ನನಗೂ ಮದ್ವೆ ಆಗ್ಬೇಕು ಅಂತ ಅನಿಸ್ತಿದೆ ಎಂದ ಆ್ಯಂಕರ್ ಅನುಶ್ರೀ, ಹುಡುಗ ಸಿಕ್ಕಿದ್ನಾ ಅಂತ ಕೇಳಿದ ಫ್ಯಾನ್ಸ್ ಆ್ಯಂಕರ್ ಅನುಶ್ರೀ (Anchor Anushree) ಅಂದರೆ ಬಹುತೇಕರಿಗೆ ಗೊತ್ತು. ಸಿನಿಮಾ (Film), ನಟನೆಗಿಂತ (Acting) ಮಾತಿನ ಕೌಶಲ್ಯದ ಮೂಲಕ ತೆರೆ ಮೇಲೆ ರಂಜಿಸುವ ಕನ್ನಡದ ಫೇಮಸ್ ಆ್ಯಂಕರ್ ಆಗಿ ಅನುಶ್ರೀ ಗುರುತಿಸಿಕೊಂಡಿದ್ದಾರೆ. ಸದ್ಯ ಅನುಶ್ರೀ ಒಂದು ವಿಚಾರದಲ್ಲಿ ಸುದ್ದಿಯಲ್ಲಿದ್ದು, ಅದು ಮದುವೆಯ ವಿಚಾರ. ಏನು ಅಂತೀರಾ? ಮುಂದೆ ಓದಿ
ಕರಾವಳಿ ಮೂಲದ ಅನುಶ್ರೀ ಸದ್ಯ ಕರ್ನಾಟಕದ ಪ್ರತಿಭಾವಂತ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ ಖಾಸಗಿ ಕಾರ್ಯಕ್ರಮದ ಜೊತೆಗೆ ಜನಪ್ರಿಯ ಟಿವಿ ಶೋಗಳನ್ನು ಮಾಡುತ್ತಾ ಬಂದಿದ್ದಾರೆ.ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಅನುಶ್ರೀ , ಎಲ್ಲೇ ಹೋದರು ಅವರನ್ನು ಎಲ್ಲರೂ ಕೇಳುವುದು ನಿಮ್ಮ ಮದುವೆ ಯಾವಾಗ ಅಂತ. ಅವರು ಲೈವ್ ಬರಲಿ, ಕಾರ್ಯಕ್ರಮದಲ್ಲಿರಲಿ ಮದುವೆಯ ಬಗ್ಗೆ ಪ್ರಶ್ನೆ ಮಾಡುತ್ತಾರೆ.ಇದೀಗ ಅವರ ಪ್ರಶ್ನೆಗಳಿಗೆ ಅನುಶ್ರೀ ಉತ್ತರ ಕೊಟ್ಟಿದ್ದು,
ನನಗೂ ಮದುವೆಯಾಗಬೇಕು ಎಂಬ ಆಸೆ ಇದೆ ಎಂದಿದ್ದಾರೆ. ಹೌದು, ಸ್ವತಃ ಅನುಶ್ರೀ ಅವರೇ ಈ ಮಾತನ್ನು ಹೇಳಿದ್ದು, ತಾನು ಕೂಡ ಮದುವೆಯಾಗಬೇಕು ಅಂತಾ ಆಸೆಯಾಗುತ್ತದೆ ಎನ್ನುವ ಮೂಲಕ ಸುದ್ದಿಯಲ್ಲಿದ್ದಾರೆ.ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜೋಡಿಗಳನ್ನು ಹಾಗೂ ಅವರ ನಡುವೆ ಇರುವ ಪ್ರೀತಿಯನ್ನು ನೋಡಿ ನನಗೂ ಮದುವೆಯಾಗಬೇಕು ಎಂಬ ಆಸೆಯಾಗುತ್ತಿದೆ ಎಂದಿದ್ದಾರೆ.
ಈ ಮೂಲಕ ನಾನು ರೆಡಿ ಎಂಬ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.ಅನುಶ್ರೀ ಅವರ ಈ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಈಗಾಗಲೇ ಅನುಶ್ರೀ ಹುಡುಗನನ್ನ ಸೆಲೆಕ್ಟ್ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಅವರನ್ನು ಕಾಡುತ್ತಿದೆ. ಹಾಗೇನಾದರೂ ಇದ್ದರೆ ಆ ಹುಡುಗ ಯಾರು ಎಂಬ ಕುತೂಹಲ ಕೂಡ ಅವರಲ್ಲಿದೆ.