ಮಾತನಾಡುವ ಆಂಜನೇಯ ನಿಮ್ಮ ಕಿವಿಗೆ ಕೇಳಿಸುತ್ತೆ,ಆಂಜನೇಯ ಮಾತನಾಡುವ ಶಬ್ದಗಳು ಅಷ್ಟಕ್ಕೂ ಇದು ಇರೋದೆಲ್ಲಿ ಗೊತ್ತಾ

Karnataka Anjaneya temples: ಇಲ್ಲಿ ಆಂಜನೇಯ ಸ್ವಾಮಿಯು (Anjaneya Swami) ನಿಮ್ಮ ಊಹೆಗೂ ನಿಲುಕದ ಪವಾಡವನ್ನು ಮಾಡುತ್ತಾರೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡ ನಂತರ ಅದು ಈಡೇರುತ್ತದೆಯೋ ಇಲ್ಲವೋ ಎಂಬುದನ್ನು ತಮ್ಮ ಮಾತಿನ ಮೂಲಕ ನಿಮಗೆ ತಿಳಿಸುತ್ತಾರೆ ಈ ಪವಾಡ ಆಂಜನೇಯ ಸ್ವಾಮಿ ಈ ಕ್ಷೇತ್ರ ಅತ್ಯಂತ ಪ್ರಸಿದ್ಧವಾಗಿದೆ ಏಕೆಂದರೆ ಭಕ್ತರ ಕಷ್ಟಗಳನ್ನು ನೂರಕ್ಕೆ ನೂರರಷ್ಟು ಈ ಪವಾಡ ಆಂಜನೇಯ ಸ್ವಾಮಿ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಈ ದೇವಸ್ಥಾನದಲ್ಲಿ ಯಾರೊಬ್ಬರೂ ಹಣವನ್ನು ಸ್ವೀಕರಿಸುವುದಿಲ್ಲ ಪೂಜೆ ಹೋಮ ಹವನ ಎಲ್ಲವನ್ನು ಉಚಿತವಾಗಿಯೇ ಮಾಡುತ್ತಾರೆ ನಿಮಗೆ ಬೇಕಿದ್ದರೆ ದುಡ್ಡನ್ನು ಭಕ್ತಿಯಿಂದ ಕಾಣಿಕೆ ಡಬ್ಬಿಗೆ ಹಾಕಬಹುದು.

ಈ ದೇವಸ್ಥಾನಕ್ಕೆ ಬಂದರೆ ನಿಮ್ಮ ಮತ್ತು ಆಂಜನೇಯನ (Lord Anjaneya) ಭಕ್ತಿಯಷ್ಟೇ ಮಾತನಾಡುತ್ತದೆ ಯಾವುದೇ ಹಣದ ವ್ಯವಹಾರಗಳಿಗೆ ಇಲ್ಲಿ ಜಾಗವಿಲ್ಲ ಮಾತನಾಡುವ ಆಂಜನೇಯ ಸ್ವಾಮಿ ಇರುವ ಸ್ಥಳ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿರುವ ಎಲಗೂರು ಎಂಬ ಹಳ್ಳಿ ಯಲ್ಲಿ ಈ ದೇವಸ್ಥಾನ ಇದೆ ದೇವಸ್ಥಾನದ ಹೆಸರು ಎಲಗೂರು ಆಂಜನೇಯ ದೇವಸ್ಥಾನ. ಹಿಂದೆ ರಾಮ ಲಕ್ಷ್ಮಣ ಮತ್ತು ಸೀತೆ ಆಂಜನೇಯ ಸ್ವಾಮಿ ಯಲಗೂರಿಗೆ ಆಗಮಿಸುತ್ತಾರೆ ಶ್ರೀರಾಮದೇವರ ಆಜ್ಞೆಯಂತೆ ಆಂಜನೇಯ ಸ್ವಾಮಿ ಈ ಎಲಗೂರಿನಲ್ಲಿ ಕಲ್ಲಾಗಿ ನೆಲೆ ನಿಂತು ಭಕ್ತರ ಸಂಕಷ್ಟಗಳನ್ನು ಈಡೇರಿಸುವ ಪ್ರಭುವಾಗುತ್ತಾನೆ ಎಂಬ ಮಾತಿದೆ.

ಪ್ರತಿದಿನ ಈ ಆಂಜನೇಯ ಸ್ವಾಮಿಗೆ ಮಾಧ್ವ ಸಂಪ್ರದಾಯದ ಪ್ರಕಾರ ಪೂಜೆಗಳು ನೆರವೇರುತ್ತವೆ ಏಳು ಅಡಿ ಎತ್ತರ ಇರುವ ಈ ಆಂಜನೇಯ ಸ್ವಾಮಿಗೆ ಪ್ರತಿದಿನ ಕೃಷ್ಣಾ ನದಿಯ ನೀರಿನಿಂದ ಅಭಿಷೇಕವನ್ನು ಮಾಡಲಾಗುತ್ತದೆ ಈತನ ಬಳಿ ಬೇಡಿಕೊಂಡು ಬರುವ ಭಕ್ತರಿಗೆ ಎರಡು ಬಗೆಯ ಉತ್ತರ ನೀವು ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ನಿಮಗೆ ಇನ್ನೂ ಎಂದೂ ಕೇಳಿರದ ಶಬ್ದಗಳು ಭಾಸವಾಗುತ್ತವೆ

ಯಾವುದೋ ಒಂದು ಶಕ್ತಿ ಬಂದು ಶಕ್ತಿ ಬಂದು ನಿಮಗೆ ಏನೋ ಹೇಳಿದಂತೆ ಭಾಸವಾಗುತ್ತದೆ ಮತ್ತು ಇಷ್ಟಾರ್ಥಗಳನ್ನು ಬೇಡಿಕೊಂಡ ತಕ್ಷಣ ಆಂಜನೇಯ ಸ್ವಾಮಿ ಬಲಗಡೆಯಿಂದ ಹೂ ಬಿದ್ದರೆ ನಿಮ್ಮ ಕಷ್ಟ ಪರಿಹಾರವಾಗುತ್ತದೆ ಆದರೆ ಎಡಗಡೆಯಿಂದ ಬಿದ್ದರೆ ಈಡೇರುವುದಿಲ್ಲ ಎಂದು ಅರ್ಥ ಇಲ್ಲಿ ಎಡಗಡೆಯಿಂದ ಹೂ ಬೀಳುವುದು ತುಂಬಾ ಕಡಿಮೆ.

ಇಲ್ಲಿ ಬರುವ ಸಾವಿರ ಜನ ಭಕ್ತರಲ್ಲಿ 10 ಜನರಿಗೆ ಆಂಜನೇಯನ ಶಕ್ತಿ ಧ್ವನಿ ಖಂಡಿತಾ ಕೇಳಿಸುತ್ತದೆ ಇನ್ನು ಉಳಿದವರಿಗೆ ಆಂಜನೇಯನ ಹೂವು ಪ್ರಸಾದ ಆಗುತ್ತದೆ ಒಮ್ಮೆ ರಾಘವೇಂದ್ರ ಸ್ವಾಮಿಗಳು ಈ ದೇವಾಲಯಕ್ಕೆ ಭೇಟಿ ನೀಡಿದ್ದರಂತೆ ಮಾತನಾಡಿದ್ದರಂತೆ, ಆ ಸಮಯದಲ್ಲಿ ಪ್ರತಿಯೊಬ್ಬ ಭಕ್ತರು ಅದನ್ನು ಪ್ರತಿಕ್ಷವಾಗಿ ಕಂಡಿದ್ದಾರೆ ಎಂದು ಹೇಳಲಾಗಿದೆ ಇದಾದ ಬಳಿಕ ಒಂದು ವರ್ಷದ ಬಳಿಕಾರ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗುತ್ತಾರೆ ಎಲಗೂರು ಆಂಜನೇಯ ಸ್ವಾಮಿಗೆ ಬೇಡ ನಮಸ್ಕಾರ ಎಂದರೆ ತುಂಬಾ ಇಷ್ಟ.

ಕಷ್ಟ ಪರಿಹಾರಕ್ಕಾಗಿ ದೀಡ ನಮಸ್ಕಾರ ಯಾರು ಹಾಕುತ್ತಾರೋ ಅವರ ಕಷ್ಟ ಪರಿಹಾರ ಆಗದೆ ಇರಲು ಇರುವ ಇತಿಹಾಸವೇ ಇಲ್ಲ ಎಂದು ಇಲ್ಲಿನ ಭಕ್ತರು ಹೇಳುತ್ತಾರೆ ಈ ದೇವಸ್ಥಾನಕ್ಕೆ ಮಂಗಳವಾರ ಮತ್ತು ಶನಿವಾರ ಭಾರಿ ಭಕ್ತರು ಆಗಮಿಸುತ್ತಾರೆ ವರ್ಷ ಕಳೆದಂತೆ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ 2020 ಮತ್ತು 22 ರಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತಾದಿಗಳ ಸಂಖ್ಯೆ ಬರೋಬ್ಬರಿ ಒಂದು ಕೋಟಿ 98 ಲಕ್ಷ ದಷ್ಟು ಇದೆ ಕಾರಣ ಆಂಜನೇಯ ಸ್ವಾಮಿಯ ಅದ್ಭುತ ಶಕ್ತಿ ಇನ್ನೊಂದು ಕಾರಣ ಇಲ್ಲಿಗೆ ಬಂದು ಹೋದ ಮೇಲೆ ಕಷ್ಟ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಯಾಗಿದೆ.

You might also like

Comments are closed.