನಿಂದಲೂ ಅಭಿಮಾನಿಗಳು ಅನುಶ್ರೀಯವರ ಬಳಿ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಕೇಳುತ್ತಲೇ ಇದ್ದಾರೆ.
ಆದರೆ ಇದೀಗ ನಿರೂಪಕಿ ಅನುಶ್ರೀಯವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.ಮದುವೆಯ ಕುರಿತು ನಿರೂಪಕಿಯವರೇ ಮಾತನಾಡಿದ್ದಾರೆ. ಕನ್ನಡದಲ್ಲಿ ನಂಬರ್ ಒನ್ ನಿರೂಪಕಿಯಾಗಿ ಮಿಂಚುತ್ತಿರುವ ಅನುಶ್ರೀಯವರು ಎಲ್ಲರಿಗೂ ಪರಿಚಿತರಾಗಿದ್ದಾರೆ. ಹೌದು ಮಾತಿನ ಮಲ್ಲಿ ಎಂದು ಕರೆಸಿಕೊಂಡು, ಪಟ ಪಟ ಮಾತನಾಡುತ್ತಾ, ತನ್ನ ಸುತ್ತಲೂ ಇರುವ ಜನರನ್ನು ನಗಿಸುತ್ತಿರುತ್ತಾರೆ. ಮಧ್ಯಮ ವರ್ಗದಲ್ಲಿ ಹುಟ್ಟಿಬೆಳೆದ ಅನುಶ್ರೀ ಯವರಿಗೆ ಸಣ್ಣ ವಯಸ್ಸಿನಲ್ಲಿ ತಂದೆಯಿಂದ ದೂರಾದ ಬಳಿಕ, ತಮ್ಮ ಹಾಗೂ ತಾಯಿ ಜವಾಬ್ದಾರಿಯೂ ತನ್ನ ಹೆಗಲ ಮೇಲಿತ್ತು.
ಮಂಗಳೂರಿನವರಾದ ಅನುಶ್ರೀ ತಮ್ಮ ಜವಾಬ್ದಾರಿಯನ್ನು ಹೊತ್ತು ಕೊಂಡು ಅದರ ಜೊತೆಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಮಾಯನಗರಿ ಬೆಂಗಳೂರಿಗೆ ಬಂದರು. ಅನುಶ್ರೀ ಹೇಳಿಕೊಳ್ಳುವಷ್ಟು ಓದಿಲ್ಲ, ಆದರೆ ಬದುಕು ಕಲಿಸಿದ ಪಾಠ ಮಾತ್ರ ಬದುಕಿನ ಸತ್ಯವನ್ನು ಅರ್ಥ ಮಾಡಿಸಿದೆ. ಅನುಶ್ರೀ ತಂದೆ ಸಂಪತ್, ತಾಯಿ ಶಶಿಕಲಾ, ತಮ್ಮ ಅಭಿಜಿತ್. ಚಿಕ್ಕ ವಯಸ್ಸಿನಲ್ಲಿ ತಂದೆಯೂ ಇವರನ್ನು ಬಿಟ್ಟು ಹೋಗಿದ್ದರು. ಹೀಗಾಗಿ ಅಕ್ಕನಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕಿತ್ತು. ಹೀಗಾಗಿ ಓದು ನಿಲ್ಲಿಸಿ ತಮ್ಮ ಹಾಗೂ ಅಮ್ಮನನ್ನು ನೋಡಿಕೊಳ್ಳಲು ಮುಂದಾದರು.
ಇನ್ನು ಶಾಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಆ್ಯಂಕರಿಂಗ್ ಮಾಡಿದ್ದರು. ಹೀಗಾಗಿ ನಿರೂಪಣೆಯಲ್ಲಿಯೇ ಬದುಕು ಕಟ್ಟಿಕೊಳ್ಳಲು ಮುಂದಾದರು. ಮುಖ ಮಾಡಿದರು. ಹೀಗಿರುವಾಗ ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ಅಂತಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ಅನಂತರದ ದಿನಗಳಲ್ಲಿ ಒಂದಲ್ಲ ಒಂದು ಅವಕಾಶಗಳು ಅನುಶ್ರೀ ಪಾಲಿಗೆ ಬಂತು.
ಬೆಂಗಳೂರಿಗೆ ಬಂದ ಅನುಶ್ರೀ,ಈಟಿವಿಯಲ್ಲಿ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಎಂಬ ಕಾರ್ಯಕ್ರಮವು ಇವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಿತು. ಹೀಗೆ ಶುರುವಾದ ನಿರೂಪಣೆ ಜರ್ನಿಯಲ್ಲಿ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಹೀಗೆ ಅನೇಕ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಿರೂಪಣೆ ಮಾತ್ರವಲ್ಲದೇ ಸಿನಿ ಪರದೆಯಲ್ಲೂ ಅನುಶ್ರೀ ಕಾಣಿಸಿಕೊಂಡಿದ್ದರು. ಬೆಂಕಿ ಪೊಟ್ಟಣ, ಮುರಳಿ ಮೀಡ್ಸ್ ಮೀರಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆದರೆ ಇದೀಗ ಮದುವೆಯ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಅನುಶ್ರೀ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ.1 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಜೋಡಿಗಳ ಪ್ರೀತಿ ಬಾಂಧವ್ಯವನ್ನು ಕಂಡು ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದಾರೆ.
ಈ ಸುಂದರ ಜೋಡಿಗಳನ್ನು ನೋಡಿದ ಅನುಶ್ರೀ ತನಗೂ ಮದುವೆಯಾಗೋ ಆಸೆಯಾಗಿದೆ ಎಂದು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು, ಅನುಶ್ರೀಯವರು ಮದುವೆಯ ಬಗ್ಗೆ ಸುಳಿವು ಕೊಟ್ರಾ ಎನ್ನುವ ಅನುಮಾನ ಕೂಡ ಮೂಡಿದೆ. ಹಾಗಾದರೆ ಅನುಶ್ರೀಯವರು ಮದುವೆಯಾಗುವ ಹುಡುಗ ಯಾರು, ಈಗಾಗಲೇ ಹುಡುಗನನ್ನು ನೋಡಿ ಇಟ್ಟಿದ್ದಾರಾ, ಇಲ್ಲಾಂದ್ರೆ ಕಾರ್ಯಕ್ರಮದಲ್ಲಿ ಹೀಗೆನೇ ಮದುವೆಯ ಬಗ್ಗೆ ಮಾತಾನಾಡಿದ್ರ, ಹೀಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದೆ. ಮದುವೆಯ ಬಗ್ಗೆ ಮುಂಬರುವ ದಿನಗಳಲ್ಲಿ ಏನು ಅಪ್ಡೇಟ್ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.