ಯುವ ನಿರ್ದೇಶಕ, ಯುವ ಕಲಾವಿದರು ಸೇರಿ ಮಾಡಿರುವಂತಹ ಸಿನಿಮಾ ಕಂಬ್ಳಿ ಹುಳ ಇದು ಕನ್ನಡದ ಒಂದು ಹೊಸ ಪ್ರಯತ್ನ ಹೌದು. ಹೆಚ್ಚಾಗಿ ಅನುಭವಿ ನಿರ್ದೇಶಕರೇ ಸಿನಿಮಾಗಳನ್ನ ಮಾಡುತ್ತಾರೆ ಆದರೆ ಹೊಸಬರು ದೊಡ್ಡ ತಂಡ ಕಟ್ಟಿಕೊಂಡು ಇಂತಹ ಸಿನಿಮಾ ಮಾಡಿರುವುದು ನಿಜಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸತನವನ್ನು ತಂದಿದೆ. ಕಂಬ್ಳಿ ಹುಳ ಸಿನಿಮಾ ನೋಡಿ ಸಾಕಷ್ಟು ತಾರೆಯರು ಈಗಾಗಲೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಹೊಸಬರ ಪ್ರಯತ್ನ ವಾಗಿರುವ ಕಂಬ್ಳಿ ಹುಳ ಸಿನಿಮಾವನ್ನು ನೋಡಿ ತಮ್ಮ ಅನಿಸಿಕೆಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಕಂಬ್ಳಿ ಹುಳ ಸಿನಿಮಾ ವನ್ನ ನೋಡಿ ಅನುಶ್ರೀ ತಮ್ಮ ಬಾಲ್ಯದ ನೆನಪು ಮತ್ತೆ ಮರುಕಳಿಸಿತು ಎಂದು ಹೇಳಿದ್ದಾರೆ
ಒಂದು ಸಿನಿಮಾ ನೋಡಿ ಅದರಲ್ಲಿ ಇರುವ ಆ ಇನೋಸೆನ್ಸ್ ನಮ್ಮನ್ನ ನಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತೆ ಈ ಸಿನಿಮಾದಲ್ಲಿ ಅಂತಹ ಸಾಕಷ್ಟು ಸೀನ್ ಗಳು ಇವೆ. ನಾವು ಬಾಲ್ಯದಲ್ಲಿ ಓಡಾಡುತ್ತಿದ್ದ ಜಾಗ ನಮ್ಮ ಹಿಂದೆ ಸುತ್ತುತ್ತಿದ್ದ ಹುಡುಗರು ಮೊದಲ ಪ್ರೀತಿ ಇವೆಲ್ಲವನ್ನ ನೆನಪಿಸುತ್ತದೆ ಸಿನಿಮಾ. ನಾವು ಊರಲ್ಲಿ ಇರುವಾಗ ಒಳ್ಳೆಯ ಮಕ್ಕಳಾಗಿದ್ದು ನಗರಕ್ಕೆ ಬಂದು ಕಳ್ಳ ನನ್ನ ಮಕ್ಕಳಾದೇವು ಎಂದು ತಮಾಷೆ ಮಾಡುತ್ತಾ ಮಾತನಾಡಿದ ಅನುಶ್ರೀ ಅವರು ಸಾಮಾನ್ಯವಾಗಿ ನಾನು ಆಂಕರಿಂಗ್ ಮಾಡುವಾಗ ನೋಡಿದ್ದೇನೆ.
