ಐಂದ್ರಿತಾ ರೇ ಅವರು ಒಂದು ಸಮಯದಲ್ಲಿ ಎಲ್ಲಾ ಕಾಲೇಜು ಹುಡುಗರ ಕ್ರಶ್ ಆಗಿದ್ದರು. ಸಿನಿಮಾಗಳಲ್ಲಿ ಇವರು ಅಭಿನಯಿಸುತ್ತಿದ್ದ ಆ ಮ್ಯಾನರಿಸಂ, ಇವರ ಬ್ಯೂಟಿಫುಲ್ ಫೇಸ್ ಮತ್ತು ಮುದ್ದಾದ ನಗುವಿನಿಂದ ಇಡೀ ಕರ್ನಾಟಕದ ಮನ ಗೆದ್ದವರು. ಐಂದ್ರಿತ ರೆ ಜೊತೆ ಹೀರೋಗಳಾದ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಹಾಗೂ ದುನಿಯಾ ವಿಜಯ್ ಕಾಂಬಿನೇಷನ್ ಸಿನಿಮಾ ಬಹಳ ಹಿಟ್ ಆಗುತ್ತಿತ್ತು.
ಇವರು ಮಾತ್ರ ಅಲ್ಲದೆ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ಹ್ಯಾಟ್ರಿಕ್ ಹೀರೋ ಶಿವಣ್ಣ ಇವರ ಸಿನಿಮಾಗಳಲ್ಲೂ ಕೂಡ ನಾಯಕನಟಿ ಆಗಿ ಕಾಣಿಸಿಕೊಂಡಿದ್ದ ಇವರು ಮೆರವಣಿಗೆ, ಮನಸಾರೆ, ಜಂಗ್ಲಿ, ಭಜರಂಗಿ, ವೀರ ಪರಂಪರೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಆದರೆ ಮದುವೆ ಆದ ಬಳಿಕ ಕನ್ನಡ ಚಿತ್ರಗಳಲ್ಲಿ ಕಡಿಮೆ ಕಾಣಿಸಿಕೊಂಡಿದ್ದಾರೆ
ಈ ಬಗ್ಗೆ ಫಿಲ್ಮಿ ಬೀಟ್ ಎನ್ನುವ ಯೂಟ್ಯೂಬ್ ಚಾನೆಲ್ ಸಂದರ್ಶನಕಾರರು ಪ್ರಶ್ನೆ ಕೇಳಿದಾಗ ಐಂದ್ರಿತಾ ರೆ ಅವರು ಕೊಟ್ಟ ಉತ್ತರ ಹೀಗಿತ್ತು. ಮೊದಲಿಗೆ ತಿಮ್ಮಯ್ಯ ಮತ್ತು ತಿಮ್ಮಯ್ಯ ಎನ್ನುವ ಸಿನಿಮಾ ಮೂಲಕ ದಿನಗಳಾದ ಬಳಿಕ ಆಂಡಿ ಹಾಗೂ ದಿಗ್ಗಿ ಅವರ ಜೋಡಿಯಲ್ಲಿ ತೆರೆ ಮೇಲೆ ಬರುತ್ತಿದ್ದಾರೆ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ದಿಗಂತ್, ಅನಂತನಾಗ್ ಮತ್ತು ಐಂದ್ರಿತಾ ರೆ ಇರಲಿದ್ದು ಇದೊಂದು ಕೌಟುಂಬಿಕ ಚಿತ್ರ ಆಗಿದೆ.
ಜೂನಿಯರ್ ತಿಮ್ಮಯ್ಯ ಹಾಗೂ ಸೀನಿಯರ್ ತಿಮ್ಮಯ್ಯರಾಗಿ ಅನಂತನ ಹಾಗೂ ದಿಗಂತ್ ನಡುವೆ ಜಗಳ ಬಂದಾಗ ಅವರಿಬ್ಬರ ಸೇರಿಸುವ ಸೇತುವೆ ಆಗಿ ಐಂದ್ರಿತರೆ ಬರಲಿದ್ದಾರಂತೆ. ಈ ರೀತಿ ಎಂಟರ್ಟೈನ್ಮೆಂಟ್ ಜೊತೆಗೆ ಒಂದು ಸೆನ್ಸಿಬಲ್ ಸ್ಟೋರಿಯನ್ನು ಕನ್ನಡದಲ್ಲಿ ಹೇಳಲು ಬರುತ್ತಿರುವ ತಿಮ್ಮಯ್ಯ ವರ್ಸಸ್ ತಿಮ್ಮಯ್ಯ ಸಿನಿಮಾದ ಪ್ರಚಾರದಲ್ಲಿ ನಟಿ ಭಾಗಿಯಾಗಿದ್ದರು.
