
ಪ್ರಿಯ ಓದುಗರೇ ನಟ ಅನಿರುದ್ಧ ವಿಷ್ಟುವರ್ಧನ ಅವರ ಅಳಿಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ, ವಿಷ್ಣುವರ್ಧನ್ ಅವರ ಮಗಳನ್ನು ಮಧ್ಯಮವರ್ಗದ ಅನಿರುದ್ಧ ಅವರಿಗೆ ಸ್ವತಃ ತಾವೇ ಕೊಡುತ್ತೇನೆ ಎಂದರು ವಿವಾಹವಾಗಲು ಅನಿರುದ್ಧ ಅವರು ನಿರಾಕರಿಸಿದ್ದರು. ಯಾಕೆ? ನಂತರ ಮದ್ವೆ ಆಗಿದ್ದು ಹೇಗೆ? ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಸಿನಿಮಾ ರಂಗದಲ್ಲಿ ಹೆಸರು ಮಾಡಿದಂತಹ ಸುಪ್ರಸಿದ್ದ ನಟರಲ್ಲಿ ಡಾ. ವಿಷ್ಟುವರ್ಧನ ಅವರು ಒಬ್ಬರು. ಇವರು ಹೇಳಿದಂತೆ ಮಾಡಿದವರು. ನಟನೆಯ ಒಳಗು – ಹೊರಗು ಅತೀ ಸರಳತೆಯಿಂದ ಜೀವಿಸಿದವರು. ಅದೆಷ್ಟ್ರ ಮಟ್ಟಿಗೆ ಎಂದ್ರೆ ಸಾಕಷ್ಟು ಹಣ, ಆಸ್ತಿ ಗಳಿಸಿದರು ಸಹ ಸಭೆ, ಸಮಾರಂಭಗಳಿಗೆ ಶುಭ್ರ, ಶ್ವಚ್ಚ ಬಿಳಿ ಬಟ್ಟೆಯ ಜುಬ್ಬಾ ಪಜಾಮ್, ಮತ್ತು ತಲೆಗೂ ಒಂದು ಬಿಳಿ ಬಟ್ಟೆಯನ್ನೇ ಕಟ್ಟಿಕೊಂಡಿರುತ್ತಿದ್ದರು.
ಅಭಿಮಾನಿಗಳು ಇವರನ್ನು ಸಾಯಿಬಾಬಾ ಅವರ ಪ್ರತಿರೂಪ ಎಂದು ಭಾವಿಸಿದ್ದರು. ಅಷ್ಟೇ ಭಕ್ತಿ, ಭಾವ, ಪ್ರೀತಿದಿಂದ ಸಾಹಸ ಸಿಂಹ ಡಾ. ವಿಷ್ಟುವರ್ಧನ ಅವರನ್ನು ವಿಷ್ಟುದಾದಾ ಎಂದು ಕರೆಯುತ್ತಿದ್ದರು. ಇವರಿಗೆ ಸ್ವಂತ ಮಕ್ಕಳು ಆಗದ ಕಾರಣ 2ಹೆಣ್ಣು ಮಕ್ಕಳನ್ನು ದತ್ತು ಪಡೆದು ಪ್ರೀತಿಯಿಂದ ಸಾಕಿ ಸಾಲುಹಿದ್ದ ಹೃದವಂತ ವಿಷ್ಣುದಾದಾ. ಇವರ ಮೊದಲ ಮಗಳನ್ನು ನಟ ಅನಿರುದ್ಧಗೆ ಕೊಡಬೇಕು ಎಂದು ವಿಷ್ಟದಾದಾ ಬಯಸಿದರು. ಅದೇ ರೀತಿ ಖುದ್ದಾಗಿ ಅವರನ್ನೇ ಕೇಳಿದಾಗ ಈ ವಿವಾಹದ ಆಮಂತ್ರಣವನ್ನು ನಿರಾಕರಿಸದ್ರು. ಯಾಕೆ ಅಂತಾ ಅಂದ್ರೇ… ಅನಿರುದ್ಧ ಹುಟ್ಟಿದ್ದು ಬೆಳೆದದ್ದು ಮುಂಬೈಯಲ್ಲಿ. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕದ ಧಾರವಾಡಕ್ಕೆ ಬರುತ್ತಾರೆ.ನಂತರ ಮತ್ತೆ ಮುಂಬೈಗೆ ತೆರಳಿದ ಅನಿರುದ್ಧ ನಟನಾ ಅಭಿರುಚಿ ಹೊಂದಿದ್ದರು. ವೃತ್ತಿಯಲ್ಲಿ ಇಂಟರಿಯಲ್ ಡಿಸೈನರ್ ಆಗಿದ್ದರು. ಆಗಾಗ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.
