ಸಣ್ಣ ವಯಸ್ಸಿನಲ್ಲೇ ಕೋಟ್ಯಾಂತರ ಕನ್ನಡಿಗರ ಮನಸ್ಸು ಗೆದ್ದಿರುವ ಈ ಕೆಚ್ಚೆದೆಯ ಅನು ಅಕ್ಕ ಯಾರು ಗೊತ್ತಾ? ಇಂದಿನ ಹೆಣ್ಣುಮಕ್ಕಳಿಗೆ ಈಕೆ ನಿಜವಾದ ಮಾದರಿ ನೋಡಿ!!

Entertainment/ಮನರಂಜನೆ

ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಅತಿ ಸಣ್ಣ ವಯಸ್ಸಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಹಾತಾಯಿ ಈಕೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅನು ಅವರನ್ನ ಅಕ್ಕ ಅಂತ ಯಾಕೆ ಎಲ್ಲರೂ ಕರೆಯುತ್ತಾರೆ ಎನ್ನುವ ಅನುಮಾನ ಹಲವರಿಗೆ ಇರಬಹುದು. ಅವರು ಮಾಡಿರುವ ಸಮಾಜಮುಖಿ ಕೆಲಸಗಳಿಂದಾಗಿ ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿದ್ದಾರೆ ಹಾಗಾಗಿ ಅವರನ್ನು ಅಕ್ಕ ಅಂತ ಸಂಭೋದಿಸಲಾಗುತ್ತೆ. ಇತರರಿಗೆ ಮಾದರಿಯಾಗಿರುವ ಅಕ್ಕ ಅನು ನಿಜಕ್ಕೂ ಕೆಚ್ಚೆದೆಯ ಹೆಣ್ಣೇ ಸರಿ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚಿಕ್ಕಬೆರಗಿ ಗ್ರಾಮದ ಅನು ಅವರು ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇಂದು ಕನ್ನಡ ಶಾಲೆ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಅಲ್ಲಿ ಸ್ವಚ್ಛತೆಗೆ ಬೆಲೆ ಕೊಡೋದಿಲ್ಲ ಕನ್ನಡ ಶಾಲೆಯಲ್ಲಿ ಎಲ್ಲಾ ಸೌಲಭ್ಯ ಇರೋದಿಲ್ಲ ಎನ್ನುವ ಕಾರಣಕ್ಕೆ ಕನ್ನಡ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವುದಕ್ಕೆ ಪಾಲಕರು ಹಿಂದೇಟು ಹಾಕುತ್ತಾರೆ.

ಎಷ್ಟೇ ಕಷ್ಟವಾದರೂ ಸರಿ ಸಾಲ ಸೋಲ ಮಾಡಿ ಆದ್ರು ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಇದೇ ಪದ್ಧತಿ ಮುಂದುವರೆದರೆ ಕನ್ನಡ ಶಾಲೆ ಕರ್ನಾಟಕದಲ್ಲಿ ಕಾಣಲು ಸಾಧ್ಯವೇ ಇಲ್ಲ. ಈಗಾಗಲೇ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚಿವೆ. ಹಾಗಾಗಿ ಇಂತಹ ಶಾಲೆಗಳನ್ನ ಉಳಿಸುವುದಕ್ಕಾಗಿ ಅಕ್ಕ ಅನು ಟೊಂಕಕಟ್ಟಿ ನಿಂತಿದ್ದಾರೆ. ಈವರಿಗೆ 100ಕ್ಕೂ ಹೆಚ್ಚಿನ ಶಾಲೆಗಳಿಗೆ ಸುಣ್ಣ ಬಣ್ಣ ಹೊಡೆದು ಅಲ್ಲಿಗೆ ಬೇಕಾಗುವ ಕೆಲವು ಸೌಲಭ್ಯಗಳನ್ನು ಕೂಡ ಮಾಡಿಕೊಟ್ಟಿದ್ದಾರೆ ಅಕ್ಕ ಅನು.