ಈ ವೇಳೆ ಐಂದ್ರಿತಾ ರೇ ಅವರನ್ನು ಇತ್ತೀಚೆಗೆ ಕನ್ನಡದಲ್ಲಿ ನಿಮ್ಮ ಸಿನಿಮಾಗಳು ಕಡಿಮೆ ಆಗುತ್ತಿದ್ದೇವೆ ಅದರಲ್ಲೂ ಮದುವೆ ಆದ ಮೇಲೆ ತೀರ ವಿರಳವಾಗಿದೆ. ಇದಕ್ಕೆ ನಿಮಗೆ ಮದುವೆ ಆಗಿರುವುದೇ ಕಾರಣ ಆಯ್ತಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು ಈಗ ಎಲ್ಲಾ ಚಿತ್ರರಂಗದಲ್ಲೂ ಕೂಡ ಮದುವೆ ಆದ ಮೇಲೆ ಸಿನಿಮಾಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ.
ನಟಿ ನಯಂತಾರ, ಸಮಂತ ಮುಂತಾದವರೆಲ್ಲ ಈಗಲೂ ಅಭಿನಯದಲ್ಲೇ ಸಕ್ರಿಯ ರಾಗಿದ್ದಾರೆ. ನಮ್ಮ ಕನ್ನಡದಲ್ಲೂ ಸಹ ಈ ರೀತಿ ಮನೋಭಾವ ಬದಲಾಗಬೇಕು ಆದರೆ ನಾನು ಚಿತ್ರದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿರುವುದು ಅಥವಾ ಇನ್ನು ಪ್ರೇಕ್ಷಕರಿಗೆ ನಾನಿನ್ನು ಕನ್ನಡ ಸಿನಿಮಾ ಮಾಡುತ್ತಿನಾ ಅಥವಾ ಮಾಡುವುದಿಲ್ಲ ಎನ್ನುವ ಗೊಂದಲ ಇದೆ. ಇದಕ್ಕೆ ಸ್ಪಷ್ಟನೆ ತಿಮ್ಮಯ್ಯ ತಿಮ್ಮಯ್ಯ ಸಿನಿಮಾ ಆದ ಬಳಿಕ ಸಿಗಲಿದೆ.
ನಾನು ಕಳೆದ ವರ್ಷಪೂರ್ತಿ ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೆ ನನ್ನ ಎರಡು ಹಿಂದಿ ಚಿತ್ರಗಳನ್ನು ಬಾಲಿವುಡ್ ಒಟಿಟಿಯಲ್ಲಿ ರಿಲೀಸ್ ಆಗಿವೆ. ಆ ನಡುವೆ ತಿಮ್ಮಯ್ಯ ಶೂಟಿಂಗ್ ಮುಗಿಸಿದ್ದೇನೆ. ನನಗೂ ಕನ್ನಡದಲ್ಲಿ ಆಕ್ಷನ್ ಓರಿಯೆಂಟೆಡ್ ಸಿನಿಮಾದಲ್ಲಿ ಮಾಡಬೇಕು ಎನ್ನುವ ಆಸೆ ಇದೆ. ನಿಜ ಹೇಳಬೇಕು ಎಂದರೆ ಒಂದು ಕಾಲದಲ್ಲಿ ನನಗೆ ವರ್ಷಕ್ಕೆ 35 ರಿಂದ 40 ಸಿನಿಮಾಗಳ ಆಫರ್ ಬರುತ್ತಿತ್ತು ಆದರೆ ಮದುವೆ ಆದ ಬಳಿಕ ಒಂದು ಸಿನಿಮಾ ಆಫರ್ ಕೂಡ ಕನ್ನಡದಲ್ಲಿ ಬರುತ್ತಿಲ್ಲ. ಹೀಗಾಗಿ ಒಳ್ಳೆ ಕಥೆ ಸಿಕ್ಕಿ ಸಮಯ ಬಂದಾಗ ಖಂಡಿತ ನಾನು ಇಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.