ಪಶು ಭಾಗ್ಯ ಯೋಜನೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ:
-
ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ ರೂ.1.20 ಲಕ್ಷದ ವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪ.ಜಾ. ಮತ್ತು ಪ.ಪಂ. ದವರಿಗೆ ಶೇ.33 ಹಾಗೂ ಇತರೆ ಜನಾಂಗದವರಿಗೆ ಶೇ.25 ರಷ್ಟು ಬ್ಯಾಕ್ ಎಂಡೆಡ್ ಸಹಾಯಧನ ಒದಗಿಸಲಾಗುವುದು. (ಪ.ಜಾ. ಮತ್ತು ಪ.ಪಂ. ದವರಿಗೆ ಸಹಾಯಧನವನ್ನು ಪಶು ಭಾಗ್ಯ ಯೋಜನೆಯ ಆಡಳಿತಾತ್ಮಕ ಅನುಮೋದನೆ ಸರ್ಕಾರಿ ಆದೇಶ, ದಿನಾಂಕ 04-08-2015 ರಲ್ಲಿ ಶೇ.33 ರಿಂದ ಶೇ.50 ಕ್ಕೆ ಪರಿಷ್ಕರಿಸಲಾಗಿದೆ).
-
ಬೆಳೆ ಸಾಲದ ಮಾದರಿಯಲ್ಲಿ, ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. 50,000/- ವರೆಗೆ ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುವುದು.
-
ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಿಗೆ 5 ರಾಸುಗಳವರೆಗೆ ವಿಮಾ ಕಂತುಗಳನ್ನು ಪಾವತಿಸಲು ಸಹಾಯಧನ ಒದಗಿಸಲಾಗುವುದು.
-
ಕುರಿಗಾಹಿ ಸುರಕ್ಷಾ ಯೋಜನೆಯಡಿ ನೀಡುತ್ತಿರುವ ರೂ.5,000/- ಪರಿಹಾರ ಧನವನ್ನು (exgratia) ಮುಂದುವರೆಸಲಾಗುವುದು. ಈ ಕಾರ್ಯಕ್ರಮಕ್ಕೆ ರೂ.5.00 ಕೋಟಿ ಅನುದಾನವನ್ನು ನೀಡಲಾಗುವುದು.
ಇತರೆ ಕಾರ್ಯಕ್ರಮ ಹಾಗೂ ಸವಲತ್ತುಗಳು:
ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಇನ್ನಿತರೆ ಕಾರ್ಯಕ್ರಮ ಹಾಗೂ ಒದಗಿಸುತ್ತಿರುವ ಸವಲತ್ತುಗಳು ಕೆಳಕಂಡಂತಿವೆ:
-
ಕೇಂದ್ರ ಪುರಸ್ಕೃತ ಯೋಜನೆಗಳು (CSS).
-
ದೊಡ್ಡರೋಗ ನಿರ್ಮೂಲನಾ ಯೋಜನೆ (NPRE)
-
ಪ್ರಾಣಿ ರೋಗ ತಡೆಗಟ್ಟುವಿಕೆಗೆ ರಾಜ್ಯಗಳಿಗೆ ನೆರವು (ASCAD)
-
ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮ (FMD-CP)
-
ರಾಷ್ಟ್ರೀಯ ಪ್ರಾಣಿ ರೋಗ ವರದಿ ವ್ಯವಸ್ಥೆ (NADRS)
-
ರಾಷ್ಟ್ರೀಯ ಪಿ.ಪಿ.ಆರ್. ನಿಯಂತ್ರಣ ಕಾರ್ಯಕ್ರಮ (NCP-PPR)
-
ರಾಷ್ಟ್ರೀಯ ಬ್ರೂಸೆಲ್ಲಾ ನಿಯಂತ್ರಣ ಕಾರ್ಯಕ್ರಮ
-
ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳ ಸ್ಥಾಪನೆ ಹಾಗೂ ಬಲವರ್ಧನೆ (ESVHD)
-
ತಳಿ ಅಭಿವೃದ್ಧಿ
-
ಜಾನುವಾರು ವಿಮಾ ಯೋಜನೆ
-
ವಿಶೇಷ ಜಾನುವಾರು ಅಭಿವೃದ್ಧಿ ಯೋಜನೆ
-
ವಿಶೇಷ ಘಟಕ ಯೋಜನೆ (SCSP)
-
ಗಿರಿಜನ ಉಪ ಯೋಜನೆ (TSP)
-
ಬರಡು ರಾಸು ಚಿಕಿತ್ಸಾ ಶಿಬಿರ
-
ಮೇವು ಅಭಿವೃದ್ಧಿ ಯೋಜನೆ
-
ರೈತರ ತರಬೇತಿ ಕಾರ್ಯಕ್ರಮ, ಇತರೆ.
-
ಮ್ಯಾಟ್ ನೀಡಲು ಅರ್ಜಿ! ಪಶು ಸಂಗೋಪನಾ ಇಲಾಖೆ!
ಕೌ ಮ್ಯಾಟ್ ಸೌಲಭ್ಯಕ್ಕೆ ಅರ್ಜಿ ಆಹ್ವಾನ : ಪಶುಪಾಲನಾ ಇಲಾಖೆ ವತಿಯಿಂದ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಾಗೂ 2022-23ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆಯಡಿ ಕೌ ಮ್ಯಾಟ್ ( ರಬ್ಬರ್ ನೆಲಹಾಸು ) ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೌ ಮ್ಯಾಟ್ ಸೌಲಭ್ಯಕ್ಕೆ ಅರ್ಜಿ ಹ್ವಾನ : ಪಶುಪಾಲನಾ ಇಲಾಖೆ ವತಿಯಿಂದ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಾಗೂ 2022-23ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆಯಡಿ ಕೌ ಮ್ಯಾಟ್ ( ರಬ್ಬರ್ ನೆಲಹಾಸು ) ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2021 -22 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೆಲಹಾಸುಗಳನ್ನು ವಿತರಿಸಲು ಯೋಜನೆಯಡಿಯಲ್ಲಿ ಆಯ್ಕೆಯಾಗುವ ಪ್ರತಿ ಫಲಾನುಭವಿಗಳಿಗೆ ಎರಡು ನೆಲಹಾಸುಗಳನ್ನು ವಿತರಣೆ ಮಾಡಲಾಗುವುದು . ಈ ಕಾರ್ಯಕ್ರಮದಡಿ ಘಟಕದ ವೆಚ್ಚ ( ಎರಡು ಕೌಮ್ಯಾಟ್‌ಗಳಿಗೆ ) 6,190 ಇದ್ದು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ( ಶೇ . 50 ) 3,095 ಸಹಾಯಧನ ಮತ್ತು ( ಶೇ . 50 ) 3095 ಫಲಾನುಭವಿಗಳ ವಂತಿಗೆಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
2022-23ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಕಾಯ್ದೆ 2013 ರಡಿ ಬಳಕೆಯಾಗದೇ ಇರುವ ಮೊತ್ತದಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿ ಫಲಾನುಭವಿಗಳಿಗೆ ಎರಡು ನೆಲಹಾಸುಗಳನ್ನು ( ಶೇ . 90 ) ಈ 5,571 ಸಹಾಯಧನ ಹಾಗೂ ( ಶೇ . 10 ) ಕ 619 ಫಲಾನುಭವಿ ವಂತಿಕೆಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವರ್ಗವಾರು ಗುರಿಗಳನ್ನು ನಿಗದಿಪಡಿಸಲಾಗಿದೆ . ಆಸಕ್ತರು ಜೂ . 30 ರೊಳಗಾಗಿ ಅರ್ಜಿ ಸಲ್ಲಿಸಬೇಕು . ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ರೈತರು ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು ( ಆಡಳಿತ ) ಅಥವಾ ಹತ್ತಿರದ ಪಶುವೈದ್ಯ ಸಂಸ್ಥೆಗಳಿಗೆ ಸಂಪರ್ಕಿಸಲು ಮತ್ತು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ( ಆಡಳಿತ ) ಅವರು ತಿಳಿಸಿದ್ದಾರೆ.
ಮೇಲೆ ತಿಳಿಸಿದಂತೆ ಈಗಾಗಲೇ ಹಲವಾರು ಜನರು ಹೈನುಗಾರಿಕೆ ಹೈನು ರಾಸುಗಳು ಅತ್ಯಂತ ತೂಕವನ್ನು ಹೊಂದಿದ್ದು ಅವುಗಳಿಗೆ ಸಾಮಾನ್ಯವಾಗಿ ಕೊಡುವಾಗ ನೆಲದ ಮೇಲಿರುವ ಹರಳುಗಳು ಚುಚ್ಚುತ್ತವೆ ಅದಕ್ಕಾಗಿ ನೆಲಹಾಸುಗಳು ಹಾಕುವುದರಿಂದ ಅದರ ಮೂತ್ರ ಹಾಗೂ ಸಗಣಿಯನ್ನು ಸುಲಭವಾಗಿ ತೆಗೆದುಹಾಕಬಹುದು ಹಾಗೂ ಮೇವುಗಳ ದನಗಳ ಕೆಳಗಡೆ ಬಿದ್ದು ನಾಶವಾಗುವುದನ್ನು ತಪ್ಪಿಸಬಹುದು. ನೇರವಾಗಿ ಗಂಜಲ ಸಂಗ್ರಹಣೆ ಮಾಡಿ ನಿಮ್ಮ ಭೂಮಿಗೆ ಕೊಡಬಹುದು. ಇದನ್ನು ಒಂದು ಮೀಟರ್ ಗೋವಿನ ಗಂಜಲವನ್ನು ಇಪ್ಪತ್ತೈದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಥವಾ ಪ್ರತಿ ಎಕೆರೆಗೆ 5 ಲೆಟರ್ ಗೋವಿನ ಗಂಜಲವನ್ನು ಹನಿ ನೀರಾವರಿ ಮೂಲಕ ನೀಡಬಹುದು.