ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ 5 ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆ ಈಗ ಆರಂಭವಾಗಿದೆ ಎಲೆಕ್ಷನ್ ಆಗೋದಕ್ಕಿಂತ ಮುಂಚೆ ಸಿದ್ದರಾಮಯ್ಯನವರು ರೇಷನ್ ಕಾರ್ಡ್ ಹೊಂದಿದವರಿಗೆ 10 ಕೆಜಿ ಅಕ್ಕಿ ಅಂತ ಭರವಸೆ ನೀಡಿದರು ಆದರೆ ಈಗ ಏನಾಗಿದೆ ನಾವು 10 ಕೆಜಿಯನ್ನ ಕೊಡಲ್ಲ 5 ಕೆ.ಜಿ ಅಕ್ಕಿ ಮಾತ್ರ ಕೊಡ್ತೀವಿ ಇನ್ನು ಉಳಿದ ಐದು ಕೆಜಿ ಅಕ್ಕಿಗೆ ಹಣವನ್ನ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡ್ತೀವಿ ಅಂತ ಹೇಳಿದ್ದಾರೆ ಅಂದರೆ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಖಾತೆಗೆ ಹಣ ಜಮಾ ಮಾಡುತ್ತಾರೆ ಎಪಿಎಲ್ ಬಿಪಿಎಲ್ ಕಾರ್ಡ್ ಹೊಂದಿದ ಎಷ್ಟೋ ಜನರಿಗೆ ಇನ್ನೂ ಹಣ ಬಂದಿಲ್ಲ
ಎಷ್ಟೋ ಜನರಿಗೆ ಮನೆಯ ಮುಖ್ಯಸ್ಥರು ನಿಧನರಾಗಿರ್ತಾರೆ ಅವರ ಹೆಸರು ಕೂಡ ರೇಷನ್ ಕಾರ್ಡ್ ನಲ್ಲಿ ಇರುತ್ತೆ ಅಂತವರು ಆಧಾರ್ ಕಾರ್ಡ್ ಲಿಂಕ್ ಮಾಡೋದಕ್ಕೆ ಎಲ್ಲಿಂದ ಮನೆ ಮುಖ್ಯಸ್ಥನ ಕರ್ಕೊಂಡು ಬರೋದು ಅಂತವರಗೂ ಕೂಡ ಎಷ್ಟೋ ಜನರಿಗೆ ಹಣ ಸಿಕ್ಕಿಲ್ಲ ಅಥವಾ ಎಷ್ಟೋ ಜನರು ಆಧಾರ್ ಕಾರ್ಡ್ ಕೆವೈಸಿ ಮಾಡಿಸಿರೋದಿಲ್ಲ ಅಂತವರಿಗೂ ಕೂಡ ಹಣ ಜಮೆಯಾಗಿಲ್ಲ ಇನ್ನು ನಾನ ಕಾರಣಗಳಿಂದ ಎಷ್ಟೋ ಜನರ ಖಾತೆಗೆ ಇನ್ನೂ ಹಣ ತಲುಪಿಲ್ಲ ಈ ರೀತಿ ಸಮಸ್ಯೆಗಳಾದಾಗ ಪಡಿತರ ಚೀಟಿದಾರ ಮುಖ್ಯಸ್ಥರು ಬ್ಯಾಂಕಿಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು
ಕಡ್ಡಾಯವಾಗಿ ಜುಲೈ 20ರ ಒಳಗೆ ಲಿಂಕ್ ಮಾಡಿಸಿ ಖಾತೆಯನ್ನು ಸಕ್ರಿಯಗೊಳಿಸಿದರೆ ಮಾತ್ರ ಮುಂದಿನ ತಿಂಗಳಿನಿಂದ ಹಣ ಜಮಯಾಗುವುದು ಅರ್ಹ ಪಡಿತರ ಚೀಟಿದಾರರು ಡಿಟಿಪಿ ಮೂಲಕ ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರ ವಿವರಗಳಿಗೆ ಆಹಾರ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ.