ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ನಿಮಗೆ ಮದುವೆಯಾಗಿ ಗಂಡು ಮಗುವೇ ಹುಟ್ಟುತ್ತೆ

ಆಂಜನೇಯ ಎಂದರೆ ಧೈರ್ಯ, ಶಕ್ತಿಯ ಪ್ರತೀಕ. ಕೇಸರಿ ನಂದನ, ವಾಯುಪುತ್ರ, ಭಜರಂಗಬಲಿ, ಹನುಮಾನ್ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಆಂಜನೇಯನಿಗೆ ಹಿಂದೂಗಳು ಜಗತ್ತಿನಲ್ಲಿ ಎಲ್ಲೆಲ್ಲಿ ಇದ್ದಾರೋ ಅಲ್ಲೆಲ್ಲ ಭಕ್ತರಿದ್ದಾರೆ. ಆಂಜನೇಯನನ್ನು ಶಿವನ ಅವತಾರವೆಂದೇ ಹೇಳಲಾಗುತ್ತದೆ. ರಾವಣ ಸಂಹಾರಕ್ಕಾಗಿ ವಿಷ್ಣುವು ರಾಮನ ಅವತಾರ ತಾಳಿದಾಗ ಶಿವನು ಆಂಜನೇಯನ ಅವತಾರ ತಾಳಿ ವಿಷ್ಣುವಿಗೆ ನೆರವಾಗುತ್ತಾನೆ.
ರಾಮಭಕ್ತನಾಗಿ ಭಕ್ತಿಯ ಶಕ್ತಿ, ಮಿತಿ ಏನೆಂದು ತೋರಿಸಿಕೊಟ್ಟಿದ್ದಾನೆ. ಆತನ ರಾಮಪ್ರೇಮವೇ ಒಂದು ಆದರ್ಶ. ಈತನ ತಾಯಿ ಅಂಜನಾ ಹಾಗೂ ತಂದೆ ಕೇಸರಿಯಾದ್ದರಿಂದ ಈತನಿಗೆ ಆಂಜನೇಯ ಹಾಗೂ ಕೇಸರಿ ನಂದನನೆಂಬ ಹೆಸರುಗಳು ಬಂದಿವೆ. ಆಂಜನೇಯ ಪುರಾಣಗಳಲ್ಲಿ ಭಕ್ತನಾಗಿ ಹೆಸರು ಮಾಡಿದ್ದರೂ, ಈಗ ಅವನೇ ಒಬ್ಬ ಬಹು ಶಕ್ತಿಶಾಲಿ ದೇವರಾಗಿದ್ದಾನೆ. ಈತನನ್ನು ಪೂಜಿಸುವುದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

ವೈವಾಹಿಕ ಸಮಸ್ಯೆಗಳಿಂದ ಮುಕ್ತಿ
ಯಾರಿಗಾದರೂ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಿದ್ದರೆ ಹನುಮಾನ್ ಚಾಳೀಸ್ ಪ್ರತಿನಿತ್ಯ ಹೇಳುವುದರಿಂದ ಸಮಸ್ಯೆಗಳಿಂದ ಬಿಡುಗಡೆ ಹೊಂದಬಹುದು. ಹನುಮಾನ್ ಸ್ವತಃ ಗುರುವಾಗಿದ್ದಾನೆ. ಹಾಗಾಗಿ, ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಅವನಿಗೆ ಗೊತ್ತು. ಅಲ್ಲದೆ, ರಾಮ- ಸೀತೆಯ ಜೀವನವನ್ನೇ ಸರಿಯಾಗಿಸಿದವನು ಆತ. ಬ್ರಹ್ಮಚಾರಿಯಾದರೂ ದಂಪತಿಯ ನೋವು ಅವನಿಗೆ ಅರ್ಥವಾಗುತ್ತದೆ.
ಮಾನಸಿಕ ಸಮಸ್ಯೆಗಳಿಂದ ಪಾರು
ಖಿನ್ನತೆ ಆತಂಕ, ಭಯ ಮುಂತಾದ ಮಾನಸಿಕ ಸಮಸ್ಯೆಗಳಿದ್ದವರು ತಪ್ಪದೇ ಹನುಮಾನ್ ಚಾಲೀಸ್  ಹೇಳಬೇಕು. ಇದು ವ್ಯಕ್ತಿಯೊಳಗೆ ಅಸಾಮಾನ್ಯ ಧೈರ್ಯ ತುಂಬುವ ಜೊತೆಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಆಂಜನೇಯನ ಮೇಲೆ ನಂಬಿಕೆಯಿಂದಾಗಿ ನೀವು ನಕಾರಾತ್ಮಕ ಯೋಚನೆಗಳಿಂದ ಖಂಡಿತಾ ಹೊರ ಬರುತ್ತೀರಿ. ಮನಸ್ಸನ್ನು ಅರಿವಲ್ಲಿ, ಅದರಲ್ಲಿ ಶಕ್ತಿ ತುಂಬುವಲ್ಲಿ ಅವನಿಗೆ ವಿಶೇಷ ಶಕ್ತಿಯಿದೆ.

ಸಾಲದಿಂದ ಮುಕ್ತಿ ಕೊಡಿಸುತ್ತಾನೆ
ನೀವು ಸಾಲದಲ್ಲಿ ಮುಳುಗಿದ್ದು, ಹಣ ಹಿಂದಿರುಗಿಸಲಾಗದೆ ಒದ್ದಾಡುತ್ತಿದ್ದರೆ, ಆಂಜನೇಯನ ಮೊರೆ ಹೋಗುವುದರಿಂದ ನಿಮಗೆ ಅತ್ಯುತ್ತಮ ಪರಿಹಾರ ಸಿಗುತ್ತದೆ.
ಪ್ರತಿದಿನ ಹನುಮಾನ್ ಚಾಳೀಸ್ ಹೇಳುವುದರಿಂದ ಶಿಸ್ತು ಮೈಗೂಡುತ್ತದೆ, ಬದುಕಿನ ಬಹುತೇಕ ಗುರಿಗಳನ್ನು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅಂಥಾ ದೊಡ್ಡ ಸಮುದ್ರವನ್ನೇ ತನ್ನ ಆತ್ಮವಿಶ್ವಾಸದಿಂದ ದಾಟಿ ಹಾರಿದವನು ಆತ. ಅಂಥದರಲ್ಲಿ ನಾವು ಹಾಕಿಕೊಳ್ಳುವ ಸಣ್ಣಪುಟ್ಟ ಗುರಿಗಳೆಲ್ಲ ಅವನಿಗೆ ಯಾವ ಲೆಕ್ಕ? ಯಾವಾಗ ಆತ್ಮವಿಶ್ವಾಸ ಕಡಿಮೆ ಎನಿಸುತ್ತದೋ, ಆಗ ಆಂಜನೇಯನ ಮೊರೆ ಹೋಗಿ.
ಈ ದೇವಸ್ಥಾನ ವಿಳಾಸ ಇಲ್ಲಿದೆ ನೋಡಿ
(ಸೂರ್ಯ ಮತ್ತು ಆಂಜನೇಯ ಸ್ವಾಮಿ ಇರುವ ಏಕೈಕ ದೇವಾಲಯ)
ಸೂರ್ಯಪುರ (ಹನುಮ ಕಲಿತ ಭೂಮಿ)
ಕೋಳಾಲ ಹೋಬಳಿ
ಕೊರಟಗೆರೆ ತಾಲ್ಲೂಕು
ತುಮಕೂರು ಜಿಲ್ಲೆ.
ಮೊ.9448270327

(video credit :  Halli Tv )

You might also like

Comments are closed.