ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಅನುಪಮಾ ಗೌಡ, ಈಗ ನಿರೂಪಕಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಕೆಲ ರಿಯಾಲಿಟಿ ಶೋ ಗಳನ್ನು ಅನುಪಮಾ ಅವರೇ ನಿರೂಪಣೆ ಮಾಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಅನುಪಮಾ ಅವರು, ನಂತರ ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ. ಮಜಾಭಾರತ ಕಾಮಿಡಿ ಶೋ ನಲ್ಲಿ ನಿರೂಪಣೆ ಶುರು ಮಾಡಿದ ಅನುಪಮಾ ಗೌಡ, ಈಗ ಆಂಕರಿಂಗ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ.
ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ರಾಜಾ-ರಾಣಿ ರಿಯಾಲಿಟಿ ಶೋ ಅನ್ನು ಕೂಡ ಅನುಪಮಾ ಗೌಡ ಅವರೇ ನಡೆಸಿಕೊಟ್ಟರು. ಮೊದ ಮೊದಲು ಅನುಪಮಾ ಗೌಡ ಅವರ ನಿರೂಪಣೆಯನ್ನು ಒಪ್ಪದ ಜನ ಈಗ ಮೆಚ್ಚಿಕೊಂಡಿದ್ದಾರೆ. ನಂತರ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೂ ಅನುಪಮಾ ಅವರೇ ಆಂಕರಿಂಗ್ ಮಾಡಿದರು. ಆದರೆ ಈಗ ನಿರೂಪಣೆಯಿಂದ ಅನುಪಮಾ ಗೌಡ ಅವರು ಬ್ರೇಕ್ ಪಡೆದುಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಪ್ರವಾಸಗಳನ್ನು ಮಾಡುತ್ತಿದ್ದಾರೆ.
ಗೋವಾ ಟ್ರಿಪ್ ನಿಂದ ಶುರು ಮಾಡಿದ ಅನುಪಮಾ ಗೌಡ ಅವರು ಈಗ ಥೈಲ್ಯಾಂಡ್ ನಲ್ಲಿ ಲ್ಯಾಂಡ್ ಆಗಿದ್ದಾರೆ. ಅದೂ ಕೂಡ ಸೋಲೋ ಟ್ರಿಪ್ ಹೋಗಿರುವ ಅನುಪಮಾ ಗೌಡ ಅವರು ಎಂಜಾಯ್ ಮೂಡ್ ನಲ್ಲಿದ್ದಲ್ಲಿ. ಥೈಲ್ಯಾಮಡ್ ನಲ್ಲಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋವನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಈ ವೀಡಿಯೋವನ್ನು ನೋಡಿ ಖುಷಿ ಪಟ್ಟಿದ್ದಾರೆ.
View this post on Instagram