ಕುಟುಂಬದಲ್ಲಿ ಇವರು ಮಧ್ಯಮ ವರ್ಗದವರಾಗಿದ್ದು, ಹೇಳಿಕೊಳ್ಳುವಂತಹ ಆಸ್ತಿಯಾಗಲಿ, ಹೆಸರಾಗಲಿ ಇರಲಿಲ್ಲ. ಆದರೆ ಇವರಿಗೆ ಸಿನಿಮಾರಂಗದ ಬಗ್ಗೆ ಅಪಾರವಾದ ಪ್ರೀತಿ ಗೌರವ ಮತ್ತು ನಟಿಸುವ ಅಭಿರುಚಿಯನ್ನು ಹೊಂದಿದ್ದರು. ಇವರ ಪೂರ್ಣ ಹೆಸರು ಅನಿರುಧ್ ಜಟಕರ್. ಅನಿರುದ್ಧ್ ಅವರು ವಿಷ್ಣುದಾದಾ ಅವರ ಸಹೋದರ ಎನ್.ರವಿಕುಮಾರ್ ಅವರ ನಿರ್ದೇಶನದ “ಹಯವದನ ” ಎಂಬ ನಾಟಕದಲ್ಲಿ ಭಾಗವಹಿಸಿದ್ದರು. ಈ ನಾಟಕವನ್ನು ನೋಡಲು ವಿಷ್ಣುವರ್ಧನ್ ಅವರ ಇಡೀ ಕುಟುಂಬ ಹೋಗಿತ್ತು. ಅಂದು ಅನಿರುದ್ಧ್ ಅವರ ನಟನೆಯನ್ನು ಕಂಡ ವಿಷ್ಣುವರ್ಧನ್ ಅವರು ನಾಟಕ ಮುಗಿದ ಮೇಲೆ ಸ್ವತಹ ತಾವೇ ಅನಿರುದ್ಧ್ ಅವರ ಬೆನ್ನ ಬಾರಿಸಿ, ನಿನಗೆ ಸಿನಿಮಾರಂಗದಲ್ಲಿ ಉತ್ತಮ ಭವಿಷ್ಯವಿದೆ. ಇನ್ನೊಬ್ಬ ಚಾರ್ಮಿಂಗ್, ಯಂಗ್ ಆಕ್ಟ್ರ ಎಂದಿದ್ದರು. ಅಂದು ವಿಷ್ಣುವರ್ಧನ್ ಅವರ ಮಾತಿಗೆ ಫುಲ್ ಫಿದಾ ಆಗಿದ್ದ ಅನಿರುದ್ಧ್ ಅವರ ಕುಟುಂಬಕ್ಕೆ ತೀರ ಹತ್ತಿರವಾಗಿದ್ದರು.
ಗಿರಿ ಸಮಯದಲ್ಲಿ ಅವರು ತಮ್ಮ ಮಗಳಿಗಾಗಿ ವರನನ್ನು ಹುಡುಕುತ್ತಿದ್ದರು. ಇವರು ಮನಸ್ಸು ಮಾಡಿದ್ರೆ ಆಗರ್ಭ ಶ್ರೀಮಂತ ಅಳಿಯನ ತರಬಹುದಿತ್ತು. ಆದರೆ ಇವರ ಜೀವನ ಮತ್ತು ಇವರ ಆಸೆ ಕನಸುಗಳೆಲ್ಲವೂ ಸರಳ. ಇವರಿಗೆ ಮಗಳನ್ನು ಅತಿಯಾಗಿ ಪ್ರೀತಿಸುವ ಸರಳ ಸಜ್ಜನಿಕೆ ವ್ಯಕ್ತಿ ಬೇಕಾಗಿತ್ತು. ಈ ಗುಣಗಳು ಇರುವ ವ್ಯಕ್ತಿ ಎಂದರೆ ಅನಿರುದ್ಧ್ ಎಂದು ವಿಷ್ಣುವರ್ಧನ್ ಅವರು ನಿರ್ಧರಿಸಿದ್ದರು. ಅನಿರುದ್ಧ್ ಕೂಡ ಅದೇ ಮೊದಲು “ಚಿಟ್ಟೆ ” ಎಂಬ ಕನ್ನಡ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತುಂಟಾಟ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಆಗ ಸ್ವತಃ ವಿಷ್ಣುವರ್ಧನ್ ಅವರೇ ಮುಂದೆ ಹೋಗಿ ನನ್ನ ಮಗಳನ್ನು ವಿವಾಹವಾಗುವ ಎಂದು ಮದುವೆ ಆಮಂತ್ರಣವನ್ನು ಮಾಡುತ್ತಾರಂತೆ. ನಿಮ್ಮಷ್ಟು ಆಸ್ತಿ ಮತ್ತು ಅವರ ಸ್ಟೇಟಸ್ ನೋಡಿದ್ರೆ ನಾನು ನಿಮ್ಮ ಅಳಿಯನಾಗುವ ಯಾವ ಲಕ್ಷಣ ಕೂಡಾ ನನಗಿಲ್ಲ ಎಂದು ನಿರಾಕರಿಸಿದ್ದರು.