ನಮ್ಮ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಬದಿಯ ಮಕ್ಕಳು ಬರುತ್ತಾರೆ ಅವರಲ್ಲಿ ಇರುವ ಇನೋಸೆನ್ಸ್ ಬೇರೆ ಯಾರಲ್ಲೂ ಇರೋದಿಲ್ಲ ಈ ಸಿನಿಮಾದಲ್ಲಿಯೂ ಕೂಡ ಅಂತಹ ಪಾತ್ರಗಳು ಇವೆ. ಈ ಸಿನಿಮಾ ಒಂದು ಉತ್ತಮ ಪ್ರಯತ್ನ. ಕಂಬ್ಳಿ ಹುಳ ಸಿನಿಮಾ ಮಾಡಿದವರು ಕೂಡ ನಮ್ಮ ಬಾಸ್ ಅಂದ್ರೆ ಅಪ್ಪು ಫ್ಯಾನ್ಸ್. ಹಾಗಾಗಿ ನಾನು ಎಲ್ಲಾ ಅಪ್ಪು ಫ್ಯಾನ್ಸ್ ಗಳಲ್ಲಿ ಕೇಳಿಕೊಳ್ಳುತ್ತೇನೆ. ನೀವು ಈ ಸಿನಿಮಾ ಮಿಸ್ ಮಾಡಿದ್ರೆ ಒಂದು ಒಳ್ಳೆಯ ಸಿನಿಮಾವನ್ನ ಮಿಸ್ ಮಾಡಿದ ಹಾಗೆ. ಅಪ್ಪು ಅವರು ಯಾವಾಗಲೂ ಹೊಸ ಟೀಮ್ ಹೊಸ ಕಲಾವಿದರನ್ನು ಪ್ರೋತ್ಸಾಹಿಸುವುದಕ್ಕೆ ಮುಂದಾಗುತ್ತಿದ್ದರು ಹಾಗಾಗಿ ಅವರು ಇದ್ರೆ ಈ ಕಂಬ್ಳಿ ಹುಳ ತಂಡವನ್ನು ಪ್ರೋತ್ಸಾಹಿಸುತ್ತಿದ್ದರು.
ಹಾಗಾಗಿ ಅಪ್ಪು ಅಭಿಮಾನಿಗಳು ಎಲ್ಲರೂ ಅಪ್ಪು ಆಸೆಯಂತೆ ಹೊಸಬರನ ಬೆಳೆಸಬೇಕು. ಅದಕ್ಕಾಗಿ ನೀವು ತಪ್ಪದೆ ಈ ಸಿನಿಮಾ ಎಷ್ಟು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತೋ, ಎಲ್ಲದರಲ್ಲಿಯೂ ಹೋಗಿ ನೋಡಿ ಹೊಸ ತಂಡವನ್ನು ಪ್ರೋತ್ಸಾಹಿಸಬೇಕು ಅಂತ ಕೇಳಿಕೊಳ್ಳುತ್ತೇನೆ. ಈ ರೀತಿಯಾಗಿ ಆಂಕರ್ ಅನುಶ್ರೀ ಕಂಬಳಿ ಹುಳ ತಂಡವನ್ನು ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಸಿನಿಮಾ ನೋಡಿ ಮೆಚ್ಚಿಕೊಂಡು ಇಂತಹ ಸಿನಿಮಾ ಇನ್ನಷ್ಟು ಕನ್ನಡದಲ್ಲಿ ಬರಬೇಕು ಹೊಸಬರನ ನಾವು ಪ್ರೋತ್ಸಾಹಿಸಬೇಕು ಎಂದಿದ್ದಾರೆ. ಕಂಬ್ಳಿ ಹುಳ ಸಿನಿಮಾ ನವಿರಾದ ಪ್ರೇಮ ಕಥೆಯನ್ನು ಹೊಂದಿದೆ. ತೀರ್ಥಹಳ್ಳಿ ಕೊಪ್ಪ ಸಕಲೇಶಪುರ ಮೊದಲಾದಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ನಾಯಕ ಅಂಜನ್ ನಾಗೇಂದ್ರ ನಾಯಕಿ ಅಶ್ವಿತಾ ಹೆಗ್ಡೆ. ಇವರಿಗೆ ಕಿರು ಚಿತ್ರಗಳನ್ನ ಮಾಡಿರುವ ಕೊಪ್ಪ ತಾಲೂಕಿನ ನವನ್ ಶ್ರೀನಿವಾಸ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಒಟ್ಟಾರೆಯಾಗಿ ಹೊಸಬರನ್ನು ಹೊಂದಿರುವ ಕಂಬಳಿ ಹುಳ ಸಿನಿಮಾಕ್ಕೆ ಉತ್ತಮ ಪ್ರಶಂಸೆ ಸಿಕ್ಕಿದೆ.