ಕಮಲಿ ಧಾರಾವಾಹಿ ಅನಿಕಾ ಹನಿಮೂನ್ ದಿನಗಳನ್ನು ಹೇಗೆ ಎಂಜಾಯ್ ಮಾಡ್ತಿದ್ದಾರೆ ನೋಡಿ

ಇತ್ತೀಚಿನ ದಿನಗಳಲ್ಲಿ ಕಿರುತೆರೆ ಲೋಕದ ಕಲಾವಿದರು ಮದುವೆ ಹಾಗೂ ಮಕ್ಕಳಿಗೆ ತಂದೆ ಹಾಗೂ ತಾಯಿ ಆಗುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಅವುಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕಮಲಿ ಧಾರಾವಾಹಿ ಖ್ಯಾತಿಯ ಅನಿಕ ಪಾತ್ರಧಾರಿಯ ನಟಿ ಹಾಗೂ ಸುಹಾಸ್ ಅವರ ಕುರಿತಂತೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೀ ಕನ್ನಡ ವಾಹಿನಿಯಲ್ಲಿ ಕಮಲಿ ದಾರಾವಾಹಿ ಹಲವಾರು ವರ್ಷಗಳಿಂದ ಟಾಪ್ ಧಾರವಾಹಿಗಳಲ್ಲಿ ತನ್ನ ಹೆಸರನ್ನು ಸಂಪಾದಿಸಿಕೊಂಡು ಬರುತ್ತಿದೆ. ಇನ್ನು ಇದೇ ದಾರವಾಹಿಯಲ್ಲಿ ಹಲವಾರು ವರ್ಷಗಳಿಂದ ವಿಲನ್ ಪಾತ್ರಧಾರಿಯಾಗಿ ಅನಿಕ ಮಹಾಜನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗ್ಯಾಬ್ರಿಯಾಲ ಅವರು ಅದೇ ದಾರವಾಹಿಯಲ್ಲಿ ನಟಿಸುತ್ತಿರುವ ಸುಹಾಸ್ ಅವರನ್ನು ಮದುವೆಯಾಗಿದ್ದಾರೆ.

kamali serial, ಜನರ ಬೈಗುಳ ಸಹಿಸಲಾಗದೆ ಆರು ತಿಂಗಳು ಸೋಶಿಯಲ್ ಮೀಡಿಯಾ ನೋಡಿರಲಿಲ್ಲ:  'ಕಮಲಿ' ಧಾರಾವಾಹಿ ನಟಿ ರಚನಾ ಸ್ಮಿತ್ - kamali kannada serial anika fame actress  rachana real life family ...

ಹೌದು ಮಿತ್ರರೇ ಕಮಲಿ ದಾರವಾಹಿಯಲ್ಲಿ ಶಂಬು ಪಾತ್ರದಲ್ಲಿ ಸುಹಾಸ್ ಕೂಡ ನಟಿಸುತ್ತಿದ್ದಾರೆ. ಗ್ಯಾಬ್ರಿಯಾಲ ಅಲಿಯಾಸ್ ರಚನಾ ಅವರು ಬರೋಬ್ಬರಿ ಮೂರು ವರ್ಷಗಳಿಂದ ಸುಹಾಸ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಕೊನೆಗೂ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ.

ಮಾಡೆಲಿಂಗ್ ಹಾಗೂ ಸೀಮಾ ಮತ್ತು ಕಿರುತರೆ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪರಿಶ್ರಮ ಹಾಗೂ ಹೆಸರನ್ನು ಸಂಪಾದಿಸಿರುವ ರಚನಾ ಅವರು ಈಗ ಕಮಲಿ ಧಾರವಾಹಿಯ ಅನಿಕಾ ಮಹಾಜನ್ ಪಾತ್ರದಲ್ಲಿ ಕೂಡ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಇಬ್ಬರು ಮದುವೆಯಾಗಿದ್ದು ವಿದೇಶದಲ್ಲಿ ಹನಿಮೂನ್ ನಲ್ಲಿ ತಮ್ಮ ಸಂತೋಷದ ಸಮಯಗಳನ್ನು ಕಳೆಯುತ್ತಿರುವ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೀವು ಕೂಡ ಈ ನವ ದಂಪತಿಗಳಿಗೆ ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಬಹುದಾಗಿದೆ.

You might also like

Comments are closed.