ಮುಂದೆ ಏನಾದರೂ ಸಮಸ್ಯೆ ಎದುರಾದಾಗ ಅದು ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ ಆದ್ದರಿಂದ ನನಗೆ ಸಂಬಂಧ ಬೇಡ ಎಂದಿದ್ದಾರಂತೆ. ನಂತರ ವಿಷ್ಣುವರ್ಧನ್ ಅವರು ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಶಾತ್ರೋಕ್ತವಾಗಿ, ಅದ್ದೂರಿಯಾಗಿ ಅವರ ಮಗಳನ್ನು ಅನಿರುದ್ದ್ ಗೆ ಧಾರೆ ಎರದರು. ನಂತರ ದಿನಗಳಲ್ಲಿ ನೀನೆಲ್ಲೋ ನಾನಲ್ಲೆ ಚಿತ್ರದಲ್ಲಿ ಮಾವ ಮತ್ತು ಅಳಿಯ ಒಟ್ಟಾಗಿ ನಟಿಸಿದ್ದರು ಕೂಡ ಇದು ಅಷ್ಟರಮಟ್ಟಿಗೆ ಹೆಸರು ಮಾಡಲಿಲ್ಲ. ನಂತರ ಇವರ 2018ರಲ್ಲಿ ತೆರೆಗೆ ಬಂದ ಚಿತ್ರ “ರಾಜ ಸಿಂಹ ” ಇದು ಇವರ ಕೊನೆಯ ಚಿತ್ರವಾಯಿತು.
ವಿಷ್ಣುವರ್ಧನ ಅವರು ಅಳಿಯನನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಗೊಳಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಅದು ಅಷ್ಟೇನು ಯಶಸ್ವಿಯಾಗಲಿಲ್ಲ. ನಂತರ ಧಾರಾವಾಹಿ ಯತ್ತ ಮುಖ ಮಾಡಿದ್ದ ಅನಿರುದ್ಧ ಅವರು ಕರ್ನಾಟಕದ ಮನೆಮಾತಾದರು. ಎಲ್ಲರಲ್ಲಿಯೂ ಆರ್ಯವರ್ಧನ್ ಎಂಬ ಹೆಸರಿನಿಂದ ಫೇಮಸ್ ಆದರು. ಈ ಮೊದಲು ವಿಷ್ಣುವರ್ಧನ್ ಅವರ ಅಳಿಯ ಎಂದು ಗುರುತಿಸಿಕೊಳ್ಳುತ್ತಿದ್ದ ಅನಿರುದ್ಧ್ ಇದೇ ಮೊದಲ ಬಾರಿಗೆ ತಮ್ಮ ಸ್ವಂತ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಆದರೆ ಕೆಲದಿನಗಳ ಹಿಂದೆಯಷ್ಟೇ ಇವರು ಅಹಂಕಾರದ ಮಾತುಗಳಿಂದಾಗಿ ಆ ಧಾರಾವಾಹಿ ಮತ್ತು ಇಡೀ ಮನೋರಂಜನಾ ಕಾರ್ಯಕ್ರಮ ಗಳಿಂದಲೇ ಎರಡು ವರ್ಷ ಬ್ಯಾನ್ ಆದಂತಹ ಸುದ್ದಿ ಹರಿದಾಡುತ್ತಿದೆ…
Comments are closed.