ತಮ್ಮದೇ ಆದ 12 ಜನರ ತಂಡವನ್ನು ಕಟ್ಟಿಕೊಂಡು ಊರೂರು ಅಲೆಯುತ್ತಾ, ಅಲ್ಲಿನ ಶಾಲೆಗಳ ಜೀರ್ಣೋದ್ಧಾರ ಮಾಡುವುದು ಮಾತ್ರವಲ್ಲದೆ, ಹಳ್ಳಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯವನ್ನು ಕೂಡ ಅನು ಮಾಡುತ್ತಿದ್ದಾರೆ. ಸ್ವಚ್ಛತೆಯ ಅಭಿಯಾನವನ್ನು ಆರಂಭಿಸಿರುವ ಅಕ್ಕ ಅನು, ಹಳ್ಳಿಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಕೊಡುವುದಕ್ಕೆ ಜನರಿಗೆ ತಿಳಿಸುತ್ತಾರೆ. ಅಷ್ಟೇ ಅಲ್ಲ, ಅನು ಒಬ್ಬ ಪರಿಸರ್ ಪ್ರೇಮಿಯೂ ಹೌದು.

Anu akka Fan.....s group anu akka #Anu akka Fan.....s group video RR lakki - ShareChat - Funny, Romantic, Videos, Shayari, Quotes

ಪರಿಸರ ಉಳಿಸಿ ಅಂತ ತಾವೂ ಗಿಡ ನೆಟ್ಟು ಇತರರೂ ಆ ಕೆಲಸ ಮಾಡುವಂತೆ ಪ್ರೇರಣೆ ನೀಡುತ್ತಾರೆ. ಕಾಲೇಜು ದಿನಗಳಿಂದ ಹೀಗೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಅನು ಅವರು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ರಾಗಿದ್ದಾರೆ. ಆದರೆ ಈಗಾಗಲೇ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ ಅನು. ಅನು ಹೀಗೆ ತಮ್ಮ ಇಚ್ಛೆಯಂತೆ ಕನ್ನಡ ಸರ್ಕಾರಿ ಶಾಲೆಗಳ ಉದ್ಧಾರಕ್ಕೆಂದು ಹೊರತು ನಿಂತಾಗ ಅವರನ್ನ ಅವಮಾನಿಸಿದವರೇ ಜಾಸ್ತಿ.




ಇಂಥದ್ದಕ್ಕೆಲ್ಲಾ ಹೆಣ್ಣು ಮಗಳನ್ನ ಆಚೆ ಕಳುಹಿಸಬೇಡಿ ಅಂತ ಅವರ ಮನೆಯವರಿಗೂ ಜನ ಹೇಳುತ್ತಿದ್ರು. ಆದ್ರೆ ಅನು ಅವರ ಕೆಲಸಕ್ಕೆ ಇಂಥ ಯಾವ ಕೊಂಕು ಮಾತುಗಳ ಅಡ್ಡಿಯಾಗಲೇ ಇಲ್ಲ. ಅನು ಅವರನ್ನ ಜನರು ಇನ್ನಷ್ಟು ಗುರುತಿಸಬೇಕು, ಅವರು ಕೂಡ ಬೆಳೆಯಬೇಕು ಎಂಬ ಕಾರಣಕ್ಕೆ ಅನು ಅವರು ಬಿಗ್ ಬಾಸ್ ಗೆ ಹೋಗಬೇಕು ಅನ್ನೋದು ಹಲವರ ಅಭಿಪ್ರಾಯ.

ಈ ಬಾರಿ ಬಿಗ್ ಬಾಸ್ ಕನ್ನಡ ಓಟಿಟಿ ಲ್ಲಿ ಪ್ರಸಾರವಾಗುತ್ತಿದ್ದು, ಮನೆ ಸೇರಿದ ಸ್ಪರ್ಧಿಗಳ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಹೀಗೆ ಅರ್ಹತೆ ಇಲ್ಲದೆ ಇರುವವರನ್ನ ಬಿಗ್ ಬಾಸ್ ಮನೆಗೆ ಕಳುಹಿಸಿ ಆ ಶೋದ ಮರ್ಯಾದೆ ತೆಗೆಯುವುದರ ಬದಲು, ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಅಂತವರು ಹೋದರೆ ನಿಜಕ್ಕೂ ಇತರರಿಗೂ ಮಾದರಿ ಅವರಿಗೂ ಸಹಾಯವಾಗುತ್ತೆ ಅನ್ನೋದು ಹಲವರ ಅಭಿಪ್ರಾಯ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...